ಪ್ರತಿಯೊಬ್ಬರು ಆರೋಗ್ಯ ಸೇತು ಆ್ಯಪ್ನ್ನು ಬಳಸಲು ವೈದ್ಯಾಧಿಕಾರಿ ಡಾ.ಭಾಸ್ಕರ್ ಮನವಿ

ಬಳ್ಳಾರಿ/ಹೊಸಪೇಟೆ,ಜು.04: ಆರೋಗ್ಯ ಹಿತದೃಷ್ಟಿಯ ಜೊತೆಗೆ ತಮ್ಮ ಸುತ್ತಮುತ್ತ ಸುಳಿದಾಡುವ ಸೋಂಕಿತರ ಮಾಹಿತಿ ಪಡೆಯಲು ಆರೋಗ್ಯ ಸೇತು ಆ್ಯಪ್ ಪ್ರಯೋಜನಕಾರಿ ಆಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಭಾಸ್ಕರ್ ಅವರು ಮಾತನಾಡಿದರು.

    ನಗರದ ತಾಲೂಕು ಕಚೇರಿ ಪತ್ರಿಕಾ ಭವನದಲ್ಲಿ ಶನಿವಾರರಂದು ಆರೋಗ್ಯ ಇಲಾಖೆ, ತಾಲೂಕು ಆಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ಕೋವಿಡ್-19 ಕುರಿತು ಹಾಗೂ ಆರೋಗ್ಯ ಸೇತು ಆ್ಯಪ್ ಬಳಕೆಯ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

    ಕೋವಿಡ್-19 ವ್ಯಾಪಕವಾಗಿ ತಡೆಗಟ್ಟುವ ಸಲುವಾಗಿ ತಾಲೂಕು ಆರೋಗ್ಯ ಕೇಂದ್ರದಿಂದ ಗುಂಪುಗಳನ್ನು ರಚಿಸಿದ್ದು, ಈ ಗುಂಪಿನ ಸದಸ್ಯರು ಅನ್ಯರಾಜ್ಯದಿಂದ ತಾಲೂಕಿಗೆ ಬಂದ ಪ್ರಯಾಣಿಕರ ಮಾಹಿತಿ ಪಡೆದು ಕ್ವಾರಂಟಿನ್ ಸೀಲ್ ಹಾಕಲಾಗುತ್ತದೆ, ಕರೋನಾ ಲಕ್ಷಣ ಕಾಣಿಸಿಕೊಂಡವರ ಸಂಚಾರ ಮಾಹಿತಿ ಪಡೆಯುವಿಕೆ.

ಈಕರಸಾ ಸಂಸ್ಥೆಯ ಬಸ್ಗಳಲ್ಲಿ ಸಂಚರಿಸಿದವರ ಮಾಹಿತಿ, ಕೊರೋನಾ ಸೋಂಕಿತರ ಪ್ರಥಮ ಸಂಪಕರ್ಿತರ ಮಾಹಿತಿ ಹಾಗೂ ಪರೀಕ್ಷೆ, ಗಭರ್ಿಣಿ ಮಹಿಳೆಯರ ಪರೀಕ್ಷೆ, ಕ್ಷಯ ರೋಗ, ವಯೋವೃದ್ಧರ ಹಾಗೂ ಕ್ಯಾನ್ಸರ್ ರೋಗಿಗಳ ಮಾಹಿತಿ ಹಾಗೂ ಪರೀಕ್ಷೆಗಳನ್ನು ಗುಂಪುಗಳಾಗಿ ವಿಂಗಡಿಸಿ ಮಾಡಲಾಗುತ್ತದೆ. 

     ಪ್ರತಿಯೊಬ್ಬ ಸಾರ್ವಜನಿಕರು ಆರೋಗ್ಯ ಸೇತು ಆಪ್ ಬಳಸಬೇಕು. ಜೊತೆಗೆ ಆ್ಯಪ್ನಲ್ಲಿ ದೂರವಾಣಿ ಸಂಖ್ಯೆ ನಮೂದಿಸಿ ತಾವು ಓಡಾಡುವ ಜಾಗದಲ್ಲಿ ಸೋಂಕಿತರು ಕಾಣಿಸಿಕೊಂಡಲ್ಲಿ ಸಂದೇಶವನ್ನು ರವಾನಿಸುತ್ತದೆ ಇದರಿಂದ ಎಚ್ಚೆತ್ತುಕೊಂಡು ಸುರಕ್ಷತೆಯಿಂದ ಇರಬಹುದು. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯ ಸೇತು ಆ್ಯಪ್ ಬಳಸಬೇಕು ಎಲ್ಲರಿಗೂ ಬಳಸಲು ಉತ್ತೇಜನ ನೀಡಬೇಕು ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸೂಚಿಸಿದರು. 

    ಈ ಸಂದರ್ಭದಲ್ಲಿ ತಹಶೀಲ್ದಾರ್ ಹೆಚ್.ವಿಶ್ವನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಷಿ ಸೇರಿದಂತೆ ತಾಲೂಕು ಆಡಳಿತದ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು.