ಘಟಪ್ರಭಾ ರೈಲು ನಿಲ್ದಾಣಕ್ಕೆ ಡಾ.ಬಾಬಾಸಾಹೇಬ ಅಂಬೇಡ್ಕರ ನಾಮಕರಣಕ್ಕೆ ಆಗ್ರಹ

ಲೋಕದರ್ಶನ ವರದಿ

ಘಟಪ್ರಭಾ 14: ನೂತನವಾಗಿ ನಿಮರ್ಿಸಲಾದ ಘಟಪ್ರಭಾ ರೈಲು ನಿಲ್ದಾಣಕ್ಕೆ ಡಾ.ಬಾಬಾಸಾಹೇಬ ಅಂಬೇಡ್ಕರ ರೈಲು ನಿಲ್ದಾಣ ಎಂದು ನಾಮಕರಣ ಮಾಡಿ ನಿಲ್ದಾನದಲ್ಲಿ ಅಂಬೇಡ್ಕರರ ಭಾವಚಿತ್ರ ಹಾಕಬೇಕೆಂದು ಆಗ್ರಹಿಸಿ ವಿವಿಧ ದಲಿತ ಹಾಗೂ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟಿಸಿ ರೈಲು ನಿಲ್ದಾಣದ ವ್ಯವಸ್ಥಾಪಕರ ಮೂಲಕ ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಹಾಗೂ ಹುಬ್ಬಳ್ಳಿ ವಿಭಾದ ಜನರಲ ಮ್ಯಾನೇಜರ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. 

ಪ್ರತಿಭಟಣಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಿ.ಎಸ್.ಎಸ್ ಜಿಲ್ಲಾಧ್ಯಕ್ಷ ರಮೇಶ ಮಾದರ, ಸಂವಿಧಾನವನ್ನು ರಚಿಸಿ ದೀನದಲಿತ ಬಡವರ ಪಾಲಿಗೆ ದೇವರಾಗಿರುವ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಹೆಸರನ್ನು ನೂತನವಾಗಿ ನಿಮರ್ಿಸಲಾದ ಘಟಪ್ರಭಾ ರೈಲು ನಿಲ್ದಾಣಕ್ಕೆ ನಾಮಕರಣ ಮಾಡಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿದರು. 

ಕನರ್ಾಟಕ ಯುವ ಸೇನೆ ರಾಜ್ಯ ಉಪಾಧ್ಯಕ್ಷ ಕೆಂಪಣ್ಣಾ ಚೌಕಶಿ ಮಾತನಾಡಿ, ವಿವಿಧ ಸಂಘಟನೆಗಳ ಅನೇಕ ವರ್ಷಗಳಿಂದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಹೆಸರನ್ನು ರೈಲು ನಿಲ್ದಾಣಕ್ಕೆ ಇಡಬೇಕೆಂದು ಆಗ್ರಹಿಸುತ್ತ ಬಂದಿದ್ದಾರೆ. ರೈಲ್ವೆ ಅಧಿಕಾರಿಗಳು ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸ ಬೇಕೆಂದು ಆಗ್ರಹಿಸಿದರು. ಸಮತಾ ಸೈನಿಕದಳ ತಾಲೂಕಾಧ್ಯಕ್ಷ ಅರ್ಜುನ ಗಂಡವ್ವಗೋಳ, ಶಂಕರ ಸಣ್ಣಕ್ಕಿ, ಮಾತನಾಡಿದರು. 

ಕನರ್ಾಟಕ ಯುವ ಸೇನೆ ಜಿಲ್ಲಾಧ್ಯಕ್ಷ ವೀರಣ್ಣಾ ಸಂಗಮನವರ, ಕಾರ್ಯದರ್ಶಿ ಭರಮಣ್ಣಾ ಗಾಡಿವಡ್ಡರ, ಜೈಭೀಮ ಅಂಬೇಡ್ಕರ ವಾಣಿ ಜಿಲ್ಲಾಧ್ಯಕ್ಷ ರವಿ ಕಟಕೋಳ, ಡಿ.ಎಸ್.ಎಸ್ ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ಸಣ್ಣಕ್ಕಿ, ರಾಜ್ಯ ಮಹಿಳಾ ಉಪಾಧ್ಯಕ್ಷೆ ಮಂಜುಳಾ ರಾಮಗಾನಟ್ಟಿ, ರಾಘು ಚಿಂಚಲಿ, ಎಸ್.ಎಸ್.ಡಿ ಸಂಚಾಲಕರಾದ ಶಂಕರ ಪರವಗೋಳ, ಸ್ವಾಮಿ ಕೋಮಾರಿ, ಅಲ್ತಾಫ ಹರಿಜನ, ಮಕ್ಸೂದ ಮುಲ್ಲಾ, ಹಣಮಂತ ಕರೆವ್ವಗೋಳ ಸೇರಿದಂತೆ ವಿವಿಧ ದಲಿತ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.