‘ಕೌಟುಂಬಿಕ ವಾತ್ಸಲ್ಯ : ಒಂದು ಅವಲೋಕನ’ ಕುರಿತು ಮಾತನಾಡಿದ ಡಾ.ಭಜಂತ್ರಿ
Dr. Bhajantri spoke on ‘Family Affection: An Overview’
ಧಾರವಾಡ 22 : ಕುಟುಂಬ ನಿರ್ವಹಣೆ ಮಾಡುವುದು ಸಾಮಾನ್ಯವಲ್ಲ. ತಾಯಿಯಾದವಳು ಕುಟುಂಬದ ಆಧಾರ ಸ್ತಂಭವಾಗಿ ದೈಹಿಕ ಶ್ರಮದೊಂದಿಗೆ ಎಲ್ಲಾ ಹಂತದಲ್ಲೂ ನಿಸ್ವಾರ್ಥ ಭಾವನೆಯಿಂದ ಬೇಷರತ್ತಾಗಿ ಕಾರ್ಯ ನಿರ್ವಹಿಸುತ್ತಿರುವುದು ಅನನ್ಯವಾದುದು ಎಂದು ವಿಶ್ರಾಂತ ಪ್ರಾಧ್ಯಾಪಕರಾದ ಡಾ.ವಾಯ್.ಎಂ.ಭಜಂತ್ರಿ ಅಭಿಪ್ರಾಯಪಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಶ್ರೀ ಧರಮಪ್ಪ ದೊಡ್ಡವೀರ್ಪ ಹೊರಕೇರಿದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ ‘ಆದರ್ಶ ಶಿಕ್ಷಕ’ ಸನ್ಮಾನ ಕಾರ್ಯಕ್ರಮದಲ್ಲಿ ‘ಕೌಟುಂಬಿಕ ವಾತ್ಸಲ್ಯ :ಒಂದು ಅವಲೋಕನ’ ಕುರಿತು ಮಾತನಾಡುತ್ತಿದ್ದರು.
ಕುಟುಂಬ ವ್ಯವಸ್ಥೆ ಮೂಲತಃ ಸಹನೆ, ಪ್ರೀತಿ, ತ್ಯಾಗದ ತಳಹದಿಯ ಮೇಲೆ ನಿರ್ಮಾಣವಾಗಿರುತ್ತದೆ. ವಾತ್ಸಲ್ಯ ಎಂಬುದು ತಾಯಿಯ ಹೃದಯದಲ್ಲಿ ಮಕ್ಕಳ ಮೇಲಿನ ಬೇಷರತ್ ಭಾವನೆಯಾಗಿದೆ.ಇಂದಿನ ಬದಲಾದ ಆಧುನಿಕ ಜೀವನ ಶೈಲಿಯಲ್ಲಿ ನಾವು ತಂದೆ-ತಾಯಿಯನ್ನು ಆಲಕ್ಷ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಂದೆ-ತಾಯಿಯದು ತ್ಯಾಗಮಯ ಜೀವನ. ಅವರು ಬಯಸುವುದು ಪ್ರೀತಿ ಮಾತ್ರ. ಇಡೀ ದಿನ ಮೊಬೈಲ್ ವೀಕ್ಷಣೆಯಲ್ಲಿ ಕಾಲಹರಣ ಮಾಡುವ ನಾವು ಜೀವಂತ ತಂದೆ-ತಾಯಿಯನ್ನು ಮಾತನಾಡಿಸಿದ ಸ್ಥಿತಿಯಲ್ಲಿದ್ದೇವೆ.
ದೇವರಿಗೆ ಎಲ್ಲಾ ಕಡೆ ಇರಲು ಸಾಧ್ಯವಾಗದ್ದಕ್ಕೆ ತಾಯಿಯನ್ನು ಸೃಷ್ಟಿಸಿದ. ತಂದೆಯ ಹೆಗಲು ತಾಯಿಯ ಮಡಿಲೇ ನಮಗೆ ಸರ್ವಸ್ವವಾದುದು. ಕುಟುಂಬ ಎಂಬುದನ್ನು ಅರ್ಥೈಯಿಸಲು ಯಾವುದೇ ಶಾಲಾ ಪಠ್ಯಕ್ರಮವಿಲ್ಲ. ಅದು ಲೋಕಾನುಭವದ ಪಾಠಶಾಲೆಯಾಗಿದೆ. ಇದ್ದಾಗ ತಂದೆ-ತಾಯಿಯನ್ನು ಸ್ಮರಿಸದ ನಾವು ಇಲ್ಲವಾದಾಗ ಸ್ಮರಿಸುವುದು ಸರಿಅಲ್ಲಾ. ದಿ. ಧರಮಪ್ಪ ಹೊರಕೇರಿಓರ್ವ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಧರ್ಮ ಕಾಪಾಡಿಕೊಂಡು ಎಲ್ಲಾ ಮಕ್ಕಳಿಗೂ ಒಳ್ಳೆ ಸಂಸಾರ ನೀಡಿದ್ದಾರೆ. ಹೀಗಾಗಿ ಮಕ್ಕಳೆಲ್ಲಾ ದತ್ತಿ ಮೂಲಕ ಅವರನ್ನು ಜೀವಂತವಾಗಿಸಿದ್ದಾರೆ ಎಂದು ಹೇಳಿದರು.
ಆದರ್ಶ ಶಿಕ್ಷಕ ಸನ್ಮಾನ ಸ್ವೀಕರಿಸಿ ಡಾ. ಲಿಂಗರಾಜರಾಮಾಪೂರ ಮಾತನಾಡಿ, ಶಿಕ್ಷಕ ವೃತ್ತಿಜನಮಾನಸ ವೃತ್ತಿಯಾಗಿದೆ. ಈ ಸನ್ಮಾನ ನನ್ನಯಜವಾಬ್ದಾರಿ ಹೆಚ್ಚಿಸಿದೆ.ಇದು ಶಿಕ್ಷಣದಲ್ಲಿ ಹಿಂದಿನಂತೆ ಪ್ರಯೋಗಶೀಲತೆ ಇಲ್ಲ. ಶಿಕ್ಷಕರು ಸ್ವತಂತ್ರವಾಗಿಕಾರ್ಯನಿರ್ವಹಿಸದಒತ್ತಡದಲ್ಲಿದ್ದಾರೆಎಂದು ಹೇಳಿದರು. ಇನ್ನೋರ್ವ ಸನ್ಮಾನಿತ ಶಿಕ್ಷಕಿ ಸರೋಜಾ ಪಾಟೀಲ ಮಾತನಾಡಿದರು. ವೇದಿಕೆಯಲ್ಲಿದ್ದ ದತ್ತಿ ದಾನಿ ಡಾ. ಲಿಂಗರಾಜ ಹೊರಕೇರಿ ದತ್ತಿ ಪರವಾಗಿ ಮಾತನಾಡಿದರು.
ಕ.ವಿ.ವ. ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾರಂಭದಲ್ಲಿ ಡಾ.ಮೃತ್ಯುಂಜಯ ಶೆಟ್ಟರಅವರಿಂದ ಸಂಗೀತ ಕಾರ್ಯಕ್ರಮಜರುಗಿತು. ಅಲ್ಲಮಪ್ರಭು ಕಡಕೋಳ, ನವೀನ ಪಾಟೀಲ ಸಾಥ್ ನೀಡಿದರು. ಡಾ. ಮಹೇಶ ಹೊರಕೇರಿ ಸ್ವಾಗತಿಸಿ, ದತ್ತಿ ಆಶಯ ಕುರಿತು ಮಾತನಾಡಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣಒಡ್ಡೀನ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ಡಾ.ಶೈಲಜಾ ಅಮರಶೆಟ್ಟಿ, ಗುರು ಹಿರೇಮಠ, ಪ್ರೊ.ಎನ್.ಆರ್.ಬಾಳಿಕಾಯಿ, ಡಾ.ಎಂ.ಆರ್.ಪಾಟೀಲ, ಡಾ.ಸುರೇಶ ಹೊರಕೇರಿ, ಡಾ.ಲಿಂಗರಾಜಅಂಗಡಿ, ಸೋಮನಗೌಡ ಪಾಟೀಲ, ಎಸ್.ಜಿ. ಅಗಡಿ, ಶ್ರೀಶೈಲಗೌಡ ಕಮತರ, ಮಮತಾ ಹೊರಕೇರಿ, ಪ್ರೇಮಾಆರಟ್ಟಿ, ಪ್ರೇಮಾ ನಡುವಿನಮನಿ, ವ್ಹಿ.ಜಿ. ಪಾಟೀಲ, ಶಕುಂತಲಾ ಹೂಗಾರ,.ಸುಮನ ಹೊರಕೇರಿ,. ಸುಪ್ರಿಯಾ ಹೊರಕೇರಿ, ಕಿಶೋರ , ಲೋಕೇಶ, ಚಂದ್ರು ಬಳಿಗಾರ, ಡಾ. ರಾಮು ಮೂಲಗಿ, ಎಂ.ಎಂ.ಚಿಕ್ಕಮಠ ಮುಂತಾದವರು ಉಪಸ್ಥಿತರಿದ್ದರು ಸೇರಿದಂತೆ ಹೊರಕೇರಿ ಪರಿವಾರದವರುಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 