ಮುಖ್ಯ ಶಿಕ್ಷಕರಾಗಿ ಪದೋನ್ನತಿ ಪಡೆದ ಡಾ. ಎಚ್‌.ಬಿ. ಕೊರವರರಿಗೆ ಸನ್ಮಾನ

ಮುಖ್ಯ ಶಿಕ್ಷಕರಾಗಿ ಪದೋನ್ನತಿ ಪಡೆದ ಡಾ. ಎಚ್‌.ಬಿ. ಕೊರವರರಿಗೆ ಸನ್ಮಾನ Dr. H.B. Koravara, who was promoted to the post of Head Teacher, was felicitated

ಲೋಕದರ್ಶನ ವರದಿ 

ಹುಬ್ಬಳ್ಳಿ 16 : ಮುಖ್ಯ ಶಿಕ್ಷಕರಾಗಿ ಪದೋನ್ನತಿ ಹೊಂದಿದ ಡಾ. ಎಚ್‌.ಬಿ ಕೊರವರ ಅವರು  ಮಂಜುನಾಥನಗರ ಶಾಲೆಯಿಂದ ಬಸವೇಶ್ವರ ನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ವರ್ಗವಾಗಿ ಬಂದಿರುವ  ಶುಭ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಡಾ ಎಚ್ ಬಿ ಕೊರವರ   ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಗ್ರಂಥ ನೀಡಿ, ಮಾಲಾರೆ​‍್ಣ ಮಾಡಿ,  ಶ್ರದ್ಧಾ, ಭಕ್ತಿಯಿಂದ ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಿದರು. ಹುತ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಬಸವೇಶ್ವರ ನಗರ ಸರಕಾರಿ ಮಾದರಿ ಶಾಲೆಯು ಡಾ ಎಚ್ ಬಿ ಕೊರವರ ಅವರ ನೇತೃತ್ವದಲ್ಲಿ ಸರ್ವತೋಮುಖ ಅಭಿವೃದ್ಧಿ  ಕಾರ್ಯಗಳು ಜರುಗಲಿ ಎಂದು ಶುಭ ಕೋರಿದರು.   

ನಿವೃತ್ತ ವೈದ್ಯಾಧಿಕಾರಿ, ಹಿರಿಯರಾದ ಡಾ.ವಿ.ಬಿ. ನಿಟಾಲಿ,ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಶಿಕ್ಷಕಿಯರಾದ ಅಕ್ಕಮ್ಮ ವಿ. ಶೆಟ್ಟರ್, ಶಕುಂತಲಾ ಜಿ ನವಲಗುಂದ, ಅನಸೂಯಾ ವೈ ಮರಕುಂಬಿ, ವಿದ್ಯಾ ಬನ್ನಾ, ಸವಿತಾ ಪಿ ಮಗದೂರ, ಶ್ರೀದೇವಿ ಎಚ್‌. ಕುಲಕರ್ಣಿ, ವೀಣಾ ಪ್ರ. ಪಾಟೀಲ್, ಜ್ಯೋತಿ ಶಾ ಕೆಲದಿಮಠ, ಶಾಲೆಯ ಮಕ್ಕಳು, ಪಾಲಕರು, ಮುಂತಾದವರು ಭಾಗವಹಿಸಿದ್ದರು. ಶಾಲೆಯಲ್ಲಿ  ವನಮಹೋತ್ಸವ ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.