ವೀರೇಶ್ವರ ಪುಣ್ಯಾಶ್ರಮದಲ್ಲಿ ಅಕ್ರಮ, ಅಧಿಕಾರ ದುರುಪಯೋಗ ಆರೋಪ : ಜಿಲ್ಲಾಧಿಕಾರಿ ಕ್ರಮಕ್ಕೆ ಒತ್ತಾಯ

ವೀರೇಶ್ವರ ಪುಣ್ಯಾಶ್ರಮದಲ್ಲಿ ಅಕ್ರಮ, ಅಧಿಕಾರ ದುರುಪಯೋಗ ಆರೋಪ : ಜಿಲ್ಲಾಧಿಕಾರಿ ಕ್ರಮಕ್ಕೆ ಒತ್ತಾಯ Allegations of illegality and abuse of power at Veereshwara Punyashrama: Demand for action from the

ಲೋಕದರ್ಶನ ವರದಿ 

 ಗದಗ : ನಾಡಿನ ಸಾವಿರಾರು ಜನರ ಅಂಧರಿಗೆ ಸಂಗೀತ ಶಿಕ್ಷಣ ನೀಡುವ ಮೂಲಕ ಅಂಧರ ಬಾಳಿಗೆ ಬೆಳಕು ನೀಡಿರುವ ಲಿಂ. ಪಂಚಾಕ್ಷರ ಗವಾಯಿಗಳ ಹಾಗೂ ಲಿಂ. ಪಂ. ಪುಟ್ಟರಾಜ ಕವಿ ಗವಾಯಿಗಳ ಕಟ್ಟಿದ ವೀರೇಶ್ವರ ಪುಣ್ಯಾಶ್ರಮದಲ್ಲಿ ಕಳೆದ ವ್ಘಿಳ್ದಹ್ಕ್ಧ್ಘ್ದಿ ವರ್ಷಗಳಿಂದ ನಡೆಯುತ್ತಿರುವ ಅಕ್ರಮ, ಹಣಕಾಸು ದುರುಪಯೋಗ ಹಾಗೂ ಆಡಳಿತ ವೈಫಲ್ಯ ಕುರಿತು ಸರ್ಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.  

ಪುಣ್ಯಾಶ್ರಮದಲ್ಲಿ ಭಕ್ತರಿಂದ ಸಂಗ್ರಹವಾಗುವ ದವಸಧಾನ್ಯ ಹಾಗೂ ಹಣವನ್ನು ಸರಿಯಾಗಿ ಬಳಕೆ ಮಾಡದೆ ದುರುಪಯೋಗವಾಗುತ್ತಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ, ಆಶ್ರಮದಲ್ಲಿ ಅನಾಥರು ಹಾಗೂ ಅಂಧ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳೂ ವ್ಯಕ್ತವಾಗಿವೆ.  

ಆಶ್ರಮದ ಒಳಗೆ ಹಾಗೂ ಹೊರಗೆ ಇರುವ ಭೂಮಿಯಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಕೆಲ ನಿರ್ದಿಷ್ಟ ವ್ಯಕ್ತಿಗಳು ಆಶ್ರಮದ ಆಡಳಿತದ ಮೇಲೆ ಅನಧಿಕೃತ ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪವೂ ಮಾಡಲಾಗಿದೆ.  

ಹಿಂದೂ ಸಂಘಟನೆಗಳ ಮುಖಂಡರು ಮಾತನಾಡಿ, ಆಶ್ರಮದ ಪಾವಿತ್ರ್ಯವನ್ನು ಕಾಪಾಡಬೇಕು, ದಾನಧರ್ಮದ ಹಣ ಸರಿಯಾದ ಉದ್ದೇಶಕ್ಕೆ ಬಳಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.  ಜಿಲ್ಲಾಧಿಕಾರಿಗಳು ಈ ಮನವಿಯನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.