‘ಮಹನೀಯರ ಜೀವನ ಸಾಧನೆಗಳನ್ನು ಅರಿತಾಗ ಸದೃಢ ವ್ಯಕ್ತಿತ್ವ ನಿರ್ಮಾಣ ಸಾಧ್ಯ’

‘ಮಹನೀಯರ ಜೀವನ ಸಾಧನೆಗಳನ್ನು ಅರಿತಾಗ ಸದೃಢ ವ್ಯಕ್ತಿತ್ವ ನಿರ್ಮಾಣ ಸಾಧ್ಯ’ Dr. 125th birth anniversary of Shyam Prasad Mukherjee

ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ 125ನೇ ಜಯಂತಿ 

ಧಾರವಾಡ 08: ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರಂತಹ ಮಹನೀಯರ ಜೀವನ ಸಾಧನೆಗಳ ಕುರಿತು ನಮ್ಮ ಯುವ ಜನಾಂಗ ಅರಿತಾಗ, ಅದು ತಮ್ಮ ಸದೃಢ ವ್ಯಕ್ತಿತ್ವ ನಿರ್ಮಾಣಕ್ಕೆ ಅಡಿಪಾಯವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಅಭಿಪ್ರಾಯ ಪಟ್ಟರು.   

ದಿನಾಂಕ: 07.07.2025ರಂದು ನಗರದ ವನಿತಾ ಸೇವಾ ಸಮಾಜದ ಸಭಾಂಗಣದಲ್ಲಿ ಭಾರತ ಸರ್ಕಾರದ ಮೇರಾ ಯುವ ಭಾರತ, ಧಾರವಾಡ, ನೆಹರು ಯುವ ಕೇಂದ್ರ, ಸಂಸ್ಕಾರ ಭಾರತಿ, ಧಾರವಾಡ, ಶ್ರೀ ವಾಲ್ಮೀಕಿ ಸಾಂಸ್ಕೃತಿಕ ಹಾಗೂ ಕ್ರೀಡಾ ಯುವ ಸಂಘ, ವನಿತಾ ಸೇವಾ ಸಮಾಜ ಇವರ ಸಹಯೋಗದಲ್ಲಿ ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ 125ನೇ ಜಯಂತಿ ನಿಮಿತ್ತ ಏರಿ​‍್ಡಸಿದ್ದ ಪ್ರಬಂಧ ಸ್ಪರ್ಧೆ ಹಾಗೂ ಗುರುಪೂರ್ಣಿಮೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಂತಾರಾಮ ಸಿದ್ಧಿ ಅವರು ಮಾತನಾಡುತ್ತ  

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಜ್ಯೋತಿ ಪಾಟೀಲರು ಮಾತನಾಡುತ್ತ ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರಂಥವರ ತ್ಯಾಗ ಬಲಿದಾನದ ಫಲವಾಗಿಯೇ ನಾವಿಂದು ಸಮೃದ್ಧ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗಿದೆ.  ಅವರ ಆಶಯದಂತೆ ನಾವಿಂದು ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ ಎಂದರು.   

ಸಂಸ್ಕಾರ ಭಾರತಿ, ಕರ್ನಾಟಕ ಉತ್ತರ ಪ್ರಧಾನ ಕಾರ್ಯದರ್ಶಿ ಡಾ.ಶಶಿಧರ ನರೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತ ಗುರುವೇ ದೈವ, ಜೀವನದಲ್ಲಿ ಗುರುಗಳ ಸ್ಥಾನ ಬಹಳ ದೊಡ್ಡದು, ಭಾರತದಲ್ಲಿ ಗುರುವಿಗೆ ಅತ್ಯುಚ್ಚವಾದ ಸ್ಥಾನವಿದೆ. ಗುರುಗಳು ತಮ್ಮ ಶಿಷ್ಯರು ಜೀವನದಲ್ಲಿ ಎಲ್ಲ ರಂಗದಲ್ಲೂ ಯಶಸ್ಸುಗಳಿಸಲಿ ಎಂದು ಬಯಸುತ್ತಾರೆ. ಇದಕ್ಕೆ ಉದಾಹರಣೆಯಾಗಿ ಉಪನಿಷತ್ತಿನ ಧೌಮ್ಯ ಹಾಗೂ ಉಪಮನ್ಯುವಿನ ಕಥೆಯ ಮೂಲಕ ಗುರುಗಳ ಮಹತ್ವವನ್ನು ಹೇಳಿ ಗುರಪೂರ್ಣಿಮೆಯ ಓಚಿತ್ಯವನ್ನು ಮನವರಿಕೆಮಾಡಿಕೊಟ್ಟರು. ನಮಗೆ ವಿದ್ಯೆ ಹೇಗೆ ಮಹತ್ವ ಎಂಬುದಕ್ಕೆ ಡಾ. ಶ್ಯಾಮ ಪ್ರಸಾದ ಮುಖರ್ಜಿ, ಭಾಗೀರಥೀಬಾಯಿ ಪುರಾಣಿಕ, ಲಕ್ಷ್ಮೀಬಾಯಿ ಕೇಳಕರ ಅವರು ಮಾಡಿದ ಸಮಾಜ ಸೇವೆಯನ್ನು ಸ್ಮರಿಸಿದರು. 

