ನೂತನ ಮೆಡ್ ಬೆಲ್ ಗ್ಲೋಬಲ್ ಫೌಂಡೇಶನ್ ಉದ್ಘಾಟಿಸಿದ ಡಾ. ಗೀರೀಶ ಸೋನವಾಲ್ಕರ
Dr. Girish Sonowalkar inaugurated the new Med Bell Global Foundation
ಬೆಳಗಾವಿ, 02 : ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಉದ್ದೇಶದಿಂದ ಮೆಡ್ ಬೆಲ್ ಗ್ಲೋಬಲ್ ಫೌಂಡೇಶನ್ ಪ್ರಾರಂಭಗೊಂಡಿದ್ದು, ಈ ಫೌಂಡೇಶನ್ ಸಮಾಜದ ಅಶಕ್ತರಿಗೆ ಆಸರೆಯಾಗುವ ಮೂಲಕ ನಿಮ್ಮ ಸೇವೆ ಸದಾ ಯಶಸ್ಸು ಸಾಧಿಸಲಿ ಎಂದು ಖ್ಯಾತ ವೈದ್ಯರಾದ ಡಾ. ಗೀರೀಶ ಸೋನವಾಲ್ಕರ ಅವರು ಹೇಳಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಶನಿವಾರ ಸಂಜೆ ಆಯೋಜಿಸಲಾದ ನೂತನ ಮೆಡ್ ಬೆಲ್ ಗ್ಲೋಬಲ್ (ಟಜಜಛಜಟ ರಟಠಚಿಟ) ಹೆಲ್ತಕೇರ್ ಮತ್ತು ರಿಸರ್ಚ್ ಫೌಂಡೇಶನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾವು ಸಮಾಜದ ಹಿತಕ್ಕಾಗಿ ಬದುಕಬೇಕು, ಸಮಸ್ಯೆ ಅಂತ ಬಂದ ಜನರಿಗೆ ಸ್ಪಂದಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದು ವೈದ್ಯರ ಕೆಲಸವಾಗಿದೆ. ಜನರಿಗೆ ಇನ್ನೂ ಉತ್ತಮ ವೈದ್ಯಕೀಯ ಸೇವೆಗಳು ಸಿಗುವ ನಿಟ್ಟಿನಲ್ಲಿವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಮೂಲಕ ಆರೋಗ್ಯ ರಕ್ಷಣೆಯನ್ನು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಒಳ್ಳೆಯ ಕಾರ್ಯವಾಗಿದೆ. ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲೆಂದು ಹಾರೈಸಿದರು. ವೈದ್ಯರಿಗೆ ನಿರಂತರ ವೈದ್ಯಕೀಯ ಶಿಕ್ಷಣ (ಅಒಇ), ಸಮ್ಮೇಳನಗಳು, ಉಚಿತ ಕಾರ್ಯಾಗಾರಗಳು, ವಿಚಾರ ಸಂಕೀರಣಗಳು, ತರಬೇತಿ ಪ್ರಮಾಣಪತ್ರ ಮತ್ತು ತರಬೇತಿ ಕೋರ್ಸ್ಗಳು ಆಯೋಜಿಸುವ ಕಾರ್ಯವಾಗಿದೆ.
