ಲೋಕದರ್ಶನವರದಿ
ಬಳ್ಳಾರಿ13: ಮುಂಬಯಿನಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮನೆ ಧ್ವಂಸಗೊಳಿಸಿವ ಘಟನೆ ಖಂಡನೀಯ. ಘಟನೆಗೆ ಕಾರಣವಾಗಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಕನರ್ಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮಹಾರಾಷ್ಟ್ರ ಸಕರ್ಾರಕ್ಕೆ ಮನವಿ ಸಲ್ಲಿಸಿದರು.
ಈ ಕೃತ್ಯದ ಹಿಂದೆ ದೊಡ್ಡ ಷಡ್ಯಂತರವಿದೆ. ಬಾಡಿಗೆ ಗುಂಡಾಗಳಿಂದ ಈ ರೀತಿಯ ಕೃತ್ಯ ನಡೆಸಿ ಡಾ. ಬಾಬಾಸಾಹೇಬ ಅಂಬೇಡ್ಕರ್ ನಂಬಿರುವ ರಾಷ್ಟ್ರೀಯತೆ ಜಾತ್ಯತೀತತೆ ಪ್ರಜಾಪ್ರಭುತ್ವ ಹಿಮ್ಮೆಟ್ಟಿಸಿ ಮೇಲುಗೈ ಸಾಧಿಸಲು ಹೊರಟಿರುವ ಈ ದುಷ್ಟಶಕ್ತಿಗಳಿಗೆ ಎಂದೆಂದಿಗೂ ಜಯಸಿಗದು.
ಘಟನೆಯನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ ಇದರ ಹಿಂದೆ ಇರುವ ಕೈಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಆರೋಪಿಗಳನ್ನು 2 ದಿನದ ಒಳಗಡೆ ಬಂಧಿಸಬೇಕು ಇಲ್ಲವಾದಲ್ಲಿ ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಹೆಚ್.ಸಿದ್ದೇಶ್, ಸಂಘಟನಾ ಸಂಚಾಲಕರಾದ ಜಿ.ಪಂಪಾಪತಿ, ಹೆಚ್. ಅಂಜಿನೇಯ, ಕೆ.ಗಾದಿಲಿಂಗಪ್ಪ, ಎ.ಕೆ. ನಿಂಗಪ್ಪ ವಕೀಲರು, ಹೆಚ್.ನಾಗೇಂದ್ರ, ರಮೇಶ ಬಿಸಲಹಳ್ಳಿ, ಟಿ.ಎಂ.ಎರ್ರಿಸ್ವಾಮಿ, ಜೆ.ಮಲ್ಲಿಕಾಜರ್ುನ, ಹೆಚ್.ಮಲ್ಲಪ್ಪ, ಗಂಗಾಧರ, ಹೊನ್ನೂರಪ್ಪ (ಕಿರ್ರ್), ರಾಜಣ್ಣ, ಉಮೇಶ, ಬೆಳಗಲ್ಲು ಹುಲುಗಪ್ಪ, ರಾಜೇಶ, ತಾಲೂಕು ಪದಾಧಿಕಾರಿಗಳಾದ ಶಂಕರ್ ಬಾಪೂಜಿನಗರ, ರಂಗಪ್ಪ, ಭೀಮಶಂಕರ್, ನಾಗರಾಜ, ಭತ್ರಿ ಮಹೇಶ, ಅಂಜಿನಿ ಇಂದ್ರಾನಗರ, ದುಗರ್ಾದಾಸ್, ಹನುಮಂತ ಕುಡುತಿನಿ, ಆರ್.ವೀರೇಶ, ಶಶಿ ಬೂದಿಹಾಳು, ತಿಪ್ಪೇಸ್ವಾಮಿ (ಅಯ್ಯ), ಪ್ರಭು, ಎರ್ರಿಸ್ವಾಮಿ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ಬುಡಾ ವ್ಯಾಪ್ತಿಗೆ ಬರುವ ಗ್ರಾಪಂಗಳಲ್ಲಿ ಅನಧಿಕೃತ ಬೆಳವಣಿಗೆ ತಡೆಗಟ್ಟಿ : ದಮ್ಮೂರು