ಡಾ. ರಾಜಶ್ರೀ ತಿರವಿರವರ ಸಂಶೋಧನಾ ಗ್ರಂಥ ಲೋಕಾರ್ಪಣೆ

ಲೋಕದರ್ಶನ ವರದಿ

ಬೆಳಗಾವಿ 17:  ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಮರಾಠಾ ಮಂಡಳ ಕಾಲೇಜ ಖಾನಾಪುರದ ಪ್ರಾಧ್ಯಾಪಕ ಡಾ. ರಾಜಶ್ರೀ ತಿರವಿರ ರವರ "ಹಿಂದಿ ಕೇ ನಾಟ್ಯ ಕಾವ್ಯೊಂಮೇ ಮಿಥಕ" ಎಂಬ ವಿಷಯದ ಮೇಲಿನ ಪಿ.ಎಚ್.ಡಿ. ಸಂಶೋಧನಾ ಪ್ರಬಂಧವನ್ನು ಆರ್ಪಿಡಿ.ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಆರ್.ಜೆ. ಪೋವಾರ ಮತ್ತು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಹಿಂದಿ ಪ್ರಾಧ್ಯಾಪಕ ಸಂಘದ ಅಧ್ಯಕ್ಷ ಡಾ. ಎಸ್.ಟಿ.ಮೇರವಾಡೆ  ಹಿಂದಿ ಪ್ರಾಧ್ಯಾಪಕ ಸಂಘದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು. ನೆಹರು ನಗರದ ಆಟ್ರ್ಸ, ಕಾಮರ್ಸ, ಸೈಯನ್ಸ ಆಫ್ ಮರಾಠಾ ಮಂಡಳದಲ್ಲಿ ಈ ಕಾರ್ಯಕ್ರಮವು ಜರುಗಿತು. 

ಕಾರ್ಯಕ್ರಮದ ಸೂತ್ರಸಂಚಲನ, ಸ್ವಗತ, ಹಾಗೂ ಅತಿಥಿ ಪರಿಚಯವನ್ನು ವಿ. ವಿ. ಪಾಟಿಲ ನೆರವೇರಿಸಿದರು. ಡಾ. ಎ. ಎಸ್. ಸಿದ್ದಿಕಿ ಸ್ವಾಗತ ಗೀತೆಯನ್ನು ಹಾಡಿದರು. ಪುಸ್ತಕದ ಪರಿಚಯವನ್ನು ಡಾ. ಎಸ್.ಜೆ.ಜಾಗೀರದಾರ ಮಾಡಿಕೊಟ್ಟರು. 

ಈ ಪುಸ್ತಕವು ಪ್ರಾಧ್ಯಾಪಕ, ವಿದ್ಯಾಥರ್ಿ ಹಾಗೂ ಶಿಕ್ಷಕರಿಗೆ ಬಹಳಷ್ಟು ಉಪಯುಕ್ತವಾಗಿದೆ ಎಂದು ಅಭಿಪ್ರಾಯ ಪಟ್ಟರು. ಲೇಖಕ ಡಾ. ರಾಜಶ್ರೀ ತಿರವಿರ ಪುಸ್ತಕದ ಕುರಿತು ಮಾತನಾಡಿ ವಂದನಾರ್ಪಣೆಯನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಆಧೀನ ಕಾರ್ಯ ನಿರ್ವಹಿಸುವ ಬೆಳಗಾವಿ, ವಿಜಯಪುರ, ಹಾಗೂ ಬಾಗಲಕೋಟೆಯ ಹಿಂದಿ ಪ್ರಾಧ್ಯಾಪಕರು ಭಾಗವಹಿಸಿದ್ದರು.