ಡಾ: ಬಿ.ಸರೋಜದೇವಿ ಅಗಲಿಕೆ: ಗಣ್ಯಮಾನ್ಯರ ಕಂಬನಿ
Dr. B. Sarojdevi passes away: A group of dignitaries
ಡಾ: ಬಿ.ಸರೋಜದೇವಿ ಅಗಲಿಕೆ: ಗಣ್ಯಮಾನ್ಯರ ಕಂಬನಿ
ಕೊಟ್ಟೂರು 14 : ಕನ್ನಡ ಚಿತ್ರರಂಗದ ಅಪ್ರತಿಮ ಪ್ರತಿಭೆ, ಅಭಿನಯ ಶಾರದೆ ಡಾ: ಬಿ.ಸರೋಜದೇವಿ ನಿಧನಕ್ಕೆ ಕೊಟ್ಟೂರು ನಗರದ ಗಣ್ಯಾತೀ ಗಣ್ಯರು ಕಂಬನಿ ಮಿಡಿದ್ದಿದ್ದಾರೆ. ಚಿತ್ರರಂಗಕ್ಕೆ ಹಿರಿಯ ಚೇತನ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದ್ದು, ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಾಯಕಿಯಾಗಿ ಅಭಿನಯಿಸುವುದರ ಮೂಲಕ ಎಲ್ಲಾ ನಾಯಕರ ಜೊತೆ ನಾಯಕಿಯಾಗಿ ಅಭಿನಯಿಸಿದ್ದರು, ಕೇವಲ ಸಾಮಾಜಿಕ ಚಿತ್ರಗಳಲ್ಲದೇ, ಪೌರಾಣಿಕ , ಐತಿಹಾಸಿಕ ಸಿನಿಮಾಗಳಲ್ಲಿ ಪ್ರಮುಖ ಪಾತ್ರ ಮಾಡುವುದರ ಮೂಲಕ ಪಾತ್ರಕ್ಕೆ ಜೀವ ಕಳೆ ತುಂಬಿ ಆ ಪಾತ್ರದಲ್ಲೇ ತಲೀನರಾಗಿ ಪಾತ್ರಕ್ಕೆ ನ್ಯಾಯ ದೊರಕಿಸುವುದಲ್ಲದೇ, ಅಪಾರ ಅಭಿಮಾನಿಗಳಿಗಳನ್ನು ಹೊಂದಿದ್ದರು ಎಂದು ಹಿರಿಯ ಸಾಹಿತಿ ಸಿನಿಮಾ ಕಥೆಗಾರ, ಪ್ರಖ್ಯಾತ ಲೇಖಕ ಕುಂ.ವೀ. ಅಭಿಪ್ರಾಯಪಟ್ಟಿದ್ದಾರೆ. ಅವರ ಅತ್ಮಕ್ಕೆ ಚಿರ ಶಾಂತಿ ಸಿಗಲಿಯೆಂದು ಕೋರಿದ್ದಾರೆ.
ರೇಣುಕ ಚಿತ್ರಮಂದಿರ ಸಭಾಭವನದ ಮಾಲೀಕ ಕಲಾಕೇಂದ್ರದ ಹಾಲಿ ಅಧ್ಯಕ್ಷರಾದ ಎಂ.ಎಂ.ಜೆ.ಸತ್ಯಪ್ರಕಾಶ್ ಮಾತನಾಡಿ ಅವರ ಎಲ್ಲಾ ಚಿತ್ರಗಳು ನಮ್ಮ ಚಿತ್ರಮಂದಿರ ದಲ್ಲಿ ಪ್ರದರ್ಶನಗೊಂಡಿದ್ದು ಆಗಿನ ಕಾಲದಲ್ಲೇ ಡಾ. ರಾಜ್ - ಸರೋಜದೇವಿ ಅಭಿನಯಸಿದ್ದಾರೆಂದರೆ ಕಿಕ್ಕಿರಿದರು ಜನ ತುಂಬಿ ನಮಗೆ ಅಪಾರ ಲಾಭ ಅವರ ಚಿತ್ರಗಳು ತಂದು ಕೊಡುತ್ತಿದ್ದವು ಎಂದು ನೆನಪಿನ ಬುತ್ತಿ ಬಿಚ್ಚಿರುವುದಲ್ಲದೇ ಅವರ ಚಿತ್ರ ಪ್ರದರ್ಶನದ ವೇಳೆ ಅವರ ಎಲ್ಲಾ ಚಿತ್ರಗಳನ್ನು ನೋಡಿರುವುದಾಗಿ ಹೇಳುತ್ತಾ ಅವರ ಹಾಡುಗಳು ಬಂದ ತಕ್ಷಣ ದಿನಪ್ರತಿ ವೀಕ್ಷಿಸುತ್ತಿರುವುದಾಗಿ ತಿಳಿಸುತ್ತಾ ನಾನು ಕೂಡ ಅವರ ದೊಡ್ಡ ಅಭಿಮಾನಿಯಾಗಿದ್ದೆಯೆಂದು ಹೇಳಿದರು, ಮೃತರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ಭಗವಂತನು ನೀಡಲಿಯೆಂದು ಪ್ರಾರ್ಥಿಸಿರುತ್ತಾರೆ.
ನಗರದ ಅನೇಕ ಕನ್ನಡಪರ ಇತರೇ ಸಂಘಟನೆಗಳು ಕಂಬನಿ ಮಿಡಿದ್ದಿದ್ದು ,ಅವರ ಅಭಿನಯ ಎಂದೆಂದಿಗೂ ಭೂಮಿ ಇರುವವರಗೆಗೂ ನೋಡುವ ಭಾಗ್ಯ ಸರ್ವರಿಗೂ ಇದೆಯೆಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಮರಿಸ್ವಾಮಿ ಪತ್ರಿಕೆಯೊಂದಿಗೆ ದು:ಖ ಹಂಚಿಕೊಳ್ಳುತ್ತಾ ಬಿ.ಸರೋಜದೇವಿ ಕನ್ನಡ ನಾಡಿನ ಚಿತ್ರರಂಗಕ್ಕೆ ಮರೆಯಲಾಗದ ಹೆಮ್ಮೆಯ ಪುತ್ರಿಯೆಂದು ಸ್ಮರಿಸಿದ್ದಾರೆ.
ಹಾಗೇಯೇ ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರುಗಳು, ಕ್ಷೇತ್ರದ ಶಾಸಕರಾದ ನೇಮಿರಾಜ್‌ನಾಯ್ಕ , ಕೆ.ಎಂ.ಎಫ್. ಹಾಲಿ ಅಧ್ಯಕ್ಷ ಭೀಮನಾಯ್ಕ, ಮುಖಂಡರಾದ ಎಂ.ಎಂ.ಜೆ. ಹರ್ಷವರ್ಧನ್, ಬಿ.ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಐ.ಯಂ.ದಾರುಕೇಶ್, ಅಂಚೆಕೊಟ್ರೇಶ್, ಸತೀಶ್‌ಪಾಟೀಲ್, ಪತ್ರ ಸಂಘದ ಮಾಜಿ ಅಧ್ಯಕ್ಷ ಬನ್ನಹಟ್ಟಿ ವೀರೇಶ್ ಕಂಬನಿ ಮಿಡಿದಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 