ವಿಜಯಪುರ 27: ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಭಾರತ ದೇಶ ಕಂಡಂತ ಶ್ರೇಷ್ಠ ಆರ್ಥಿಕ ತಜ್ಞರು ಹಾಗೂ ಮೊದಲ ಸಿಖ್ ಪ್ರಧಾನಿ, ನೆಹರು ಅವರ ನಂತರ ದೀರ್ಘಕಾಲ ಪ್ರಧಾನಿ ಹುದ್ದೆಯನ್ನಲಂಕರಿಸಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದ, ದೇಶದ ಆರ್ಥಿಕ ಮಟ್ಟವನ್ನು ಯಶಸ್ಸಿನೆಡೆಗೆ ಕೊಂಡೊಯ್ದ ದೇಶದ ಹೆಮ್ಮೆಯ ಮಾಜಿ ಪ್ರಧಾನ ಮಂತ್ರಿಗಳಾದ ಡಾಽಽ ಮನಮೋಹನ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾಽಽ ಎಸ್ ಎಂ ಸಜ್ಜನ ಅವರು ಮಾತನಾಡಿ ಮನಮೋಹನ ಸಿಂಗ್ ಅವರು ಹಾಕಿಕೊಟ್ಟಂತ ಆರ್ಥಿಕ ನೀತಿ , ಆದರ್ಶ ಮತ್ತು ಮೌಲ್ಯಗಳು ಇವತ್ತಿನ ಭಾರತ ಮತ್ತು ಭಾರತದ ಯುವ ಜನತೆಗೆ ಸ್ಫೂರ್ತಿದಾಯಕವಾಗಿದ್ದು ಅವರ ಜೀವನದ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದು ತಿಳಿಸುತ್ತಾ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದರು. ಹಾಗೇ ಬಿ.ಜಿ ಸಜ್ಜನ ಗುರುಗಳು ಅವರ ಸಾಧನೆಗಳ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು,
ಈ ಸಮಯದಲ್ಲಿ ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯ ಗುರುಗಳಾದ
ಬಿ.ಜಿ.ಸಜ್ಜನ, ಆರ್.ಎಸ್.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣದಳ್ಳಿ, ಪಿಯುಕಾಲೇಜ್ ಪ್ರಾಚಾರ್ಯ ಕಿಶೋರಗೌಡ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಜಿ.ಎನ್.ಪಾಟೀಲ, ಸರ್ವ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿರೂಪಣೆಯನ್ನು ಕಲ್ಮೇಶ ಸರ್ ನಡೆಸಿಕೊಟ್ಟರು.