ಮಳೆಗಾಗಿ ಶೇಡಬಾಳದಲ್ಲಿ ಕತ್ತೆಗಳ ಮದುವೆ

ಮಳೆಗಾಗಿ ಶೇಡಬಾಳದಲ್ಲಿ ಕತ್ತೆಗಳ ಮದುವೆ Donkeys' wedding in Shedbal for rain

ಕಾಗವಾಡ 29: ತಾಲೂಕಿನಲ್ಲಿ ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದ್ದು, ಅನ್ನದಾತ ರೈತರು ಕಂಗಾಲಾಗಿದ್ದಾರೆ. ಕೂಡಲೇ ಮಳೆ ಪ್ರಾರಂಭವಾಗಿ ಬೆಳೆಗಳು ಚೆನ್ನಾಗಿ ಬೆಳೆಯಲಿ ಎಂದು ಶೇಡಬಾಳ ಪಟ್ಟಣದ ರೈತರು ಸೇರಿ ಸೋಮವಾರ ದಿ. 29 ರಂದು ಕತ್ತೆಗಳ ಮದುವೆ ಮಾಡಿ, ಮಳೆರಾಯನಿಗೆ ಪ್ರಾರ್ಥನೆ ಮಾಡಿದ್ದಾರೆ. ಈ ವೇಳೆ ಶೇಡಬಾಳ ಪಟ್ಟಣದ ರೈತರಾದ ವಿನೋದ್ ಪಾಟೀಲ್, ವರ್ಧಮಾನ್ ಪಾಟೀಲ್, ಸುನೀಲ್ ಪಾಟೀಲ್, ಅಶ್ವತ್ ಪಾಟೀಲ್, ಸದಾಶಿವ ನಿಕಮ್, ಪ್ರಕಾಶ್ ಇರಾಜ್, ಅಣ್ಣಾಸಾಬ್ ಗಾಯಕವಾಡ, ಶಿವಾಜಿ ನರಸಾಯಿ, ದೀಪಕ್ ಪೂಜಾರಿ, ಅಪ್ಪು ಗುರವ, ಅಜಿತ್ ಜಾಧವ್, ವಿನೋದ ಸವದಿ, ಧನಪಾಲ್ ಶಿರಗಾವೆ, ಅಪ್ಪು ನರವಾಡೆ, ಶ್ರೀಕಾಂತ್ ಪೂಜಾರಿ, ಉಮೇಶ ಶಿಂಧೆ, ಮಹಾದೇವ ಚಿಂಚಲೆ, ಚನ್ನಪ್ಪ ಮಾಳಿ, ಶಂಭು ಕಾವೇರಿ, ಮಾರುತಿ ಶಿಂಧೆ ಸೇರಿದಂತೆ ಗ್ರಾಮಸ್ಥರು, ರೈತರು ಉಪಸ್ಥಿತರಿದ್ದರು.