ಡಾ. ಮೈತ್ರೇಯಿಣಿ ಗುರುನಗೌಡ ಗದಿಗೆಪ್ಪಗೌಡರರಿಗೆ “ಗವಿಸಿದ್ಧ ಎನ್ ಬಳ್ಳಾರಿ” ಪ್ರಶಸ್ತಿ
Dr. Maitreyini Gurunagouda Gadigeppagoudar receives “Gavisiddha N Bellary” award
ಕೊಪ್ಪಳ/ಬೆಳಗಾವಿ 11: ಕೊಪ್ಪಳದ ಬಂಡಾಯ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ ಮತ್ತು ಶಿಕ್ಷಣ ಸಂಸ್ಥೆ (ರಿ) ಘೋಷಿಸಿರುವ 2025ನೇ ಸಾಲಿನ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿಗೆ ಬೆಳಗಾವಿಯ ಡಾ. ಮೈತ್ರೇಯಿಣಿ ಗುರುನಗೌಡ ಗದಿಗೆಪ್ಪಗೌಡರರ “ನುಂಗಿದಷ್ಟು ನಂಜು” (ಸ್ತ್ರೀವಾದಿ ಓದು) ಕವನಗಳ ಹಸ್ತಪ್ರತಿ ಸಂಕಲನ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಪ್ರತಿಷ್ಠಿತ ಕಾವ್ಯ ಪ್ರಶಸ್ತಿಗಳಲ್ಲಿ ಕೊಪ್ಪಳದ ಗವಿಸಿದ್ಧ ಬಳ್ಳಾರಿ ಕಾವ್ಯ ಪ್ರಶಸ್ತಿ ಕಳೆದ ದಶಕಗಳಿಂದ ರಾಜ್ಯಮಟ್ಟದಲ್ಲಿ ಅತ್ಯುತ್ತಮ ಹಸ್ತಪ್ರತಿಗಳಿಗೆ ಪ್ರಶಸ್ತಿ ನೀಡಿ,ಅನೇಕ ಕವಿಗಳನ್ನು ಮುನ್ನಲೆಗೆ ತಂದ ಕಾರ್ಯ ಶ್ಲಾಘನೀಯ. ನಾಡಿನ ಹಿರಿ ಕಿರಿಯರ ಕವಿತೆಗಳನ್ನು ಕವಿ ಲೋಕಕ್ಕೆ ಪರಿಚಯಿಸಿದ ಈ ಪ್ರತಿಷ್ಠಿತ ಪ್ರತಿಷ್ಠಾನದ ಸಾಹಿತ್ಯ ಸೇವೆ ಅನುಪಮವಾದುದು.
2025 ನೇ ಸಾಲಿನ ಈ ಪ್ರಶಸ್ತಿಗಾಗಿ 61 ಕವನ ಸಂಕಲನಗಳು ಸ್ಪರ್ಧೆಗೆ ಬಂದಿದ್ದವು .ಆ ಹಸ್ತಪ್ರತಿಗಳ ಪೈಕಿ ಭಾಷೆಯ ಗಟ್ಟಿತನ, ನಿರೂಪಣೆಯ ವಿಭಿನ್ನ ಶೈಲಿ, ಅಭಿವ್ಯಕ್ತಿಯ ನಾಟಕೀಯತೆ, ಚಿಂತನಾರ್ಹ ವೈಚಾರಿಕತೆ ಮತ್ತು ಜೀವಂತ- ಜ್ವಲಂತ ಸಮಸ್ಯೆಗಳಿಗೆ ಕವಿತ್ವದ ಮುಖಾಮುಖಿ, ಸ್ತ್ರೀವಾದಿ ವೈಚಾರಿಕತೆ ಹಾಗೂ ಸಾಮಾಜಿಕ ಕಾಳಜಿಯ ಅಭಿವ್ಯಕ್ತಿಯ ಆಳತೆಗೆ ಈ ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ. ಪ್ರತಿಯೊಬ್ಬ ವಿಜೇತರಿಗೆ ?6,000 ನಗದು ಹಾಗೂ ಸ್ಮರಣಿಕೆಯನ್ನು ನವೆಂಬರ್‌ನಲ್ಲಿ ಕೊಪ್ಪಳದಲ್ಲಿ ನಡೆಯಲಿರುವ ಗವಿಸಿದ್ಧ ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಮಹೇಶ ಬಳ್ಳಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ಮೈತ್ರೇಯಿಣಿ: ಸಾಹಿತ್ಯ, ಸಂಶೋಧನೆ ಮತ್ತು ಮಹಿಳಾ ಸಮಾನತೆಗಾಗಿ ಶ್ರಮಿಸಿದ ಹೆಮ್ಮೆಯ ಕವಯತ್ರಿ ಹಾಗೂ ಅಪ್ರತಿಮ ವಾಗ್ಮಿ ಡಾ. ಮೈತ್ರೇಯಿಣಿ ಗುರುನಗೌಡ ಗದಿಗೆಪ್ಪಗೌಡರ ಅವರು ಪ್ರಖ್ಯಾತ ಕನ್ನಡ ಪ್ರಾಧ್ಯಾಪಕರು , ಶರಣ ಸಾಹಿತಿ, ಸಂಸ್ಕೃತಿ ಚಿಂತಕಿ, ಸೃಜನಶೀಲ ಕಥೆಗಾರ್ತಿ, ಸ್ತ್ರೀವಾದಿ ವಿಮರ್ಶಕಿ, ಸಂಶೋಧಕಿಯಾಗಿದ್ದಾರೆ. ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ, ವಿವಿಯ ಪ್ರಸಾರಾಂಗದ ಪ್ರಭಾರಿ ನಿರ್ದೇಶಕಿಯಾಗಿ 11 ವರ್ಷಗಳ ಸೇವೆ ಸಲ್ಲಿಸಿ, ಸದ್ಯ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೃಜನಶೀಲ ಕವಿಯತ್ರಿಯೂ ಆದ ಅವರ ಆಳವಾಗಿ ಓದಿನ ಮತ್ತು ವೈಚಾರಿಕತೆಯ ಅನುಭವವು ಇವರನ್ನು ಕನ್ನಡ ಭಾಷಾ ಶಕ್ತಿಯ ವಿಸ್ತೃತ ಕ್ಷೇತ್ರಕ್ಕೆ ಪರಿಚಯಿಸಿದೆ. ಎಂ.ಡಿ. ಗೋಗೇರಿ ಸಮಗ್ರ ಸಾಹಿತ್ಯದ ಕುರಿತು ಪಿಎಚ್‌ಡಿ ಸಂಶೋಧನೆ ಮಾಡಿದ್ದಾರೆ.ಅವರು ಹಳಗನ್ನಡ, ವಚನ ಸಾಹಿತ್ಯ, ಜಾನಪದ ಸಾಹಿತ್ಯ, ಆಧುನಿಕ ಮಹಿಳಾ ಸಾಹಿತ್ಯ ಹಾಗೂ ಭಾಷಾಶಾಸ್ತ್ರದ ಓದಾರ್ಯವನ್ನು ತಮ್ಮ ಕೃತಿಗಳಲ್ಲಿ ಜೀವಂತವಾಗಿ ಪ್ರತಿಬಿಂಬಿಸಿದ್ದಾರೆ. “ನಮ್ಮ ಮಹಿಳೆ ನಮ್ಮ ಹೆಮ್ಮೆ”, “ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ” ಮುಂತಾದ ಪಠ್ಯಪುಸ್ತಕಗಳ ಸಂಪಾದನೆ ಮಾಡಿದ್ದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪದವಿ ತರಗತಿಗೆ ಅವಶ್ಯಕ ಕನ್ನಡ ಪಠ್ಯವಾಗಿವೆ.
ಕವನ ಸಂಕಲನಗಳಲ್ಲಿ “ಗರಿಕೆ ಅಲಗಿನ ಇಬ್ಬನಿ”, “ನೀರು ಕಚ್ಚಿದ ಕೆಂಡ” (ಹೆಣ್ತನದ ಅಭಿವ್ಯಕ್ತಿ “ನುಂಗಿದಷ್ಟು ನಂಜು”,(ಹಸ್ತಪ್ರತಿ) ಇತ್ಯಾದಿ ಜನಮಾನಸದಲ್ಲಿ ಗುರುತಿಸಿಕೊಂಡಿವೆ. ಅವರು ಸಂಪಾದಿಸಿದ , ಕನ್ನಡ ಸಾಹಿತ್ಯ ವಿಭಿನ್ನ ಆಲೋಚನೆಗಳು, ಉರಿಯೊಡಲು, ಜೀವನ್ಮುಖಿ, ಸಿರಿಗಂಧ, ಧರೆಗಿಳಿದ ಶರಣೆಯರು, ಕಾವ್ಯದರಮನೆಯೊಳಗೆ ಮುಂತಾದ ಕೃತಿಗಳು ಸಾಹಿತ್ಯ ಪ್ರಪಂಚದ ಮೌಲ್ಯವರ್ಧನೆ ಮಾಡಿವೆ. ಅವರ ಅಚ್ಚಿನಲ್ಲಿ ಇರುವ ಪ್ರಮುಖ ಕೃತಿಗಳಲ್ಲಿ “ಸಾವಿನ ಮನೆಯ ಮಹಡಿಯ ಮೇಲೆ”, “ಎದೆಯ ಅಳತೆಯ ರವಿಕೆ”, “ತಿಟ್ಹತ್ತಿ ತಿರುಗಿ”, “ಮನಕರಗದವರಲ್ಲಿ”, ಮಕ್ಕಳ ಸಾಹಿತ್ಯ ಕೃತಿ “ದೇವಲೋಕದ ಸರಕು” ಸೇರಿವೆ.
