ಬೆಳಗಾವಿ: ಡಾ. ಮಾತೆ ಮಹಾದೇವಿತಾಯಿಯವರ ಲಿಂಗೈಕ್ಯ ಸಂಸ್ಮರಣೋತ್ಸವ

ಲೋಕದರ್ಶನ ವರದಿ

ಬೆಳಗಾವಿ 08:  ಮಹಾಜಗದ್ಗುರು ಡಾ. ಮಾತೆ ಮಹಾದೇವಿ ತಾಯಿಯವರ ಬಸವ ಸೇವೆ ಅನನ್ಯ. ಹಗಲಿರುಳು ಬಹುಮುಖಿಯಾಗಿ ಮಾತೆಯವರು ವಿಶ್ವಗುರು ಬಸವಣ್ಣನವರ ಸಾಧನೆ, ಸಾಹಿತ್ಯ ಮತ್ತು ಸಂದೇಶಗಳನ್ನು - ತಮ್ಮ ಸಂಗೀತ, ಸಾಹಿತ್ಯ, ಸಿನೆಮಾ, ನಾಟಕ, ಸಾಮಾಜಿಕ, ಸಾಂಸ್ಕೃತಿಕ, ಧಾಮರ್ಿಕ, ಆಧ್ಯಾತ್ಮಿಕ  ಹಾಗೂ ಅನೇಕ ದೃಶ್ಯ ಮಾದ್ಯಮಗಳಲ್ಲಿ ವೈಚಾರಿಕವಾಗಿ ಸದಾ ಸ್ಮರಣೀಯ ಸೇವೆಗೈದು ಅಮರರಾಗಿದ್ದಾರೆ. ಅವರು ಪ್ರತೀಯೊಬ್ಬ ಬಸವ ಭಕ್ತರ ಹೃದಯ ಗಹ್ವರವನ್ನು ಹೊಕ್ಕು ಬಸವ ಗುರುಗಳ ವಿರಾಟ ವ್ಯಕ್ತಿತ್ವವನ್ನು  ಪರಿಚಯಿಸಿದ ಕೀತರ್ಿಗೆ ಭಾಜನರಾಗಿದ್ದಾರೆ. " ಗುರು ಬಸವ ನೆಂದರೆ ಜ್ಙಾನ ಮತ್ತು ಕ್ರಿಯೆ". ಅವರು  "ಸ್ವತಂತ್ರ ಲಿಂಗಾಯತ ಧರ್ಮ ಹೋರಾಟ" ಕ್ಕೆ ತಾಕರ್ಿಕ & ಸಾಮಾಜಿಕ ನೆಲೆಯನ್ನು ಒದಗಿಸಿ, ದಿಟ್ಟ ವೈಚಾರಿಕ ನೆಲೆಯಲ್ಲಿ ಹೋರಾಟದ ಕಿಚ್ಚನು ಹಚ್ಚಿ , ಧೈರ್ಯ, ಛಲಗಳನ್ನು ತುಂಬಿದ ಮಹಾನ್ ಬಸವ ಭಾವದ ಮಹಾನ್ ಚೇತನರು ಅವರು. ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಬೇಕಾದ ಅಡಿಪಾಯ ಹಾಕಿ ಭದ್ರ ಪಡಿಸಿದ ಕೀತರ್ಿ ಅವರಿಗೆ ಸಲ್ಲುತ್ತದೆ. ವಿಶ್ವಗುರು ಬಸವಣ್ಣನವರು ಸಂಸ್ಥಾಪಿಸಿದ ವಿಶಿಷ್ಟ ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಯೇ ಅವರಿಗೆ ಅಪರ್ಿಸುವ ದೊಡ್ಡ ಶ್ರದ್ಧಾಂಜಲಿ.             

ಹೀಗೆ, ಬಸವಧರ್ಮ ಪೀಠದ ನೂತನ ಪೀಠಾಧಿಕಾರಿ ಮಹಾ ಜಗದ್ಗುರು ಮಾತೆ ಗಂಗಾದೇವಿ ತಾಯಿಯವರು, ದಿ.07ರಂದು "ಬೆಳಗಾವಿ ಜಿಲ್ಲಾ ಮಟ್ಟದ ಮಹಾಜಗದ್ಗುರು ಡಾ. ಮಾತೆ ಮಹಾದೇವಿ ತಾಯಿಯರ ಪ್ರಥಮ ದಿವ್ಯ  ಸಂಸ್ಮರಣೋತ್ಸವ"ದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ, ತ್ಯಾಗಭೂಮಿ ಉಳವಿಯ ಪೂಜ್ಯಶ್ರೀ ಸದ್ಗುರು ಚನ್ನಬಸವಾನಂದ ಸ್ವಾಮೀಜಿಗಳ ಸಂಪಾದನೆಯ "ಕಾಲಜ್ಞಾನ ನಿರ್ಣಯ" (ಬಸವಧರ್ಮ ಯುಗಾರಂಭ) ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು. ಬೆಳಗಾವಿ ಜಿಲ್ಲಾ ಲಿಂಗಾಯತ ಧರ್ಮ ಮಹಾಸಭಾ ಮತ್ತು ಜಿಲ್ಲಾ ರಾಷ್ಟ್ರೀಯ ಬಸವದಳಗಳ ಸಂಯುಕ್ತ ಆಶ್ರಯದಲ್ಲಿ ವಿವಿಧ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದಿವ್ಯ ಸಮುಖವನ್ನು ವಹಿಸಿದ ನೇಗಿನಾಳ ಜಗದ್ಗುರು ಮಡಿವಾಳೇಶ್ವರ ಶಿವಯೋಗಿ ಮಠದ ಮ,ನಿ,ಪ್ರ, ಬಸವಸಿದ್ಧಲಿಂಗ ಮಹಾಸ್ವಾಮೀಜಿಗಳು  ಮತ್ತು ಬೆಳಗಾವಿ "ವಿಶ್ವಗುರು ಬಸವ ಮಂಟಪ"ದ ಸಂಚಾಲಕ ಸದ್ಗುರು ಪ್ರಭುಲಿಂಗ ಸ್ವಾಮೀಜಿಗಳು ದಿವ್ಯ ನೇತೃತ್ವ ವಹಿಸಿ "ಬಸವ ಧ್ವಜಾರೋಹಣ"ಗೈದು ಸಂದೇಶ ಸಾರಿದರು. ಮುಖ್ಯ ಅತಿಥಿಗಳಾಗಿ ಶರಣ ಎಸ್. ದಿವಾಕರ್, ಅಪರ ನಿದರ್ೇಶಕರು, ಪ್ರಾಂತೀಯ ಕಛೇರಿ, ಕನರ್ಾಟಕ ಸಕರ್ಾರ, ಬೆಳಗಾವಿ ಇವರು ಜ್ಯೋತಿ ಬೆಳಗಿಸಿ, ಉದ್ಘಾಟಿಸಿ ಮಾತನಾಡಿದರು.

