ಡಾ. ಪದ್ಮಾವತಿ ಮನೋಹರ ಪತ್ತಾರ ದಂಪತಿಗಳ ದಾನಭಾವನೆ: ಬಗಾಡೆ
ಶಿಗ್ಗಾವಿ 19 :ನಾಮದೇವ ಸಿಂಪಿ ಸಮಾಜದ ಅಭಿವೃದ್ಧಿಗಾಗಿ ಸಮಾಜಕ್ಕೆ ಉಪಯುಕ್ತವಾದ ವಿವಿಧ ಪಾತ್ರೆಗಳನ್ನು ದಾನವಾಗಿ ನೀಡಿ ಮಹತ್ತರ ಸೇವೆಯನ್ನು ಪಟ್ಟಣದ ಜನಪ್ರೀಯ ಸ್ತ್ರೀ ರೋಗ ತಜ್ಞ ವೈದ್ಯೆ ಡಾ. ಪದ್ಮಾವತಿ ಮನೋಹರ ಪತ್ತಾರ ದಂಪತಿಗಳು ಸಲ್ಲಿಸಿದ್ದಾರೆ ಎಂದು ಸಿಂಪಿ ಸಮಾಜದ ಅಧ್ಯಕ್ಷ ಕೇದಾರ್ಪ ಬಗಾಡೆ ಹೇಳಿದರು.ಪಟ್ಟಣದ ವಿಠೋಬಾ ದೇವಸ್ಥಾನದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಮಾಜದ ಒಗ್ಗೂಡಿಕೆ ಹಾಗೂ ಸೇವಾ ಮನೋಭಾವ ಇಂತಹ ಹೃದಯ ಸ್ಪರ್ಶಿ ಕೊಡುಗೆಗಳ ಮೂಲಕ ಮತ್ತಷ್ಟು ಬಲಪಡುತ್ತದೆ. ಡಾ. ಪದ್ಮಾವತಿ ಮನೋಹರ ಪತ್ತಾರ ದಂಪತಿಗಳ ದಾನಭಾವನೆ ನಮ್ಮ ಸಮಾಜದ ಎಲ್ಲ ಸದಸ್ಯರಿಗೆ ಸ್ಪೂರ್ತಿದಾಯಕವಾಗಿದೆ. ಸಮಾಜದ ಶ್ರೇಯೋಭಿವೃದ್ಧಿಗೆ ಅವರು ನೀಡಿದ ಈ ಮಹಾನ್ ಕೊಡುಗೆಗೆ ನಾವು ಸದಾಕೃತಜ್ಞರಾಗಿರುತ್ತೇವೆ ಎಂದು ಅಭಿಪ್ರಾಯ ಪಟ್ಟರು.ಸಮಾಜದ ಹಿರಿಯರು ಹಾಗೂ ಸದಸ್ಯರು ಸೇರಿಡಾ. ಪದ್ಮಾವತಿ ಮನೋಹರ ಪತ್ತಾರ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿದ ಡಾ. ಪದ್ಮಾವತಿನಾನು ಈ ಸಮಾಜದ ಅಭಿವೃದ್ಧಿಗೆ ನನ್ನಿಂದ ಸಾಧ್ಯವಾದ ಸೇವೆ ಮಾಡಿದ್ದೇನೆ ದೇವರ ಸೇವೆಯಲ್ಲಿ ನನ್ನ ಕೊಡುಗೆ ನಿರಂತರವಾಗಲಿದೆಎಂದರು. ಈ ಸಂದರ್ಭದಲ್ಲಿ ಸುರೇಶ್ ಮೂಳೆ,ಕೃಷ್ಣಾ ಮೂಳೆ, ಏಕನಾಥ್ ಮಾಳವಾದೆ, ಮುರಳೀಧರ್ ಮಾಳವಾದೆ, ವಿನಾಯಕ್ ಗಂಜಿಗಟ್ಟಿ, ವಿನೋಭಾ ಮಾಳವಾದೆ, ಅಮಿತ್ ಗಂಜಿಗಟ್ಟಿ, ಪರಶುರಾಮ ಮಾಳವಾದೆ,ನಾರಾಯಣ್ ಬಗಾಡೆ,ದಾಮೋದರ್ ಮಾಳವಾದೆ,ತುಕಾರಾಂ ಅಂಚಲಕರ ,ನಾಗರಾಜ್ ಗಂಜಿಗಟ್ಟಿ, ಪ್ರಕಾಶ್ ಮಿರಜಕರ್, ಮಂಜುನಾಥ್‌ಗಂಜಿಗಟ್ಟಿ,ರೂಪಾ ಬಗಾಡೆ, ಮಮತಾ ಮಾಳವಾದೆ,ಅನುರಾಧ ಗಂಜಿಗಟ್ಟಿ, ಗೀತಾ ಬಗಾಡೆ, ರಂಜನಾಓಂಧಕರ, ರೇಣುಕಾ ಗಂಜಿಗಟ್ಟಿ ಸೇರಿದಂತೆ ಸಮಾಜದ ಸದಸ್ಯರು ಉಪಸ್ಥಿತರಿದ್ದರು. ಪ್ರಕಾಶ ಓಂಧಕರ ಕಾರ್ಯಕ್ರಮ ನಿರ್ವಹಿಸಿದರು.