ಗದಗ ಜಿಲ್ಲಾಧ್ಯಕ್ಷ ಚುನಾವಣೆಯಲ್ಲಿ ಡಾ. ಬಸವರಾಜ ಬಳ್ಳಾರಿ ಭರ್ಜರಿ ಗೆಲುವು

ಗದಗ ಜಿಲ್ಲಾಧ್ಯಕ್ಷ ಚುನಾವಣೆಯಲ್ಲಿ ಡಾ. ಬಸವರಾಜ ಬಳ್ಳಾರಿ ಭರ್ಜರಿ ಗೆಲುವು  Dr. Basavaraj Bellary wins in the Gadag District President election

ಗದಗ 04:  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರ ಆಯ್ಕೆಗೆ ಗುರುವಾರ ಚುನಾವಣೆ ನಡೆಯಿತು. ಅಧಿಕೃತವಾಗಿ ನಡೆದ ಚುನಾವಣೆಯಲ್ಲಿ  2024-2029ನೇ ಸಾಲಿನ ಉಳಿದ ಅವಧಿಯ ಗದಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಡಾ. ಬಸವರಾಜ ಬಳ್ಳಾರಿ ಭರ್ಜರಿ ಗೆಲುವು ಸಾಧಿಸಿದರು.        

ನಗರದ ಸರಕಾರಿ ನೌಕರರ ಭವನದಲ್ಲಿ ಮತದಾನ ನಡೆದಿತ್ತು. ನಾಗರಾಜ ಹಳ್ಳಿಕೇರಿ ಹಾಗೂ ಬಸವರಾಜ ಬಳ್ಳಾರಿ ನಡುವೆ ಭಾರಿ ಪೈಪೋಟಿ ನಡೆದಿತ್ತು ಅಂತ ಸರ್ಕಾರಿ ನೌಕರರು ನೀರೀಕ್ಷಿಸಿದ್ದರು. ಆದರೆ, 69 ಮತಗಳ ಪೈಕಿ 55 ಮತಗಳನ್ನು ಪಡೆಯುವ ಮೂಲಕ ಡಾ. ಬಸವರಾಜ ಬಳ್ಳಾರಿ ಅವರು ಭರ್ಜರಿ ಜಯ ಸಾಧಿಸುವುದರೊಂದಿಗೆ ನಾಗರಾಜ ಹಳ್ಳಿಕೇರಿ ಅವರನ್ನು ಹೀನಾಯವಾಗಿ ಸೋಲಿಸಿದ್ದಾರೆ.            ಗೆಲುವು ಸಾಧಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಅಭಿಮಾನಿಗಳು ಸರ್ಕಾರಿ ನೌಕರರ ಸಮುದಾಯ ಭವನದ ಎದುರಿಗೆ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. 

ಒಟ್ಟಾರೆಯಾಗಿ ಡಾ. ಬಸವರಾಜ ಬಳ್ಳಾರಿ ಅವರ ಆಯ್ಕೆ ಸರ್ಕಾರಿ ನೌಕರರ ಮುಖದಲ್ಲಿ ಮಂದಹಾಸ ಮೂಡಿದ್ದಂತು ಸುಳ್ಳಲ್ಲ.ಈ ವೇಳೆ   ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿತ್ತು. ಈ ವೇಳೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷರಾದ ಡಾ.ರವಿ ಗುಂಜೀಕರ ಸೇರಿದಂತೆ ಸರಕಾರಿ ನೌಕರರು, ಅಭಿಮಾನಿಗಳು, ಹಿತೈಷಿಗಳು, ಭಾಗಿಯಾಗಿದ್ದರು.