ನಿಸ್ವಾರ್ಥ ಸೇವೆಯ ಮಾದರಿ ವೈದ್ಯ ಡಾ.ಜಿಲಾನಿ ಅವಟಿ

ನಿಸ್ವಾರ್ಥ ಸೇವೆಯ ಮಾದರಿ ವೈದ್ಯ ಡಾ.ಜಿಲಾನಿ ಅವಟಿ Dr. Jilani Avati, a model of selfless service

ವಿಶೇಷ ವರದಿ: ಮೊಹಮ್ಮದ ರಫೀಕ ಫತ್ತೆಮೊಹಮ್ಮದ 

ದೇವರಹಿಪ್ಪರಗಿ 26: ವೈದ್ಯ ರೋಗಿಯ ಪಾಲಿಗೆ ನಿಜವಾದ ದೇವರು. ವೈದ್ಯ ಸೇವೆ ಇಂದು ವೈದ್ಯ ವೃತ್ತಿಯಾಗಿ ಬದಲಾಗಿದೆ. ಶ್ರೀಮಂತಿಕೆಯ ಆಧಾರದ ಮೇಲೆ ವೈದ್ಯಕೀಯ ಸೇವೆ ದೊರೆಯುತ್ತಿದೆ. ಹಣ ಮಾಡುವ ಉದ್ದೇಶದಿಂದಲೇ ವೈದ್ಯರಾಗುವವರು ಸಾಕಷ್ಟು ಜನ ಇದ್ದಾರೆ. ಆದರೆ ಜನರಿಗಾಗಿಯೇ ವೈದ್ಯ ವೃತ್ತಿ ಆರಂಭಿಸಿದವರಲ್ಲಿ ವಿಜಯಪುರದ ಆಲ್ ಅಮೀನ್ ವೈದ್ಯಕೀಯ ಮಹಾವಿದ್ಯಾಲಯದ ಅಧೀಕ್ಷಕರಾದ ಡಾ.ಜಿಲಾನಿ ಅವಟಿ ಜಿಲ್ಲೆಗೆ ಮಾದರಿಯಾಗಿದ್ದಾರೆ. 

ವಿಜಯಪುರದ ಆಲ್ ಅಮೀನ್ ವೈದ್ಯಕೀಯ ಮಹಾವಿದ್ಯಾಲಯದ ಅಭಿವೃದ್ಧಿಗಾಗಿ ಹತ್ತು ಹಲವು ಕನಸುಗಳನ್ನು ಕಂಡಿರುವ ಅವರು ಜಾತಿ, ಮತ, ಪಂಥ ಭೇದ, ಭಾವ ಇಲ್ಲದೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಅವರು ಜನರಿಗಾಗಿಯೇ ಉಚಿತ ಸೇವೆಯನ್ನು ನೀಡುತ್ತ ಸಮಾಜ ಸೇವೆ ಮಾಡಿದ್ದಾರೆ. ಇವರು ಬಡವರ ಪಾಲಿಗೆ ಸಾಕ್ಷಾತ್ ದೇವರಾಗಿದ್ದಾರೆ. ಇಂತಹ ವೈಕ್ತಿಯನ್ನು ನಿಜವಾದ ಸಮಾಜ ಸೇವಕ ಎನ್ನಬೇಕು. ಇವರು ತಮ್ಮ ನಿಸ್ವಾರ್ಥ ಸೇವೆಯಿಂದ ವೈದ್ಯ ವೃತ್ತಿಗೆ ಮಾದರಿಯಾಗಿದ್ದಾರೆ. ಆಧುನಿಕ ಯುಗದಲ್ಲಿ ಹಣ ಮಾಡಲೆಂದು ವೈದಕೀಯ ವೃತ್ತಿಗೆ ಬರುವ ಜನರು ವಿರಳವಾಗಿ ಕಾಣ ಸಿಗುವರ ಮಧ್ಯೆಯೇ ಸಾಮಾನ್ಯರಂತೆ ಇರುವ ಇಂತಹ ಅಸಾಮಾನ್ಯರನ್ನು ಆಲ್ ಅಮೀನ್ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಾ ಸಂಸ್ಥೆ ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.  

