ಶೈಕ್ಷಣಿಕ ಸಾಲ ನೀಡುವ ಅವಾನ್ಸ್‌ ಸಂಸ್ಥೆ ಕಾರ್ಯಕ್ಕೆ ಡಾ. ಅಶ್ವತ್ಥನಾರಾಯಣ ಶ್ಲಾಘನೆ

ಬೆಂಗಳೂರು, ಜ 6 :    ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ಒದಗಿಸುತ್ತಿರುವ 'ಅವಾನ್ಸ್‌' ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂದಿರಾ ನಗರದ  ಅವಾನ್ಸ್‌ ಫೈನಾನ್ಷಿಯಲ್‌ ಸರ್ವೀಸಸ್‌ ಲಿಮಿಟೆಡ್ ನ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಅರ್ಹ ವಿದ್ಯಾರ್ಥಿಗಳಿಗೆ ಹಣಕಾಸು ಸಂಸ್ಥೆಯು ಶಿಕ್ಷಣ ಸಾಲ ಸೌಲಭ್ಯ ಒದಗಿಸುತ್ತಿರುವುದು ಸ್ವಾಗತಾರ್ಹ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೇಂದ್ರ ಸ್ಥಾನವಾಗಿರುವ ರಾಜ್ಯವು ದೇಶದ ಎಲ್ಲ ಭಾಗಗಳ ಪ್ರತಿಭಾನ್ವಿತರನ್ನು ಸೆಳೆಯುತ್ತಿದೆ. ಅವರ ಅಗತ್ಯಕ್ಕೆ ಪೂರಕವಾದ ಶೈಕ್ಷಣಿಕ ವೇದಿಕೆ ಸೃಷ್ಟಿಸುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ 'ಅವಾನ್ಸ್‌' ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ,"ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. 

 ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೇಂದ್ರಬಿಂದುವಾಗಿರುವ ಕರ್ನಾಟಕ ದೇಶದ ಎಲ್ಲ ಭಾಗಗಳ ಪ್ರತಿಭಾನ್ವಿತರನ್ನು ಸೆಳೆಯುತ್ತಿದೆ. ಅವರ ಅಗತ್ಯಕ್ಕೆ ಪೂರಕವಾದ ಶೈಕ್ಷಣಿಕ ವೇದಿಕೆ ಸೃಷ್ಟಿಸುವುದು ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಕಳೆದ 4 ವರ್ಷಗಳಿಂದ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವಾನ್ಸ್‌, ವಿಶೇಷ ಚೇತನರ ಶಾಲೆ 'ಸಮರ್ಥನಂ ಟ್ರಸ್ಟ್‌'ಗೆ  1 ಲಕ್ಷ ರೂ. ದೇಣಿಗೆ ನೀಡಿದೆ.  ಗುಣಮಟ್ಟದ ಶಿಕ್ಷಣ ಎಲ್ಲರಿಗೂ  ಸುಲಭವಾಗಿ  ಲಭ್ಯವಾಗಬೇಕು ಎಂಬ ಧ್ಯೇಯದೊಂದಿಗೆ, 450 ಶಿಕ್ಷಣ ಸಂಸ್ಥೆಗಳಿಗೆ ಅವಾನ್ಸ್‌ ಸಾಲ ಸೌಲಭ್ಯ ಒದಗಿಸಿದೆ. ಈ ಸಂಸ್ಥೆಗಳ 5 ಲಕ್ಷ ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ ಎಂದರು. 

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲದೇ ಇಂಥ ಖಾಸಗಿ ಹಣಕಾಸು ಸಂಸ್ಥೆಗಳು ಶೈಕ್ಷಣಿಕ ಸಾಲ ನೀಡುವುದರಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಲಿದೆ. ಇಂಥಹ ಪ್ರಯತ್ನಗಳಿಂದಲೇ ಶಿಕ್ಷಣ ಕ್ಷೇತ್ರದಲ್ಲಿ ಬಹು ದೊಡ್ಡ ಬದಲಾವಣೆ ತರಲು ಸಾಧ್ಯ. ಈ ನಿಟ್ಟಿನಲ್ಲಿ ಅವಾನ್ಸ್‌ ಕಾರ್ಯ ಪ್ರಶಂಸಾರ್ಹ ಎಂದರು.

ಅವಾನ್ಸ್ ಸಂಸ್ಥೆಯು ಉನ್ನತ ಶಿಕ್ಷಣ, (ದೇಶ ಹಾಗೂ ವಿದೇಶದಲ್ಲಿ ಶಿಕ್ಷಣ ಪಡೆಯುವವರಿಗೆ) ಇ-ಲರ್ನಿಂಗ್‌, ಶಾಲಾ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಕೋರ್ಸ್‌ಗಳಿಗೆ, ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ, ದೇಶದ ಶಿಕ್ಷಣ ಸಂಸ್ಥೆಗಳಿಗೆ ಅವಾನ್ಸ್‌ ಸಾಲ ಸೌಲಭ್ಯ ಒದಗಿಸುತ್ತಿದೆ. ವಿದೇಶ ಅಥವಾ ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಇಚ್ಛೆ ಇರುವ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ಸೌಲಭ್ಯ ಒದಗಿಸುವ ಉದ್ದೇಶದೊಂದಿಗೆ ಪ್ರಾರಂಭವಾದ ಈ ಹಣಕಾಸು ಸಂಸ್ಥೆ, ಈವರೆಗೆ  100 ಕೋಟಿ ರೂ. ಸಾಲ ನೀಡುವ ಮೂಲಕ  ರಾಜ್ಯದ ಸುಮಾರು 6 ಸಾವಿರ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಿದೆ‌ ಎಂದರು.

ಮುಂದಿನ 2 ವರ್ಷಗಳಲ್ಲಿ ಅಂದಾಜು 2 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ಒದಗಿಸುವ ಮೂಲಕ ಉದ್ದಿಮೆಯನ್ನು ಶೇ.15 ರಿಂದ 20ರ ವರೆಗೆ ವಿಸ್ತರಿಸುವ ಜತೆಗೆ ಐಟಿ ವೃತ್ತಿಪರರ ಕೌಶಲ್ಯ ವರ್ಧನೆ ಕೋರ್ಸ್‌ಗಳಿಗೂ ಸಾಲ ಸೌಲಭ್ಯ ಒದಗಿಸುವ ಗುರಿ ಹೊಂದಿದೆ ಎಂದರು.