ಬಳ್ಳಾರಿ.ಏ15: ಬದುಕನ್ನು ಹಸನುಗೊಳಿಸಲು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಹಾಗೂ ಸಮಾಜದಲ್ಲಿ ಸಮಾನತೆ ಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಅವಿರತ ಶ್ರಮಿಸಿದರು ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಅವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಮಂಗಳವಾರ ಸರಳವಾಗಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜಯಂತಿ ಹಾಗೂ ಡಾ.ಬಾಬು ಜಗಜೀವನರಾಮ್ ಅವರ 113ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾಜಿಕ ಅಂತರದ ನಿಮರ್ೂಲನೆ, ಅಸ್ಪೃಶ್ಯತೆ ನಿವಾರಣೆ, ಜಾತಿ ವಿನಾಶ, ಅಂತಜರ್ಾತಿ ವಿವಾಹದ ಬಗ್ಗೆ ಎಚ್ಚರಿಸಿದವರು;
ಡಾ.ಬಿ.ಆರ್.ಅಂಬೇಡ್ಕರ್. ದಲಿತರಿಗೆ ಸಾಮಾಜಿಕ ಸಮಾನತೆಯನ್ನು ತರಲು ಶಿಕ್ಷಣ ನೀಡಿದ ಜ್ಯೋತಿಬಾ ಫುಲೆ, ದೇಶದ ಉಪ ಪ್ರಧಾನಿಯಾಗಿ ಹಾಗೂ ರಕ್ಷಣಾ ಸಚಿವರಾಗಿ ದೀನ ದಲಿತರ ಅಭಿವೃದ್ಧಿಗೆ ಶ್ರಮಿಸಿದ ಡಾ.ಬಾಬು ಜಗಜೀವನರಾಮ್ ಹಾಗೂ ದೇಶದ ಸಂವಿಧಾನಶಿಲ್ಪಿ ಮತ್ತು ವೈಜ್ಞಾನಿಕ ಚಿಂತಕ ಡಾ.ಬಿ.ಆರ್.ಅಂಬೇಡ್ಕರ್ ಅವರೆಲ್ಲರೂ ಇದೇ ಏಪ್ರಿಲ್ ತಿಂಗಳಲ್ಲಿ ಜನಿಸಿದವರು. ಕೊರೋನಾ ವೈರಸ್ ಸಂಕಷ್ಟದಿಂದ ಈ ಇಬ್ಬರ ಮಹನೀಯರ ಜಯಂತಿಗಳನ್ನು ಸರಳವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.
ಡಾ.ಬಾಬು ಜಗಜೀವನರಾಮ್ ಅವರು ರೈತರ ಪರನಿಂತು ಹಸಿರುಕ್ರಾಂತಿ ಹರಿಕಾರರಾದರು. ಸಂಪತ್ತಿನ ಕ್ರೋಢೀಕರಣ ತುಂಬಾ ಅಪಾಯಕಾರಿ. ಇದು ಎಲ್ಲ ವರ್ಗದ ಜನರಿಗೆ ಸಮಾನ ರೀತಿಯಲ್ಲಿ ಹಂಚಿಕೆ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಈ ಇಬ್ಬರು ಮಹಾನ್ ವ್ಯಕ್ತಿಗಳು ವೈಜ್ಞಾನಿಕವಾಗಿ ಆಲೋಚಿಸಿ ದೇಶಕ್ಕೆ ಒಂದು ಉತ್ಕೃಷ್ಠ ಸಂವಿಧಾನ ಹಾಗೂ ರೈತರ ಪರ ನಿಂತು ತಳಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದರು. ಇವರು ಕೇವಲ ದಲಿತ ಸಮುದಾಯಗಳಿಗೆ ಮಾತ್ರ ಸೀಮಿತವಾಗದೆ ಒಂದು ದೇಶ, ಒಂದು ಸಮಾಜ, ಒಂದು ವ್ಯವಸ್ಥೆ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟರು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜ್ಞಾನ ನಿಕಾಯದ ಡೀನ್ ಹಾಗೂ ಪ್ರಾಧ್ಯಾಪಕರಾದ ಡಾ.ಮಾಧವ ಪೆರಾಜೆ ಅವರು ಮಾತನಾಡಿದರು.
ಕುಲಸಚಿವರಾದ ಡಾ.ಎ.ಸುಬ್ಬಣ್ಣ.ರೈ ಅವರು ಮಾತನಾಡಿ ಇಂದು ಕೊರೋನಾ ಸಂಕಷ್ಟದಿಂದ ಇಡಿ ಜಗತ್ತೇ ನಲುಗಿಹೋಗಿದೆ. ಇಬ್ಬರೂ ಸಮಸಮಾಜ ನಿಮರ್ಾಣಕ್ಕಾಗಿ ಹೋರಾಡಿದವರು. ಒಬ್ಬರು ಅಸ್ಪೃಶ್ಯತೆ ವಿರುದ್ಧ ಹೋರಾಡಿದರೆ ಮತ್ತೊಬ್ಬರು ರೈತರ ಕಾಳಜಿಗಾಗಿ ಹೋರಾಡಿದರು ಎಂದರು.
ಉಪಕುಲಸಚಿವರಾದ ಡಾ.ಎ.ವೆಂಕಟೇಶ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಕುಲಸಚಿವರಾದ ಡಾ.ಎ.ವೆಂಕಟೇಶ ಅವರು ನಿರೂಪಿಸಿದರು.
ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಅಧ್ಯಾಪಕರು, ಮುಖ್ಯಸ್ಥರು, ಬೋಧಕೇತರ ಸಿಬ್ಬಂದಿಗಳು ಇದ್ದರು.