ಜಿಲ್ಲೆಯ ಜನರಿಗಾಗಿಯೇ ಉಚಿತ ಸೇವೆಯನ್ನು ನೀಡುತ್ತ ಸಮಾಜ ಸೇವೆ ಮಾಡುವ ಮೂಲಕ ಇವರು ಬಡವರ ಪಾಲಿಗೆ ಸಾಕ್ಷಾತ್ ದೇವರಾಗಿದ್ದಾರೆ. ಇವರು ಸಾರ್ವಜನಿಕರಿಗಾಗಿ ಜಿಲ್ಲೆಯಲ್ಲಿ ವಿವಿಧ ಶಿಬಿರಗಳನ್ನು ಮಾಡುವ ಮೂಲಕ ಬಡ ಕುಟುಂಬದವರಿಗೆ ವಿವಿಧ ರೀತಿಯಲ್ಲಿ ಸಹಾಯ ಸಹಕಾರ ನೀಡಿದ್ದು ಸಾಕಷ್ಟು ಉದಾಹರಣೆಗಳಿವೆ. ವಿಜಯಪುರ ನಗರದಲ್ಲಿ ಇವರದೇ ಆದ ಖಾಸಗಿ ಆಲ್ ನಬಿ ಆಸ್ಪತ್ರೆಯಲ್ಲಿ ಜಾತಿ ಧರ್ಮ ಎನ್ನದೆ ಮಾನವೀಯ ದೃಷ್ಟಿಯಿಂದ ಸಾಕಷ್ಟು ಬಡ ಕುಟುಂಬದವರಿಗೆ ಉಚಿತ ಶಸ್ತ್ರ ಚಿಕಿತ್ಸೆಗಳನ್ನು ನೀಡುವ ಮೂಲಕ ಅದರಲ್ಲೂ ಅಪೆಂಡಿಕ್ಸ್‌ ರೋಗಿಗಳ ಪಾಲಿನ ದೇವರಾಗಿದ್ದಾರೆ. ರಾತ್ರಿ ಹಗಲು ಎನ್ನದೆ ನಿಸ್ವಾರ್ಥ ಸೇವೆಯಿಂದ ಜನಮಾನಸದಲ್ಲಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಸಂಸ್ಥೆ ಇನ್ನೂ ಹೇಮ್ಮರವಾಗಿ ಬೆಳೆದು ಜಿಲ್ಲೆಯ ಜನರಿಗೆ ಹೆಚ್ಚಿನ ಸೇವೆ ನೀಡಲಿ ಎಂದು ನಮ್ಮ ಆಶಯವಾಗಿದೆ. 

ವಿಜಯಪುರ ಆಲ್ ಅಮೀನ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ವಿಜಯಪುರ ಇವರ ಸಹಯೋಗದೊಂದಿಗೆ ಉಚಿತ ಮಧುಮೇಹ ಹಾಗೂ ನೇತ್ರ ತಪಾಸಣಾ ಶಿಬಿರವನ್ನು ದಿ. 29 ಶನಿವಾರದಂದು ಬೆಳಗ್ಗೆ 10:00 ಗಂಟೆಗೆ ಆಸ್ಪತ್ರೆಯ ನೇತ್ರ ಶಸ್ತ್ರ ಚಿಕಿತ್ಸೆ ವಿಭಾಗದಲ್ಲಿ ಡಾ.ಆನಂದ ಗಣ್ಣೂರ, ಡಾ. ಮಧು ಪಾಟೀಲ, ಡಾ. ಅರುಣ ಕುಮಾರ ದೇಸಾಯಿ, ಡಾ. ಚೈತ್ರಾ ಕುಲಕರ್ಣಿ, ಡಾ. ಅಜೀಮ್ ನಜೀರ್, ಡಾ. ಶೈಲಜಾ ಬಿರಾದಾರ, ಡಾ. ಆರೀಫ್ ಮುಲ್ಲಾ, ಡಾ.ಗಾಜಿಯಾನೂರ ಸೇರಿದಂತೆ ವಿವಿಧ ನೇತ್ರ ತಜ್ಞರು ಉಚಿತ ನೇತ್ರ ತಪಾಸಣಾ ಶಿಬಿರ ಸೇವೆ ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ಡೈರೆಕ್ಟರ್ಗಳಾದ ಡಾ.ಬಿ.ಎಸ್‌. ಪಾಟೀಲ ಅವರ ನೇತೃತ್ವದಲ್ಲಿ ಹಾಗೂ ಪ್ರಾಂಶುಪಾಲರಾದ ಡಾ. ನಿಶಿಕಾಂತ ಗುಜ್ಜರ ಅವರ ಅವರ ಸಹಕಾರದೊಂದಿಗೆ ಸಂಸ್ಥೆಯ ಅಧೀಕ್ಷರಾದ ಡಾ. ಜಿಲಾನಿ ಅವಟಿಯವರ ಮಾರ್ಗದರ್ಶನದಲ್ಲಿ ನಡೆಯಲಿದ್ದು ಜಿಲ್ಲೆಯ ಸಾರ್ವಜನಿಕರು ಈ ನೇತ್ರ ಶಿಬಿರದ ಲಾಭ ಪಡೆದುಕೊಳ್ಳಲು ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ತಿಳಿಸಿದ್ದಾರೆ.