1000ಕ್ಕೂ ಹೆಚ್ಚು ಉಪನ್ಯಾಸಗಳು, 100ಕ್ಕೂ ಅಧಿಕ ವಿಮರ್ಶಾ ಮತ್ತು ಸಂಶೋಧನಾ ಲೇಖನಗಳು ಪ್ರಕಟವಾಗಿದ್ದು, ಇವರ ವಾಙ್ಮಯ ಸೇವೆಯನ್ನು ಹಿರಿದಾಗಿಸಿದೆ. ಕೈಗಾ ರಾಜ್ಯೋತ್ಸವ ಕಾವ್ಯ ಪ್ರಶಸ್ತಿ, ಬೇಂದ್ರೆ ನುಡಿಸಿರಿ, ಬಸವರಾಜ ಕಟ್ಟಿಮನಿ ಸಾಹಿತ್ಯ ಪ್ರಶಸ್ತಿ. ಕಿತ್ತೂರು ಚನ್ನಮ್ಮ ಪ್ರಶಸ್ತಿ . ಜಿಲ್ಲಾಡಾಳಿತ, ಜಿಲ್ಲಾ ಪಂಚಾಯತ ಹಲಗಾ, ಉತ್ತಮ ಮಹಿಳಾ ಪುರಸ್ಕಾರ.ಸಿದ್ದಶ್ರೀ, ಅಂತರರಾಷ್ಟ್ರೀಯ ಬಸವ ಭೂಷಣ, ಬಸವ ಶೀರೋಮಣಿ, ಬಸವ ಸಿರಿ, ಗೋವಿಂದ ಪೈ ಕಾವ್ಯ ಪ್ರಶಸ್ತಿ, ನಿರುಪಮಾ ಕಥಾ ಪ್ರಶಸ್ತಿ, ಮ.ಗು. ಘಿವಾರಿ ಸಾಹಿತ್ಯ ಪ್ರಶಸ್ತಿ ,ಮಿರ್ಜಿ ಅಣ್ಣಾರಾಯ್ ಕಾವ್ಯ ಪ್ರಶಸ್ತಿ,ಸುವರ್ಣ ಕರ್ನಾಟಕ ಕನ್ನಡ ರತ್ನ ,ಸಮಾಜಮುಖಿ ರಾಜ್ಯಮಟ್ಟದ ಕಥಾಸ್ಪರ್ಧೆ ಸಮಾಧಾನಕರ ಬಹುಮಾನ ,ಪಂಜು ರಾಜ್ಯಮಟ್ಟದ ಕಾವ್ಯ ಸ್ಪರ್ಧೆ ಸಮಾಧಾನಕರ ಬಹುಮಾನವು ಸೇರಿ 25ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಅಖಿಲಭಾರತ ಕವಿಯತ್ರಿಯರ ಸಮ್ಮೇಳನದ ಆಜೀವ ಸದಸ್ಯರಾಗಿ ಅವರು ರಷ್ಯಾ .ಸ್ವಿಟ್ಜಲ್ಯಾಂರ್ಡ್ . ಇಟಲಿ, ಆಸ್ಟ್ರೀಯಾ.ವಾಡೂಜ್ .ಫ್ರಾನ್ಸ,ಇಟಲಿ,ಜರ್ಮನ. ಇಂಗ್ಲೆಂಡ್, ರೋಮ್,ವ್ಯಾಟಿಕನ್ ಮುಂತಾದ ದೇಶಗಳಲ್ಲಿ ಅಂತಾರಾಷ್ಟ್ರೀಯ ಕವಿಯತ್ರಿಯರ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ ಈ ಮೂಲಕ ಅಂತರರಾಷ್ಟ್ರೀಯ ಕವಿಯತ್ರಿ ಸಮ್ಮೇಳನಗಳಲ್ಲಿ ಪಾಲ್ಗೊಂಡು ಭಾರತದ ಕವಿತ್ವವನ್ನು ಜಾಗತಿಕ ವೇದಿಕೆಯಲ್ಲಿ ಪ್ರಚಾರ ಮಾಡಿದ್ದಾರೆ. 2018ರ ಹುಬ್ಬಳ್ಳಿಯ ಅಖಿಲ ಕರ್ನಾಟಕ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೆಯಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಆಧುನಿಕ ಸ್ತ್ರೀವಾದಿ ಅಧ್ಯಯನ ಹಾಗೂ ಜನಪದ ಸ್ತ್ರೀವಾದಿ ಸಂವೇದನೆಗಳನ್ನು ತಮ್ಮ ಬರಹಗಳಲ್ಲಿ ವಿಮರ್ಶೆಗಳ ಮೂಲಕ ಅಭಿವ್ಯಕ್ತಿಸಿದ್ದಾರೆ. ಗ್ರಾಮೀಣ ಮಹಿಳೆಯ ದೈನ್ಯ ಧ್ವನಿ ಮತ್ತು ಸಂವೇದನೆಗೆ ಸಾಹಿತ್ಯದ ಮೂಲಕ ಗಂಭೀರ ಚಿಂತನೆಗಳಿಗೆ ಒತ್ತು ನೀಡಿದ ಅವರು, ಸಾಹಿತ್ಯವನ್ನು ಸಾಮಾಜಿಕ ನ್ಯಾಯದ ಅಸ್ತ್ರವನ್ನಾಗಿ ರೂಪಿಸಿದ್ದಾರೆ. ಬಹುಮುಖ ಪ್ರತಿಭೆಯ ಅವರ ಲೇಖನ ಶೈಲಿ, ನುಡಿಮುತ್ತುಗಳಂತೆ ಹೊಳೆಯುವ ಭಾಷೆ ಮತ್ತು ಕಳಕಳಿಯ ಸ್ಪಂದನವು ಹೊಸ ಲೇಖಕರಿಗೆ ಸ್ಫೂರ್ತಿ ನೀಡುತ್ತಿವೆ.
ಶ್ರಾವಣ, ಸಂಗಾತಿ,ಬಯಲು,ಕೆಂಡಸಂಪಿಗೆ, ಅವಧಿ, ಮಿಂಚುಳ್ಳಿ.,ಸ್ತ್ರೀ ಜಾಗೃತಿ, ಕನ್ನಡ ಕಹಳೆ ಡಾಟ್ ಕಾಂ.ಮುಂತಾದ ಬ್ಲಾಗ್ ನಲ್ಲಿ ಕಥೆ ಕವನ ಮತ್ತು ಲೇಖನವನ್ನು ಪ್ರಕಟಣೆ ಮಾಡಿದ್ದಾರೆ. ಚಂದನ ದೂರದರ್ಶನ .ಸುವರ್ಣ ವಾಹಿನಿ ಜೀ ಕನ್ನಡ ಮುಂತಾದ ಟಿವಿ ಮಾಧ್ಯಮದಲ್ಲಿ ಹಾಗೂ ಆಕಾಶವಾಣಿ ಧಾರವಾಡ. ಸ್ಥಳಿಯ ಗ್ರಾಮೀಣ ಎಫ್ ಎಮ್ ಸಮುದಾಯ ರೇಡಿಯೋ ಗಳಲ್ಲಿ ಸಾಹಿತ್ಯ ಚರ್ಚೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದಾರೆ
ಮೈಸೂರು ದಸರಾ ಉತ್ಸವದ ಪ್ರಧಾನ ಕವಿಗೋಷ್ಠಿ,ಹಂಪಿ ಉತ್ಸವ ವಿಚಾರ ಸಂಕಿರಣ,ಕಿತ್ತೂರು ಉತ್ಸವ .ಬೆಳವಡಿ ಉತ್ಸವ,.ರನ್ನ ಉತ್ಸವ,ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ, ಗಡಿನಾಡು ಲೇಖಕಿಯರ ಸಮ್ಮೇಳನ ಹೀಗೆ ಹತ್ತಾರು ಪ್ರಮುಖ ಸಮಾರಂಭದಲ್ಲಿ ಅತಿಥಿಯಾಗಿ ಮುಖ್ಯ ಸಂಪನ್ಮೂಲ ಉಪನ್ಯಾಸಕರಾಗಿ ಪಾಲ್ಗೊಂಡಿದ್ದಾರೆ.
ಗಡಿನಾಡು ಬೆಳಗಾವಿ ಜಿಲ್ಲೆಯ ಕಂಪನ್ನು ತಮ್ಮ ಸಾಹಿತ್ಯದ ಮೂಲಕ ನಾಡಿನ ಎಲ್ಲೆಡೆ ಪಸರಿಸಿ ಕನ್ನಡ ನಾಡಿಗೆ ಕೀರ್ತಿತಂದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೃತ್ಪೂರ್ವಕ ಅಭಿನಂದನೆಗಳನ್ನು ಪ್ರಶಸ್ತಿ ಆಯ್ಕೆ ಸಮಿತಿ ತೀರ್ುಗಾರರು ಸಲ್ಲಿಸಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಮಹೇಶ ಬಳ್ಳಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 