ವರದಕ್ಷಿಣೆ ಕಿರುಕುಳ: ಬಸ್ ಕಂಡಕ್ಟರ್‌ಗೆ ಆರು ತಿಂಗಳು ಜೈಲು ಶಿಕ್ಷೆ
Dowry harassment: Bus conductor sentenced to six months in jail
ಹೂವಿನಹಡಗಲಿ 28: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಜೆಎಂಎಫ್ ಸಿ ನ್ಯಾಯಾಲಯ ಬಸ್ ಕಂಡಕ್ಟರ್ ಗೆ ಆರು ತಿಂಗಳು ಜೈಲು, ರೂ. 50 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಮೊದಲ ಪತ್ನಿಯನ್ನು ದೂರವಾಗಿಸಿ, ಎರಡನೇ ಮದುವೆಯಾದ ಕೊಮಾರನಹಳ್ಳಿ ತಾಂಡಾದ ಆರೋಪಿ, ರಾಣೆಬೆನ್ನೂರು ಸಾರಿಗೆ ಘಟಕದಲ್ಲಿ ಆರೋಪಿ ರವಿ ನಾಯ್ಕ ಕಂಡಕ್ಟರ್ ಕೆಲಸ ಮಾಡುತ್ತಿದ್ದಾನೆ. ದಾಸರಹಳ್ಳಿ ತಾಂಡಾದ ಆಶಾಬಾಯಿಯನ್ನು 2010ರಲ್ಲಿ ಮದುವೆಯಾಗಿದ್ದ. ವರದಕ್ಷಿಣೆ ಕಿರುಕುಳ ನೀಡಿ ಆಕೆಯಿಂದ ದೂರವಾಗಿ ಸ್ವಗ್ರಾಮದಲ್ಲಿ ಎರಡನೇ ಮದುವೆಯಾಗಿದ್ದ. ಈ ಕುರಿತು ಮೊದಲ ಪತ್ನಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ನ್ಯಾಯಾಲಯದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದರಿಂದ ನ್ಯಾಯಾಧೀಶರಾದ ಟಿ.ಅಕ್ಷತಾ ಅವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದಾರೆ. ಆರೋಪಿ ರವಿ ನಾಯ್ಕನಿಗೆ 6 ತಿಂಗಳು ಸಾದಾ ಜೈಲು ಶಿಕ್ಷೆ, ರೂ. 10 ಸಾವಿರ ದಂಡ, ದಂಡ ಪಾವತಿಸದಿದ್ದಲ್ಲಿ 3 ತಿಂಗಳು ಸಾದಾ ಜೈಲು, ವರದಕ್ಷಿಣೆ ನಿಷೇಧ ಕಾಯ್ದೆಯ ವಿವಿಧ ಕಲಂಗಳಡಿ ಒಟ್ಟು ರೂ. 30 ಸಾವಿರ ದಂಡ ವಿಧಿಸಲಾಗಿದೆ.
ಆರೋಪಿಯ ತಾಯಿ ಲಕ್ಷ್ಮಿಬಾಯಿಗೆ ರೂ. 20 ಸಾವಿರ ದಂಡ ತಪ್ಪಿದಲ್ಲಿ 3 ತಿಂಗಳು, ಜೈಲು, ಆರೋಪಿಯ ಸಹೋದರ ಲಾವಾನಾಯ್ಕ, 2ನೇ ಪತ್ನಿಯ ತಂದೆತಾಯಿಯಾದ ಮಂಗ್ಲನಾಯ್ಕ, ರೇವಣಿಬಾಯಿ ಅವರಿಗೆ ತಲಾ ರೂ. 500 ದಂಡ, ತಪ್ಪಿದಲ್ಲಿ 20 ದಿನ ಜೈಲು ಶಿಕ್ಷೆ ವಿಧಿಸಿದೆ. ದಂಡದ ಮೊತ್ತ ರೂ. 50 ಸಾವಿರ ಮೊದಲ ಪತ್ನಿ ಆಶಾಬಾಯಿಗೆ ಪರಿಹಾರ ನೀಡಲು ನ್ಯಾಯಾಲಯ ಸೂಚಿಸಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಅಜ್ಜಯ್ಯ ವಾದ ಮಂಡಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 