ಡಾ. ಶಾಂತವೀರ ಮನಗೂಳಿ ಗೋಶಾಲೆಗೆ 2 ಟ್ರ್ಯಾಲಿ ಮೇವು ದೇಣಿಗೆ

ಡಾ. ಶಾಂತವೀರ ಮನಗೂಳಿ ಗೋಶಾಲೆಗೆ 2 ಟ್ರ್ಯಾಲಿ ಮೇವು ದೇಣಿಗೆ Dr. Shantaveera Managuli donated 2 trolleys of fodder to the cowshed

ಲೋಕದರ್ಶನ ವರದಿ 

ಸಿಂದಗಿ 01: ದೇಶಿ ಹಸುಗಳನ್ನು ಸಂರಕ್ಷಣೆ ಮಾಡುವುದು ಮುಖ್ಯ ಕಾರ್ಯವಾಗಿದೆ ಎಂದು ಸಾರಂಗಮಠ-ಗಚ್ಚಿನಮಠದ ಪೀಠಾಧಿಪತಿ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಕರೆ ನೀಡಿದ್ದರು. ಈ ದಿಸೆಯಲ್ಲಿ ಎರಡು ಟ್ರ್ಯಾಲಿ ತುಂಬಿದ ಜೋಳದ ಮೇವನ್ನು ಪುರಸಭೆ ಮಾಜಿ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ, ಒಂದು ಟ್ರ್ಯಾಕ್ಟರ್ ಟ್ರ್ಯಾಲಿ ತುಂಬಿದ ಜೋಳದ ಮೇವನ್ನು ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಡಾ. ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಜಯಕುಮಾರ ವಾರದ ಸಾರಂಗಮಠದ ಗೋಶಾಲೆಗೆ ನೀಡಿದ್ದಾರೆ.   ದನ ಕರು, ತಳಿ ಆಕಳುಗಳ ಸಂರಕ್ಷಣೆ ಗೋಶಾಲೆಗೆ ಮೇವು ನೀಡಿದ ವೈದ್ಯರಿರ್ವರಿಗೂ ಮತ್ತು ಹಸಿ ಮೆಕ್ಕೆಜೋಳದ ಕಣಕಿಯನ್ನು ನೀಡಿದ ನಗರದ ಮಲಘಾಣ ರಸ್ತೆಯಲ್ಲಿನ ಎಸ್‌.ಕೆ. ಪೆಟ್ರೋಲಿಯಂ ಮಾಲೀಕ ಕರಣಕುಮಾರ ಹಾಗರಗಿ ಅವರಿಗೆ ಸಾರಂಗಮಠದ ಪೀಠಾಧಿಪತಿ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಆಶೀರ್ವದಿಸಿ ಶುಭ ಹಾರೈಸಿದ್ದಾರೆ.