ಡೋಣಿನದಿಯಲ್ಲಿ ಬೈಕ್ ಸಮೇತ ಕೊಚ್ಚಿ ಹೋದ ಯುವಕ ಡಾ.ಪ್ರಭುಗೌಡ ಭೇಟಿ
Dr. Prabhugowda visits a young man who was swept away with his bike in the Doni River
ತಾಳಿಕೋಟಿ 26: ಪಟ್ಟಣದ ಸಮೀಪ ಹರಿಯುವ ಡೋಣಿ ನದಿಯ ಪ್ರವಾಹದಿಂದಾಗಿ ನೀರಿನಲ್ಲಿ ಬೈಕ್ ಸವಾರ ಸಂತೋಷ ಹಡಪದ ಕೊಚ್ಚಿ ಹೋಗಿರುವ ಹಿನ್ನಲೆಯಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ ಅವರು ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರಿಂದ ಘಟನೆಯ ವಿವರವನ್ನು ಪಡೆದು ಕೊಂಡು ನಂತರ ಮಾತನಾಡಿದ ಅವರು ಇದೊಂದು ಅತ್ಯಂತ ದುಃಖದಾಯಕವಾದ ಘಟನೆ ವಡವಡಗಿ ಗ್ರಾಮದ ಬಡ ಯುವಕ ಸಂತೋಷ್ ಹಡಪದ ಎಂಬವನು ನೀರಿನಲ್ಲಿ ಕೊಚ್ಚಿ ಹೋಗಿದ್ದು ಇಲ್ಲಿವರೆಗೆ ಸಿಕ್ಕಿಲ್ಲ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ. ಆದಷ್ಟು ಬೇಗ ಸಿಗಲಿ ಎಂಬುದು ನನ್ನ ಪ್ರಾರ್ಥನೆಯಾಗಿದೆ. ಇಬ್ಬರು ಬೈಕ್ ಸವಾರರಲ್ಲಿ ಒಬ್ಬರಾದ ಮಹಾಂತೇಶ ಹೊಸಗೌಡರ ಸುರಕ್ಷಿತವಾಗಿ ದಡ ತಲುಪಿದ್ದಾರೆ, ಆದರೂ ಒಂದು ಅಮೂಲ್ಯವಾದ ಜೀವ ಹೋಗಿದೆ, ನಾನು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ ಅವರು ಸಾಧ್ಯವಿದ್ದಷ್ಟು ಈ ಕುಟುಂಬಕ್ಕೆ ಪರಿಹಾರ ನೀಡಲು ಕ್ರಮ ವಹಿಸಬೇಕು ಜೊತೆಗೆ ಹೆಚ್ಚಿನ ಪರಿಹಾರ ಸಿಗುವಂತಾಗಲು ಮಾನ್ಯ ಮುಖ್ಯಮಂತ್ರಿಗಳಿಗೂ ಮನವಿ ಮಾಡಿಕೊಳ್ಳಬೇಕು. ಈ ವಿಷಯದ ಕುರಿತು ನಾನು ಕ್ಷೇತ್ರದ ಶಾಸಕರಾದ ಅಪ್ಪಾಜಿ ನಾಡಗೌಡರೊಂದಿಗೆ ಮಾತನಾಡುತ್ತೇನೆ. ಈ ಸೇತುವೆ ಸುರಕ್ಷತೆಗಾಗಿ ಎರಡೂ ಬದಿಯಲ್ಲಿ ಡ್ರಿಲ್ ಹಾಕಬೇಕು ಇದನ್ನು ನಾನು ಅಧಿಕಾರಿಗಳಿಗೆ ತಿಳಿಸಿದ್ದೇನೆ, ಸಾರ್ವಜನಿಕರೂ ತಮ್ಮ ಸುರಕ್ಷತೆಯ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು, ಜೀವ ಅಮೂಲ್ಯವಾದದ್ದು ಅದರ ಎಚ್ಚರ ನಮಗಿರಬೇಕು ಯಾರೂ ಭಂಡ ಧೈರ್ಯ ತೋರಬಾರದು ಎಂದು ತಿಳಿಸಿದರು.
ಈ ಸಮಯದಲ್ಲಿ ತಹಶೀಲ್ದಾರ ಡಾ.ವಿನಯಾ ಹೂಗಾರ, ಪಿಎಸ್‌ಐ ಜ್ಯೋತಿ ಖೋತ್, ಮುಖಂಡ ಮಂಜುನಾಥ್ ಹೊಸಗೌಡರ, ಸುರೇಶಕುಮಾರ ಇಂಗಳಗಿ,ನಬಿ ಕೊಂಡಗೂಳಿ,ಸಂತೋಷ ಹಡಪದ ಕುಟುಂಬದ ಸದಸ್ಯರು, ರಕ್ಷಣಾ ತಂಡದವರು, ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 