ಲೋಕದರ್ಶನ ವರದಿ
ಡಾ. ಪ್ರಕಾಶ ಬೆಲ್ಲದ ಜಲ ಯೋಗದಲ್ಲಿ ವಿಶ್ವ ದಾಖಲೆ
ಬೆಳಗಾವಿ 17: ಜಲ ಯೋಗವು ಶಾರೀರಿಕ ಹಾಗೂ ಮಾನಸಿಕ ಆರೈಕೆಗೆ ಅತ್ಯಂತ ಉಪಯುಕ್ತವಾಗಿದೆ. ಎಲ್ಲ ವಯಸ್ಸಿನ ಜನರು ಮಾಡಬಹುದಾಗಿದೆ ಎಂದು ಕಬ್ಬುರಿನ ಜಲ ಯೋಗ ತಜ್ಞ, ವಿಶ್ವದಾಖಲೆ ವೀರ ಡಾ. ಪ್ರಕಾಶ ಬೆಲ್ಲದ ಅಭಿಪ್ರಾಯ ಪಟ್ಟಿದ್ದಾರೆ.
ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರಋಢಧ ಆಯೋಜಿಸಿದ್ದ ವಿಶೇಷ ಸಂದರ್ಶನದಲ್ಲಿ ಮಾತನಾಡಿದರು.
ಇತ್ತಿಚಿನ ದಿನಗಳಲ್ಲಿ ಬೊಜ್ಜು, ಹೃದಯ ವಿಕಾರಗಳು, ಮಾನಸಿಕ ಸ್ವಾಸ್ಥ್ಯ ಸಾಮಾನ್ಯವಾಗುತ್ತಿದೆ. ಭಾರತೀಯ ಸಾಂಸ್ಕೃತಿಕ ಆಚರಣೆ ಮರೆಮಾಚುತ್ತಿದ್ದು, ರೋಗಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದರು.
ಮಕ್ಕಳು ಮತ್ತು ಇಂದಿನ ಯುವಜನತೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ನಿಯಮಿತ ಯೋಗ, ಸಮತೋಲಿತ ಆಹಾರ ಕ್ರಮ, ಶೃದ್ದಾಕಾರ್ಯ ಪಾಲಿಸಬೇಕೆಂದರು. ಶಿಕ್ಷಕ ಹಾಗೂ ಸಾಹಿತಿ ಮಹೇಶ್ ಗೊಗೊಜಿ ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕರಾದ ಎಮ್.ಎಸ್.ಚೌಗಲಾ ಉಪಸ್ಥಿತರಿದ್ದರು. ಆರ್.ಜೆ.ಚೇತನ್ ಹಾಗೂ ಆರ್.ಜೆ.ಮೀರಾ ಸಂದರ್ಶನ ನಿರ್ವಹಿಸಿದರು.