ಕೆರೂರ, 24; ತಂತ್ರಜ್ಞಾನ ಯುಗದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಚಂದ್ರಶೇಖರ ಕಾಳನ್ನವರ ಹೇಳಿದರು ಅವರು ಕೆರೂರ ಪಟ್ಟಣದಲ್ಲಿ ಶನಿವಾರ ನಡೆದ ಶ್ರೀ ರಾಚೋಟೇಶ್ವರ ಶಿಕ್ಷಣ ಸಂಸ್ಥೆಯ 32ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿಂದು ಮಕ್ಕಳ ಪುಸ್ತಕ ದಾಸರಾಗಬೇಕು. ನಿರಂತರ ಪರಿಶ್ರಮದಿಂದ ಓದಿದರೆ ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸಮಯ ಪಾಲನೆ, ಶಿಸ್ತು, ಸಂಸ್ಕೃತಿ, ಪರಂಪರೆ ಮಾನವೀಯ ಮೌಲ್ಯಗಳನ್ನು ಬೆಳೆಸಲು ಶಿಕ್ಷಕರು ಮತ್ತು ಪೋಷಕರು ಪಾತ್ರ ಮಹತ್ವದವಾಗಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಗಂಗಾಧರ ಎಚ್. ಘಟ್ಟದ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆವು ಸಮಾಜದ ಆದರ್ಶ ನಾಗರಿಕರನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪೋಷಕರ ಸಹಾಯ ಸಹಕಾರದಿಂದ 32 ವರ್ಷಗಳನ್ನು ಪೂರ್ಣಗೊಳಿಸಿ, 33 ನೇ ವರ್ಷ ಮುನ್ನಡೆಯುತ್ತಿದೆ ಎಂದು ಹೇಳಿದರು ಸಂಸ್ಥೆಯ ಕಾರ್ಯದರ್ಶಿಗಳು ಅಶೋಕ ಜಿಗಳೂರು ಅವರು ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆಯ ಕಲಿಯುವ ಮಕ್ಕಳು ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡುವ ಮಕ್ಕಳಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂದು ಹೇಳಿದರು.
ಸಮಾರಂಭದಲ್ಲಿ ವೈಸ್ ಚೇರಮನ್ ಧನಂಜಯ ಕಂದುಕೂರ, ಪ್ರಧಾನ ಕಾರ್ಯದರ್ಶಿ ಬಸವರಾಜ ದಂಡಿನ, ಖಜಾಂಚಿ ಮಂಜುನಾಥ ಕಂದಕೂರ, ನಿರ್ದೇಶಕರಾದ ಶಿವಯೋಗಪ್ಪ ದಂಡಿನ, ಶ್ರೀನಿವಾಸ್ ಕಂದಕೂರ, ಹನುಮಂತ ಪೂಜಾರಿ, ಮಾಂತೇಶ ವಾಳದ, ಚನ್ನಮಲ್ಲಪ್ಪ ಘಟ್ಟದ ಮತ್ತು ಮುಖ್ಯೋಪಾಧ್ಯಾಯ ಕೆ.ಎಂ.ಹೂಗಾರ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯವಾದ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು