ಜನವಾಣಿಯನ್ನು ದೇವವಾಣಿಯಾಗಿ ಮಾಡಿದ ಕೀರ್ತಿ ಶರಣರದು
Dr. F.G.Halakatti Anubhav: Reunion Program
ವಿಜಯಪುರ, 28 : ಶಿ.ಶಿ.ಬಸವನಾಳರು ಆದರ್ಶ ಪ್ರಾಧ್ಯಾಪಕರಾಗಿ, ಸಮರ್ಥ ಸಂಪಾದಕರಾಗಿ, ನಿಸ್ಪೃಹ ಸಮಾಜ ಕಾರ‌್ಯಕರ್ತರಾಗಿ, ಸತ್ಯಾನ್ವೇಷಣೆಯ ಸಂಶೋಧಕರಾಗಿ, ನಿಷ್ಪಕ್ಷಪಾತ ಪತ್ರಿಕಾಕರ್ತರಾಗಿ, ಕುಟುಂಬವತ್ಸಲರಾಗಿ, ಕರುಣಾಮಯಿ ಆಪದ್ ಭಾಂದವರಾಗಿ, ಕಾಯಕಯೋಗಿಯಾಗಿ ಬದುಕಿದವರು. ಅಷ್ಟೇ ಅಲ್ಲ ಕನ್ನಡದಲ್ಲಿ ಕೈಕೊಂಡ ಅವರ ಕಾರ‌್ಯ ಸಾಧನೆ ಅಸದೃಶ್ಯವಾಗಿದೆ. ಅನುಕರಣೀಯವು ಆಗಿದೆ. ಜನವಾಣಿಯನ್ನು ದೇವವಾಣಿ ಮಾಡಿದರೆಂದು ಬಸವನಾಳರು ಹೇಳಿದ್ದು ಅರ್ಥಪೂರ್ಣವಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮುಖ್ಯಸ್ಥ ಡಾ. ಮಹೇಶ ಚಿಂತಾಮಣಿಯವರು ಹೇಳಿದರು.
ಶನಿವಾರ ನಗರದಲ್ಲಿ ನಡೆದ ವಚನಪಿತಾಮಹ ಡಾ. ಫ.ಗು.ಹಳಕಟ್ಟಿ ಅನುಭಾವ ಹಿ ಮರುಭೆಟ್ಟಿ ಕಾರ‌್ಯಕ್ರಮದಲ್ಲಿ ಮಾತನಾಡಿದರು.
ಬೆಳಗಾವಿ, ಧಾರವಾಡ, ತಮ್ಮ ಕರ್ಮಭೂಮಿ ಮಾಡಿಕೊಂಡು, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ ಸದಸ್ಯರಾಗಿ ವಿವಿಧ ಗ್ರಂಥಗಳನ್ನು ಪ್ರಕಟಿಸಿ ಮತ್ತು ಪತ್ರಿಕಾ ಸಂಪಾದಕರಾಗಿ ಕಾರ‌್ಯ ಮಾಡಿದ್ದು ಶ್ಲಾಘನೀಯವಾಗಿದೆ. ಅಂತೆಯೇ ಇವರಿಗೆ ಹಲವಾರು ಪ್ರಶಸ್ತಿಗಳು ಸಂದವು.
ಬಿ.ಎಂ.ಪಾಟೀಲರವರು ಪ್ರಾರ್ಥಿಸಿದರು. ಡಾ. ವಿ.ಡಿ.ಐಹೊಳ್ಳಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಸುಭಾಸ ಕನ್ನೂರ ಕಾರ‌್ಯಕ್ರಮ ನಿರೂಪಿಸಿದರು. ಡಾ. ಸಂಗಮೇಶ ಮೇತ್ರಿ ವಂದಿಸಿದರು. ಡಾ. ಎಂ.ಎಸ್.ಮದಭಾವಿ, ಆರ್.ಕೆ.ಕುಲಕರ್ಣಿ, ಪ್ರೊ. ಎಸ್.ಬಿ.ದೊಡಮನಿ, ಎಸ್.ವಾಯ್.ಗದಗ, ಮ.ಗು.ಯಾದವಾಡ, ಜ.ಸ.ಗಲಗಲಿ, ಬಿ.ಆರ್.ಬನಸೋಡೆ, ವಿ.ಎಸ್.ಖಾಡೆ, ವ್ಹಿ.ಎಸ್.ಬಗಲಿ, ಕೆ.ಎಸ್.ಬಿರಾದಾರ, ಎಂ.ಎಸ್.ಝಳಕಿ, ಅರವಿಂದ ಕಂಚ್ಯಾಣಿ, ಡಾ. ಎಂ.ಎಸ್.ಚಾಂದದಕವಟೆ, ಡಾ. ಸೋಮಶೇಖರ ವಾಲಿ, ಎಸ್.ಬಿ.ನಾಡಗೌಡ, ಹತ್ತಿ ಮತ್ತು ಬ್ಯಾಕೋಡ, ಕೊಪ್ಪಾ ಮೇಡಂ ಸುಭಾಸ ಯಾದವಾಡ ಸುಮಾರು 60ಕ್ಕಿಂತ ಹೆಚ್ಚು ಜನ ಉಪಸ್ಥಿತರಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 