ಡೋಣಿ ನದಿ ಸೇತುವೆ ಜಲಾವೃತ ಸಂಚಾರ ಸ್ಥಗಿತ

ಡೋಣಿ ನದಿ ಸೇತುವೆ ಜಲಾವೃತ ಸಂಚಾರ ಸ್ಥಗಿತ  Doni River Bridge flooded, traffic disrupted

ಡೋಣಿ ನದಿ ಸೇತುವೆ ಜಲಾವೃತ ಸಂಚಾರ ಸ್ಥಗಿತ  

ತಾಳಿಕೋಟಿ 08: ಡೋಣಿ ನದಿಗೆ ಅಪಾರ ಪ್ರಮಾಣದ ನೀರು ಬಂದಿರುವುದರಿಂದ ಕೆಳಸೇತುವೆ ಜಲಾವೃತಗೊಂಡು ಗುರುವಾರ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.  ಪಟ್ಟಣದ ಸಮೀಪದಲ್ಲಿ ಹಾದು ಹೋಗುವ ಡೋಣಿ ನದಿಗೆ ಈ ಮೊದಲು ಅಡ್ಡಲಾಗಿ ನಿರ್ಮಿಸಲಾದ ಮೇಲ ಸೇತುವೆ ಶಿಥಿಲಗೊಂಡಿರುವುದರಿಂದ ಅದರ ಪುನರ್ ನಿರ್ಮಾಣಕ್ಕಾಗಿ ಹೆಚ್ಚಿನ ಆಸಕ್ತಿ ವಹಿಸಿದ ಕ್ಷೇತ್ರದ ಶಾಸಕರಾದ ಅಪ್ಪಾಜಿ ನಾಡಗೌಡರು ಇದಕ್ಕೆ ಅಗತ್ಯ ಇರುವ ಸುಮಾರು 30 ಕೋಟಿ ಅನುದಾನವನ್ನು ಮಂಜೂರು ಮಾಡಿಸಿಕೊಂಡಿದ್ದು ಕಾಮಗಾರಿಯೂ ಭರದಿಂದ ನಡೆದಿದೆ, ಇದಕ್ಕಾಗಿ ಮೇಲ ಸೇತುವೆಯನ್ನು ಸಂಪೂರ್ಣವಾಗಿ ತೆಗೆಯಲಾಗಿದೆ ಇದರಿಂದ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಕೆಳ ಸೇತುವೆಯನ್ನು ರಸ್ತೆ ಮಾರ್ಗಕ್ಕಾಗಿ ಬಳಸಿಕೊಳ್ಳಿಲಾಗುತ್ತಿದೆ ಆದರೆ ಈ ಸೇತುವೆ ತೀರಾ ಕೆಳಮಟ್ಟದಲ್ಲಿ ಇರುವುದರಿಂದ ಮಳೆಗಾಲದಲ್ಲಿ ಡೋಣಿ ನದಿಗೆ ಸ್ವಲ್ಪ ಹೆಚ್ಚು ನೀರು ಬಂದರೆ ಸಾಕು ಆ ನೀರು ಸೇತುವೆ ಮೇಲೆ ಹಾಯ್ದು ಜಲಾವೃತಗೊಳ್ಳುತ್ತದೆ ಇದರಿಂದ ತಾಳಿಕೋಟಿ ವಿಜಯಪುರ ಮಾರ್ಗದ ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತ ಗೊಳ್ಳುತ್ತದೆ ಇದರಿಂದ ಇಲ್ಲಿಂದ ಹೋಗು ಬರುವ ಗ್ರಾಮಸ್ಥರಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತದೆ ಅವರು ಕೇವಲ ನಾಲ್ಕೈದು ಕಿಲೋಮೀಟಗಳಲ್ಲಿ ಸಂಚರಿಸಬೇಕಾದ ದೂರಕ್ಕೆ ಕನಿಷ್ಠ 8 ರಿಂದ 10 ಕಿಲೋ ಮೀಟರದಷ್ಟು ದೂರದ ತಾಳಿಕೋಟಿ ಮೂಕಿಹಾಳ ಮಿಣಜಗಿ ಮಾರ್ಗವಾಗಿ ಪ್ರಯಾಣಿಸಿ ಬರಬೇಕಾಗುತ್ತದೆ. ಕಳೆದ ಮೂರು ವರ್ಷಗಳಿಂದ ಸಾರ್ವಜನಿಕರು ಈ ಸಮಸ್ಯೆಯನ್ನು ಎದುರಿಸುತ್ತಿದ್ದು ಆದಷ್ಟು ಬೇಗ ಮೇಲ್ಸೇತುವೆ ನಿರ್ಮಾಣ ವಾಗಬೇಕೆಂಬುದು ಅವರ ಬೇಡಿಕೆಯಾಗಿದೆ. ಸೇತುವೆ ನಿರ್ಮಾಣದ ಕೆಲಸ ಬರದಿಂದ ಸಾಗಿದೆಯಾದರೂ ಮಳೆಗಾಲ ಇರುವುದರಿಂದ ಕೆಲಸ ಮಾಡಲು ಸಾಕಷ್ಟು ತೊಂದರೆ ಆಗುತ್ತಿದೆ ಈ ಸೇತುವೆ ಕಾಮಗಾರಿ ಮುಗಿಯಲು ಕನಿಷ್ಠ ಒಂದು ವರ್ಷವಾದರೂ ಕಾಲಾವಧಿ ಬೇಕು ಬಹುಶ ಬರುವ ವರ್ಷದಲ್ಲಿ ಈ ಸಮಸ್ಯೆಯಿಂದ ಸಾರ್ವಜನಿಕರಿಗೆ ಮುಕ್ತಿ ಸಿಗಬಹುದು. ಸ್ಥಳದಲ್ಲಿ ಯಾವುದೇ ರೀತಿಯ ಅಡ್ಡಿ ಆತಂಕ ಆಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಬ್ಯಾರಿ ಖೇಡಗಳನ್ನು ಹಾಕಿ ಅಗತ್ಯ ಬಂದೋಬಸ್ತಿ ಒದಗಿಸಿದೆ.