ಶಿಕ್ಷಣ ಕ್ಷೇತ್ರದ ಶಕ್ತಿ ಡಾ. ಎನ್‌. ವಜ್ರಕುಮಾರ: ಡಾ. ಅಜಿತ್ ಪ್ರಸಾದ್

ಶಿಕ್ಷಣ ಕ್ಷೇತ್ರದ ಶಕ್ತಿ ಡಾ. ಎನ್‌. ವಜ್ರಕುಮಾರ: ಡಾ. ಅಜಿತ್ ಪ್ರಸಾದ್  Dr. Shakti in the field of education. N. Vajrakumara: Dr. Ajit Prasad

ಲೋಕದರ್ಶನ ವರದಿ 

  ಬೆಳಗಾವಿ 02 : ಡಾ. ಎನ್‌. ವಜ್ರಕುಮಾರ ಅವರು ಶಿಕ್ಷಣ ಕ್ಷೇತ್ರದ ಶಕ್ತಿಯಾಗಿ, ದೂರದೃಷ್ಟಿಯ ಆಡಳಿತಗಾರ ಹಾಗೂ ಸಮಾಜಮುಖಿ ಚಿಂತಕರಾಗಿ ಸಾವಿರಾರು ಜನರ ಬದುಕಿಗೆ ದಾರೀದೀಪವಾಗಿದ್ದರು ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ್ ಹೇಳಿದರು. ಡಾ. ಎನ್‌. ವಜ್ರಕುಮಾರ ಅವರ ಪುಣ್ಯಸ್ಮರಣೆಯ ನಿಮಿತ್ತ ಅವರ ಪ್ರತಿಮೆಗೆ ಮಾಲಾರೆ​‍್ಣ ಮಾಡಿ ಮಾತನಾಡಿದ ಅವರು, 1973ರಲ್ಲಿ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದು ವಿದ್ಯಾಗಿರಿಗೆ ಕಾಲಿಟ್ಟ ಡಾ. ವಜ್ರಕುಮಾರ ಅವರು ತಮ್ಮ ಕಾರ್ಯನಿಷ್ಠೆಯಿಂದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಶ್ರಮಿಸಿದರು ಎಂದರು. ಅವರ ದೂರದೃಷ್ಟಿಯ ಫಲವಾಗಿ ಇಂದು ಜೆಎಸ್‌ಎಸ್ ಸಂಸ್ಥೆಯಡಿ ಕೆಜಿಯಿಂದ ಪಿಜಿವರೆಗೆ 25 ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು,

22 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಶಿಸ್ತು, ಸಂಸ್ಕಾರ, ಮಾನವೀಯತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದು ಅವರ ಆಶಯವಾಗಿತ್ತು ಎಂದು ತಿಳಿಸಿದರು. ಡಾ. ವಜ್ರಕುಮಾರ ಅವರು ಅತ್ಯಂತ ಸರಳ, ಸೌಜನ್ಯಪೂರ್ಣ ಹಾಗೂ ಮಾನವೀಯ ಗುಣಗಳನ್ನು ಹೊಂದಿದ್ದ ಉತ್ತಮ ಆಡಳಿತಗಾರರಾಗಿದ್ದರು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶಿಕ್ಷಣವನ್ನು ಸಮಾಜದ ಅಭಿವೃದ್ಧಿಗೆ ಬಳಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಅರಿಹಂತ ಪ್ರಸಾದ್, ಮಹಾವೀರ ಉಪಾಧ್ಯೆ ಸೇರಿದಂತೆ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.