ವನಿತಾ ಸೇವಾ ಸಮಾಜದ ಅಧ್ಯಕ್ಷ ಟೋಪನಗೌಡ ಪಾಟೀಲ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದಿಸಿ, ವನಿತಾ ಸೇವಾ ಸಂಸ್ಥೆಯು ಶಿಕ್ಷಣ ರಂಗದಲ್ಲಿ ನಡೆದು ಬಂದ ದಾರಿಯನ್ನು ವಿವರಿಸಿದರು.   

ಸಂಸ್ಕಾರ ಭಾರತಿ ಅಧ್ಯಕ್ಷೆ ಡಾ.ಸೌಭಾಗ್ಯ ಕುಲಕರ್ಣಿ ಮಾತನಾಡುತ್ತ ತಮ್ಮ ಜೀವನದ ಶೇ.10ರಷ್ಟನ್ನು ಸಾಮಾಜಿಕ ಚಿಂತನೆ, ಸಮಾಜ ಕಾರ್ಯಕ್ಕೆ ಮೀಸಲಿಟ್ಟಲ್ಲಿ ನಮ್ಮ ರಾಷ್ಟ್ರ ಸುಭದ್ರ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.  ಪ್ರಮುಖರ ಮಾತು, ಭಾಷಣಗಳನ್ನು ಕೇಳಿ ಅದನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.     

ಮೇರಾ ಯುವ ಭಾರತ ಜಿಲ್ಲಾ ಯುವ ಅಧಿಕಾರಿ ಗೌತಮ ರೆಡ್ಡಿ ಮಾತನಾಡುತ್ತ  ಯುವ ಅಭಿವೃದ್ಧಿ ಮತ್ತು ಯುವ ನೇತೃತ್ವದ ಅಭಿವೃದ್ಧಿ ಎಂಬ ಧ್ಯೇಯವನ್ನಿಟ್ಟುಕೊಂಡು ಕೇಂದ್ರ ಸರ್ಕಾರ ಒಂದು ಹೊಸ ಇಲಾಖೆಯನ್ನು ಸ್ಥಾಪಿಸಿದೆ ಅದುವೇ ಮೇರಾ ಯುವ ಭಾರತ ಆಗಿದೆ ಎಂದರು.   

ಡಾ. ಶ್ಯಾಮ ಪ್ರಸಾದ ಮುಖರ್ಜಿ ಕುರಿತು ಏರಿ​‍್ಡಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಕಲಾವತಿ ಅಗಸಿಮನಿ ಪ್ರಥಮ, ಮಲ್ಲಮ್ಮ ಹಾದಿಮನಿ ದ್ವಿತೀಯ, ಕವಿತಾ ಹಂಚಿನಮನಿ ತೃತೀಯ ಹಾಗೂ ಪವಿತ್ರಾ ಹೊಸಮನಿ, ಸೃಷ್ಠಿ ಉಳ್ಳಿಗೇರಿ ಸಮಾಧಾನಕರ ಬಹುಮಾನ ಪಡೆದರು.    

ಪ್ರತಿಭಾ ಪಾಟೀಲ ನಿರೂಪಿಸಿದರು, ಅನುಶ್ರೀ ಪ್ರಾರ್ಥಿಸಿದರು, ವೀರಣ್ಣ ಪತ್ತಾರ ಸ್ವಾಗತಿಸಿದರು, ವೈಶಾಲಿ ರಸಾಳಕರ ಧ್ಯೇಯಗೀತೆ ಪ್ರಸ್ತುತ ಪಡಿಸಿದರು.  ರಾಮನಗೌಡ ದೊಡ್ಡಮನಿ ವಂದಿಸಿದರು.   

ಎಮ್‌.ಜಿ. ಸಿಂಧಗಿ, ಡಾ. ಶರಭೇಂದ್ರಸ್ವಾಮಿ ಬಿ.ಎಮ್, ರವಿ ರಸಾಳಕರ, ರಮೇಶ ನಾಡಗಿರ, ಪ್ರಸಾದ ಮಡಿವಾಳರ, ಪ್ರಕಾಶ ಬಾಳಿಕಾಯಿ, ಸಾಧನಾ ಮಿರಜಕರ, ಶಿಲ್ಪಾ ಪಾಂಡೆ, ಶಿವಾಜಿ ಕಡ್ಡೆಪ್ಪನವರ, ಅಶೋಕ ನಾಯ್ಕ್‌, ಭಾಗ್ಯಶ್ರೀ ಮುಂತಾದವರು ಉಪಸ್ಥಿತರಿದ್ದರು.