ಸೌದತ್ತಿಯ ಯುವ ಶರಣ ಬಸವನಗೌಡ ಗೌಡಾರ್ ರವರು ಬಿಡುಗೊಡೆಗೊಂಡ ಗ್ರಂಥ ಕುರಿತು ಮಾತನಾಡಿದರು.  ಮರಾಠಿ ಸಾಹಿತಿಗಳಾದ ಉಗಾರ ಖುರ್ದ ಗ್ರಾಮದ ಶರಣೆ ಶಾಲಿನಿ ದೊಡ್ಢಮನಿ, ಡಾ. ಅವಿನಾಶ ಕವಿ, ಬೆಳಗಾವಿ ಜಿಲ್ಲಾ ರಾಷ್ಟ್ರೀಯ ಬಸವ ಸೇನೆಯ ಅಧ್ಯಕ್ಷರಾದ ಶಂಕರ್ ಗುಡಸ್, ಶೇಗುಣಿಸಿ ರಾಚಗೌಡ್ರು ಗೌಡಪ್ಪನವರ್, ಬೈಲಹೊಂಗಲದ ಸುಧೀರ ವಾಲಿ, ಸೌದತ್ತಿಯ ಶರಣೆ ಡಾ. ಅನ್ನಪೂರ್ಣ ಹಿರಿಲಿಂಗಣ್ಣವರ್, ಗೋಕಾಕದ ಶರಣ ಚನ್ನಬಸು ಬಿಜಲಿ, ಹುಬ್ಬಳ್ಳಿಯ ಶರಣರಾದ ಶಿವಲಿಂಗಪ್ಪ ಜೋಡಳ್ಳಿ, ಬಿಜಿ ಹೊಸಗೌಡ್ರು ಭಾಗವಹಿಸಿ ಪೂಜ್ಯ ಲಿಂ. ಮಾತಾಜಿಯವರ ಸಾಧನೆ, ಸಾಹಿತ್ಯ ಸೇವೆ, ಅನುಬಂಧಗಳ ಬಗ್ಗೆ ಮಾತನಾಡಿದರು. "ಬಸವಾಂಕುರ"ದ ಶರಣೆಯರಾದ ವಚನಾ ಗುಡಸ್, ಅನುಪಮಾ ತಿಪ್ಪಾ, ಬಸವದೀಕ್ಷಾ, ಪ್ರಾರ್ಥನಾ ಗುಡಸ್, ಮತ್ತು ಮಕ್ಕಳಾದ ಸಿಂಚನಾ ಗುಡಸ್, ಪ್ರಜ್ಞಾ, ಬಸವಾಕ್ಷರ - ಮಾತಾಜಿಯವರ ಗೀತೆಗಳಿಗೆೆ ನೃತ್ಯ ಪ್ರದಶರ್ಿಸಿದರು.

ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಶರಣ ಕೆ. ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಗಣಾಚಾರದಳದ ಶರಣ ಶರಣಪ್ರಸಾದ್ ಸ್ವಾಗತ ಕೋರಿದರು. ರಾಷ್ಟ್ರೀಯ ಬಸವದಳ ಬೆಳಗಾವಿಯ ಕಾರ್ಯದಶರ್ಿ ಶರಣ ಆನಂದ ಗುಡಸ್ ಪ್ರಾಸ್ತಾವಿಕ ಮಂಡಿಸಿದರು ಮತ್ತು ಉಪಾಧ್ಯಕ್ಷ ಅಶೋಕ ಬೆಂಡಿಗೇರಿ ನಿರೂಪಿಸಿದರು. ಬೈಲಹೊಂಗಲದ ಶರಣೆ ವಿಜಯಲಕ್ಷ್ಮಿ ತೋಟ್ಗಿಯವರು ವಂದನಾರ್ಪಣೆಗೈದರು.