ಡಿ.29ರಂದು ದಾನಿಗಳ ಸತ್ಕಾರ ಸಮಾರಂಭ

ಅಥಣಿ 27:    ರಾಘವೇಂದ್ರ ಸ್ವಾಮಿಗಳ ಮಠದ ಅಭಿವೃದ್ಧಿಗಾಗಿ ಸಹಕರಿಸಿದ ದಾನಿಗಳ ಸತ್ಕಾರ ಸಮಾರಂಭ ಡಿಸೆಂಬರ 29 ರಂದು ಮುಂಜಾನೆ 10.30ಕ್ಕೆ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಘವೇಂದ್ರ ಮಠದ ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಎಸ್.ವ್ಹಿ.ಜೋಶಿ ತಿಳಿಸಿದರು. ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.  

      1946 ರಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧಕ ದಿ.ಭೀಮದಾಸ ಹೂಗಾರ ತಮ್ಮ ಸ್ವಗೃಹದಲ್ಲಿ ಮಂತ್ರಾಲಯದ ಮೃತ್ತಿಕಾ ಮತ್ತು ವೃಂದಾವನ ಪ್ರತಿಷ್ಠಾಪಿಸಿ ಮನೆ ಮನೆ ಗೋಪಾಳ ಬೇಡಿ ಶ್ರೀಮಠವನ್ನು ಮುನ್ನಡೆಸಿಕೊಂಡು ಬಂದರು. ನಂತರದ ದಿನಗಳಲ್ಲಿ ಸ್ಥಳೀಯ ಚನ್ನಬಸಪ್ಪ ಬುಲರ್ಿ, ಬಳವಂತರಾವ ಪಾಟೀಲ, ಶಂಭು ಕಣ್ಣೂರ, ತುಳಸಿದಾಸ ದಯಾಳಜಿ ಭಾಟೆ ಇವರು ವಿಕ್ರಂಪೂರ ಬಡಾವಣೆಯಲ್ಲಿ ರಾಘವೇಂದ್ರ ಸ್ವಾಮಿಗಳ ಮಠ ನಿಮರ್ಿಸಲು ಸ್ಥಳ ದಾನ ಮಾಡಿದರು ಇಂದು ಅವರು ಮಾಡದ ದಾನದ ಪ್ರತಿಫಲವೇ ಮಠ ಅಭಿವೃದ್ಧಿಯಾಗಿದೆ ಎಂದು ತಿಳಿಸಿದ ಅವರು ದಿ.ಭೀಮದಾಸ ಹೂಗಾರ ಇವರಿಗೆ ವಯಸ್ಸಾದಂತೆ ಅವರು ಮಠದ ಆಡಳಿತವನ್ನು ಅಂದಿನ ಬ್ರಾಹ್ಮಣ ಸಮಾಜದ ಮಧ್ವಾಚಾರ್ಯ ನರಗುಂದ ಇವರಿಗೆ 1961 ರಲ್ಲಿ ವಹಿಸಿಕೊಟ್ಟರು.  

      ಮಧ್ವಾಚಾರ್ಯ ನರಗುಂದ ಇವರು  ಮಠದ ಸಂಪೂರ್ಣ ಅಭಿವೃದ್ಧಿಗಾಗಿ ಆರ್.ಎಲ್.ಅಡಿಗಾ, ಶ್ಯಾಂ ಗುಂಡಾ ಸೇರಿದಂತೆ ನಾಲ್ಕು ಜನರಿಗೆ  ಹಸ್ತಾಂತರಿಸಿದರು. ಮುಂದೆ 1972 ರಲ್ಲಿ ಬಾಂಬೆ ಟ್ರಸ್ಟ ಆಕ್ಟ ಅಡಿಯಲ್ಲಿ ರಾಘವೇಂದ್ರ ಮಠದ ಟ್ರಸ್ಟ ಪ್ರಾರಂಭಿಸಲಾಯಿತು ನಂತರ ಮಠದ ಆವರದಲ್ಲಿ ಒಂದೊಂದಾಗಿ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭಗೊಂಡವು. 1974 ರಲ್ಲಿ ಮಠದ ಸಭಾ ಮಂಟಪ ಹಾಗೂ ಕಾಲಕ್ರಮೇಣ ಧಾಮರ್ಿಕ ಚಟುವಟಿಕೆಗಳಿಗೆ ಮತ್ತು ಪಾಠ, ಪವ್ರವಚನಗಳಿಗೆ ದಾಸ ಮಂದಿರಗಳನ್ನು ದಾನಿಗಳ ಸಹಕಾರದಿಂದ ನಿಮರ್ಿಸಲಾಯಿತು.  1999 ರಲ್ಲಿ ಭಕ್ತರ ಅನಕೂಲಕ್ಕಾಗಿ ಅಂದಾಜು 35 ಲಕ್ಷ ರೂ.ಗಳ ವೆಚ್ಚದಲ್ಲಿ ಬೃಹತ್ ಕಲ್ಯಾಣ ಮಂಟಪವನ್ನು ನಿಮರ್ಿಸಲಾಯಿತು.

       ಇತ್ತೀಚಿಗೆ ಕಲ್ಯಾಣ ಮಂಟಪದ ಪಕ್ಕದಲ್ಲಿಯೇ ಸಭಾ ಮಂಟಪವನ್ನೂ ಕೂಡ ದಾನಿಗಳ ಸಹಕಾರದಿಂದ ನಿಮರ್ಿಸಲಾಯಿತು. ಮಠದ ಬೆಳವಣಿಗೆಯಲ್ಲಿ ಎಲ್ಲ ಧರ್ಮ, ಜಾತಿ, ಜನಾಂಗದ ಮಹನೀಯರು ತನು, ಮನ, ಧನದಿಂದ ಕೈ ಜೋಡಿಸಿದ್ದಾರೆ ಇದರ ಪರಿಣಾಮವೇ ಇಂದು ಮಠ ಸಮಗ್ರ ಅಭಿವೃದ್ಧಿಯಾಗಿದೆ ಎಂದು ತಿಳಿಸಿದ ಅವರು ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ದಾನಿಗಳನ್ನು ಸತ್ಕರಿಸಲಾಗುವುದು ಮತ್ತು 75 ವರ್ಷ ಮೇಲ್ಪಟ್ಟ 5 ಸ್ವಯಂ ಸೇವಕರಿಗೂ ಗೌರವಿಸಲಾಗುವುದು ಎಂದು ತಿಳಿಸಿದರು.  

         ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲರಾದ ಡಾ.ಸತ್ಯಧ್ಯಾನಾಚಾರ್ಯ ಕಟ್ಟಿ ಆಗಮಿಸುವರು. ಅಧ್ಯಕ್ಷತೆಯನ್ನು ಸಮಾಜದ ಹಿರಿಯರಾದ ಅರವಿಂದರಾವ ದೇಶಪಾಂಡೆ ವಹಿಸುವರು.. ಕಾರ್ಯಕ್ರಮದಲ್ಲಿ ವಿಜಯಪುರದ ಮಧ್ವಾಚಾರ್ಯ ಮೊಖಾಶಿ ಉಪಸ್ಥಿತರಿರುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿಶ್ವಸ್ಥ ಮಂಡಳಯ ಅನೀಲ ದೇಶಪಾಂಡೆ (ಹಿಡಕಲ್), ಎಸ್.ಜಿ.ನರಗುಂದ, ಎಲ್.ವ್ಹಿ.ಕುಲಕಣರ್ಿ, ರಾಜು ಪಾಟೀಲ, ಶ್ರೀನಿವಾಸಾಚಾರ್ಯ ಬಿಳ್ಳೂರ ಉಪಸ್ಥಿತರಿದ್ದರು.