ಸಂಬರಗಿ 28: ದಾನ ಧರ್ಮಗಳಲ್ಲಿ ಬಹಳಷ್ಟು ದಾನಗಳಿವೆ. ಅದರಲ್ಲಿ ಮುಖ್ಯವಾದ ದಾನ ಶಿಕ್ಷಣಕ್ಕಾಗಿ ನೀಡುವ ದಾನ ಬಹಳ ಶ್ರೇಷ್ಠವಾದ ದಾನವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ನದಿ ಇಂಗಳಗಾಂವ ಗ್ರಾಮದ ಪೇರಲ ತೋಟದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿವಂಗತ ರಾಯಗೌಡ ಗೂಳಪ್ಪನವರ ಇವರ ಸ್ಮರಣಾರ್ಥವಾಗಿ ಸುಮಾರು ಒಂಬತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹಾಗೂ ಸೈನಿಕ ಲಕ್ಷ್ಮಣ ಹಿಂದೂರಾವ ಘೋರೆ್ಡ ಇವರು ಎರಡು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಟ್ಟಿದ ನೂತನ ಶಾಲಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಶಾಲಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಂಡು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಅವಾಗ ಮಾತ್ರ ಶಿಕ್ಷಣಕ್ಕಾಗಿ ಕೊಟ್ಟ ದಾನಕ್ಕೆ ಹಾಗೂ ದಾನ ನೀಡಿದ ಮಹನೀಯರಿಗೆ ಜೀವನ ಸ್ವಾರ್ಥಕವೆನಿಸಿದಂತಾಗುತ್ತದೆ ಎಂದು ಹೇಳಿದರು.
ಇನ್ನು ಈ ವೇಳೆ ದಾನಿಗಳಾದ ಮತ್ತು ಪ್ರಥಮ ದರ್ಜೆ ಗುತ್ತಿಗೆದಾರರಾದ ಶಿವರುದ್ರ ಗೂಳಪ್ಪನವರ ಹಾಗೂ ಮುರಗೇಪ್ಪ ಗುಳಪ್ಪನ್ನವರ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಎಚ್ ಎಮ್ ತೇಲಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರು ಹಾಗೂ ಶಿಕ್ಷಕರಾದ ಮಹಾಂತೇಶ ಗುಳಪ್ಪನ್ನವರ, ಬಿ ಎಸ್ ಕಾಗವಾಡ,ಏಫ ಎಸ್ ಪಾಟೇಲ, ಕರ್ಣ ಹುಚ್ಚನ್ನವರ, ಇಮಾಮ್ ಮುಕ್ಕೆರಿ,ಎಸ್ ಡಿ ಎಮ್ ಸಿ ಅಧ್ಯಕ್ಷ ಅಶೋಕ ತೇವರಮನಿ, ಮುಖಂಡರರಾದ ಶ್ರೀಶೈಲ ನಾಯಿಕ, ರಾಜು ಗುಡೋಡಗಿ, ಗೌಡಪ್ಪ ಚನ್ನಣ್ಣವರ, ನಾಗಪ್ಪ ಗುಳಪ್ಪನ್ನವರ, ಸಂಜು ಪಾಟೀಲ, ಮಹಾಂತೇಶ ಪಾಟೀಲ ಸತೀಶ ಗುಂಡಕಲ್ಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಕರ್ಣ ಹುಚ್ಚನ್ನವರ ಹಾಗೂ ವಂದನಾರೆ್ನ ಶಿಕ್ಷಕರಾದ ಮಹಾಂತೇಶ ಗುಳಪ್ಪನ್ನವರ ಮಾಡಿದರು.ಫೋಟೋನದಿ ಇಂಗಳಗಾವ್ ಗ್ರಾಮದಲ್ಲಿ ಪ್ರಾಥಮಿಕ ಶಾಲೆಗಳಿಗೆ ದಾನಿಗಳಾದ ಮತ್ತು ಪ್ರಥಮ ದರ್ಜೆ ಗುತ್ತಿಗೆದಾರರಾದ ಶಿವರುದ್ರ ಗೂಳಪ್ಪನವರ ಹಾಗೂ ಮುರಗೇಪ್ಪ ಗುಳಪ್ಪನ್ನವರ ಶಾಸಕ ಲಕ್ಷ್ಮಣ ಸವದಿ ಸನ್ಮಾನ ಮಾಡುತ್ತಿರುವ ಚಿತ್ರ.