ಹಸಿರು ಕ್ರಾಂತಿಗೆ ರೂವಾರಿ ಡಾ. ಬಾಬು ಜಗಜೀವನ್ ರಾಮ್
Dr. Babu Jagjivan Ram, the father of the Green Revolution
ಹಸಿರು ಕ್ರಾಂತಿಗೆ ರೂವಾರಿ ಡಾ. ಬಾಬು ಜಗಜೀವನ್ ರಾಮ್
ಕುಕನೂರ 05: ತಾಲೂಕ ಪಂಚಾಯತಿ ಕುಕನೂರ ಕಛೇರಿಯಲ್ಲಿ ಡಾ. ಬಾಬು ಜಗಜೀವನ್ ರಾಮ್ ಅವರ 118 ನೇ ಜಯಂತಿಯನ್ನು ಆಚರಿಸಿ, ತಾಲೂಕ ಯೋಜನಾಧಿಕಾರಿಗಳಾದ ಆನಂದ ಗರೂರ ಮಾತನಾಡಿ ಮಾಜಿ ಉಪ ಪ್ರಧಾನಿಗಳು, ಸಜ್ಜನ ರಾಜಕಾರಣಿ, ಆದ ಜಗಜೀವನ್ ರಾಮ್ ರವರು ಭಾರತ ಪಾಕಿಸ್ತಾನದ ಯುದ್ದದ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿ, ರಾಷ್ಟ್ರೀಯ ತುರ್ತು ಪರಸ್ಥಿಯನ್ನು ನಿಭಾಯಿಸಿ, ಹಸಿರು ಕ್ರಾಂತಿಗೆ ನೆರವಾಗಿ ಕೃಷಿ ಕ್ಷೇತ್ರದಲ್ಲಿ ಹಲವಾರ ಬದಲಾವಣೆ ಮಾಡಿದ ಕೀರ್ತಿ ಡಾ. ಜಗಜೀವನ್ ರಾಮ್ ರವರಿಗೆ ಸಲ್ಲುತ್ತದೆ.ಶೋಷಿತ ಮತ್ತು ದಮನಿತ ಜನಂಗಕ್ಕಾಗಿ ಭಾರತ ಶೋಷಿತ ವರ್ಗಗಳ ಲೀಗ್, ಮತ್ತು ಹಲವಾರು ಕಾರ್ಮಿಕರ ಚಳುವಳಿಗಳಲ್ಲಿ ಭಾಗವಹಿಸಿ, ಅದರ ಮೂಲಕ ಶೋಷಿತ ಜನಾಂಗದವರ ಸಮಸ್ಯೆ ಗಳ ಪರಿಹಾರಕ್ಕೆ ನೆರವಾದರು. ಇಂಥ ಮಹಾನ್ ಚೇತನ ಡಾ. ಜಗಜೀವನ್ ರಾಮ್ ರವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ನೆನೆಯಬೇಕು ಎಂದರು.ಸ್ಥಳದಲ್ಲಿ ತಾಲೂಕ ಪಂಚಾಯತಿ ವ್ಯವಸ್ಥಾಪಕ ಗಿರಿಧರ್ ಜ್ಯೋಷಿ, ಸಿಬ್ಬಂದಿಗಳಾದ ಚೆನ್ನಬಸಪ್ಪ ಸಣ್ಣಕರಡದ್, ಮನು ಚೆಟ್ಟಿ, ಯಲ್ಲಪ್ಪ ನಿಡಶೇಸಿ, ನರೇಗಾ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಹಾಗೂ ಇತರರು ಹಾಜರಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 