ತಾಂಬಾ ಗ್ರಾಮದಲ್ಲಿ ಮಹಾದೇವರ ಜಾತ್ರೆ ಸಂಭ್ರಮ

  ತಾಂಬಾ ಗ್ರಾಮದಲ್ಲಿ ಮಹಾದೇವರ ಜಾತ್ರೆ ಸಂಭ್ರಮ  Mahadev fair celebrated in Tamba village

ಲೋಕದರ್ಶನ ವರದಿ 

ತಾಂಬಾ   29: ಮೈಸೂರಿನಿಂದ ತಾಂಬಾ ಗ್ರಾಮಕ್ಕೆ ಬಂದು ನೆಲೆಸಿದ ಪವಾಡ ಪುರುಷ ಮೈಸೂರಿನ ಒಡೆಯ ರಾಜ ಮನೆತನದ ಮೂರನೇ ಮಗನಾಗಿ ಜನಸಿದ ಮಹಾದೇವರವರು ಸಂಸಾರ ತ್ಯಜೀಸಿ ಲೋಕ ಕಲ್ಯಾಣಕ್ಕಾಗಿ ಶಿವನ ಅವತಾರ ತೋಟ್ಟು ಸಂಚಾರ ಮಾಡುತ್ತಾ ತಾಂಬಾ ಗ್ರಾಮಕ್ಕೆ ಬಂದು ಪಾರ್ವತಮ್ಮ ನಂದಿಕೋಲ ಅವರ ಮನೆಯಲ್ಲಿ ವಾಸವಾಗಿದ್ದರು.  

ಪವಾಡಗಳು : ಒಂದು ದಿನ ಸ್ನಾನ ಮಾಡುವಾಗ ಮಗುವಾಗಿ ಆಟವಾಡಿದ ಪ್ರಸಂಗ ನಡೆದಿದೆ, ಸುರಪೂರದ ದೊರೆ ಮಳೆಗಾಗಿ ಮಹಾದೇವರನ್ನು ಕೈಕಾಲುಗಳನ್ನು ಕಟ್ಟಿ ಮಳೆ ಬರುವವರೆಗೆ ಬಿಚ್ಚುದಿಲ್ಲವೆಂದು ಹೇಳಿದ್ದರು ತಕ್ಷಣವೇ ಮಳೆ ಬಂದು ರಾಜವಾಡೆ ಬಿದ್ದು ಹಾಳಾಯಿತು. ಜೈವಾಡಿ ಗ್ರಾಮದ ಮಲ್ಲಯ್ಯ ಹಿರೇಮಠನವರ ಮನೆಯಲ್ಲಿ ಬಂಜೆತನದಿಂದ ಕೂಡಿ ಮಲ್ಲಯ್ಯ ಕುಟುಂಬಕ್ಕೆ ಮಕ್ಕಳು ನೀಡಿ ಬಂಜೆತನ ನಿವಾರಣೆ ಮಾಡಿ ಮಕ್ಕಳ ಕರುಣಿಸಿದರು.

ಶ್ರೀಶೈಲದಲ್ಲಿ ಲಿಂಗವಿಲ್ಲದವರಿಗೆ ಅನ್ನ ಪ್ರಸಾದ ನೀಡುವದಿಲ್ಲ ಎಂದರು ಮಹಾದೇವ ಅಜ್ಜರವರಲ್ಲಿ ಲಿಂಗವಿರಲ್ಲಿಲ್ಲ ಲಿಂಗವಿದ್ದರ ಲಿಂಗ ಮಾಯೆ ಮಾಡಿ ಪ್ರಸಾದ ಸೇವಿಸಿದ ಮಹಾದೇವ ಅಜ್ಜನವರು ಹಿಗೆ ಅನೇಕ ಪವಾಡ ಮಾಡುತ್ತಾ ಜ್ಯೆವಾಹಿ ಗ್ರಾಮ ಸೂರಪೂರ, ಬಂಗಾರ ಹಟ್ಟಿ, ಹೀಗೆ ಹಲವಾರು ಗ್ರಾಮಗಳಲ್ಲಿ ಪವಾಡ ಮಾಡುತ್ತಾ ಸಂಚಾರ ಮಾಡಿದರು ಮಹಾದೇವ ಅಜ್ಜನವರ ಕೊನೆದಾಗಿ ತಾಂಬಾ ಗ್ರಾಮದ ಮಲ್ಲಿಕಾರ್ಜೂನ ದೇವಾಲಯದಲ್ಲಿ ಲಿಂಗೆಕ್ಯರಾದರು ಅವರ ಗದ್ದುಗೆಯನ್ನು ಗವಿತೋಟದಲ್ಲಿ ನಿರ್ಮಿಸಲಾಗಿದೆ.

ಅದರಂತೆ ಪ್ರತಿವರ್ಷ ಕಾರಹುಣ್ಣಿಮೆಯ ಕರಿಯ ದಿನದಂದು ಮಹಾದೇವ ಜಾತ್ರೆ ನಡೆಯುತ್ತದೆ ಈ ಜಾತ್ರೆಗೆ ನೇರೆಯ ಮಹಾರಾಷ್ಟ್ರದ ರಾಜ್ಯದಿಂದ ಸಾಧು ಸಂತರು ಆಗಮಿಸುತ್ತಾರೆ ಬಂದ ಭಕ್ತಾದಿಗಳಿಗೆ ಹಾಗೂ ಸಾಧು ಸಂತರಿಗೆ ಅನ್ನ ಧಾಸೋಹ ನೇರವೇರುತ್ತದೆ.