ಅಲೋಪತಿ ಓಷಧಿ, ಆಯುರ್ವೇದ, ಹೋಮಿಯೋಪತಿ ಮತ್ತು ಇತರ ಪರ್ಯಾಯ ಆರೋಗ್ಯ ವ್ಯವಸ್ಥೆಗಳಲ್ಲಿ ಎಲ್ಲಾ ವೈದ್ಯಕೀಯ ವೃತ್ತಿಪರರನ್ನು ತೊಡಗಿಸಿಕೊಳ್ಳುವ ಮೂಲಕ ವೃತ್ತಿಪರರು ಮತ್ತು ಇತರರಲ್ಲಿ ಜ್ಞಾನವನ್ನು ಪ್ರಸಾರ ಮಾಡುವುದು ಮತ್ತು ವೈದ್ಯಕೀಯ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಯಲಿದೆ. ವೈದ್ಯರು ತಮ್ಮ ವೃತ್ತಿಜೀವನದುದ್ದಕ್ಕೂ ಹೊಸ ಜ್ಞಾನ ಮತ್ತು ಕೌಶಲ್ಯಗಳನ್ನು ಕಲಿಯುವುದು , ಕಲಿಸುವುದು ಈ ವೃತ್ತಿಯಲ್ಲಿ ಅತ್ಯವಶ್ಯಕವಾಗಿದೆ ಎಂದರು.ವೈದ್ಯಕೀಯ ಕುರಿತು ಜಾಗೃತಿ ಕಾರ್ಯಕ್ರಮಗಳು, ಆರೋಗ್ಯ ಶಿಬಿರಗಳು ನಡೆಸಬೇಕು.
ಜೀವನಶೈಲಿ-ಸಂಬಂಧಿತ ಕಾಯಿಲೆಗಳನ್ನು ತಗ್ಗಿಸಲು ಹಾಗೂ ಕಾಯಿಲೆಗಳಿಂದ ತಪ್ಪಿಸಿಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ಬಾಗಿಯಾದಾಗ ಮಾತ್ರ ಆರೋಗ್ಯವನ್ನು ವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.ರಾಮದುರ್ಗದ ಡಾ. ಸೈಯದಲಿ ಅಲ್ಲಿಸಾಹೇಬನವರ್ ಅವರು ಮಾತನಾಡಿ, ಜನರ ಸೇವೆಗಾಗಿ ಮೆಡ್ ಬೆಲ್ ಗ್ಲೋಬಲ್ ಫೌಂಡೇಶನ್ ಬೆಳಗಾವಿಯಲ್ಲಿ ಶುಭಾರಂಭಗೊಂಡಿದೆ.
ಈ ಫೌಂಡೇಶನ್ ಮೂಲಕ ಗ್ರಾಮೀಣ ಪ್ರದೇಶದಲ್ಲಿರುವ ವೈದ್ಯರಿಗೆ ಗುಣಮಟ್ಟದ ಶಿಕ್ಷಣ, ಹೊಸ..ಹೊಸ ಚಿಕಿತ್ಸೆ ನೀಡುವ ತರಬೇತಿ ನೀಡಲಾಗುವುದು. ಇದರಿಂದ ಜನಸಾಮನ್ಯರಿಗೆ ಒಳ್ಳೆಯ ಚಿಕಿತ್ಸೆ ಸಿಗಲಿದೆ. ಹೀಗಾಗಿ ಬೆಳಗಾವಿಯಲ್ಲಿ ಕಚೇರಿ ಪ್ರಾರಂಭಿಸಲಾಗಿದೆ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ವರೆಗೂ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.ಡಾ. ಗೀರೀಶ ಸೋನವಾಲ್ಕರ ಅವರ ಮಾರ್ಗದರ್ಶನದೊಂದಿಗೆ ಮೆಡ್ಬೆಲ್ಗ್ಲೋಬಲ್ ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಕೊಡುಗೆಗಳನ್ನು ನೀಡುವ ಭರವಸೆ ಮೂಡಿಸಿದೆ ಎಂದರು.
ಈ ಸಂದರ್ಭದಲ್ಲಿ ಖ್ಯಾತ ವೈದ್ಯರಾದ ಡಾ. ಗೀರೀಶ ಸೋನವಾಲ್ಕರ, ಡಾ. ಶ್ವೇತಾ ಸೋನವಾಲ್ಕರ, ಡಾ. ಪ್ರಕಾಶ ಸೋನವಾಲ್ಕರ, ರಾಮದುರ್ಗದ ಡಾ. ಸೈಯದಲಿ ಅಲ್ಲಿಸಾಹೇಬನವರ್, ಡಾ. ಮಲ್ಲಿಕಾರ್ಜುನ ಹಾಗೂ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 