ರಕ್ತದಾನ ಮಾಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ: ಡಾ.ಅರುಂಧತಿ ಕುಲಕರ್ಣಿ
Donating blood improves memory: Dr. Arundhati Kulkarni
ಗದಗ 26: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲಾ ್ಲಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಗದಗ ಹಾಗೂ ಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಇವರುಗಳ ಆಶ್ರಯದಲ್ಲಿ ಗದಗ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಅರುಂಧತಿ ಕುಲಕರ್ಣಿರವರು ಮಾತನಾಡಿ ಸ್ಪರ್ಧೆಯಲ್ಲಿ ಸೋಲು ಗೆಲವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಹೆಚ್.ಐ.ವಿ. ಏಡ್ಸ್ ಸಾಮಾನ್ಯ ಖಾಯಿಲೆಯಾಗಿದ್ದು, ಕೋವಿಡ್‌ನಷ್ಟು ಭಯಾನಕ ಇಲ್ಲ. ಹಾಗೂ ಇದನ್ನು ಓಷೊಧಪಚಾರವನ್ನು ತೆಗೆದುಕೊಂಡು ಜೀವನಾವಧಿಯನ್ನು ಹೆಚ್ಚಿಗೆ ಮಾಡಬಹುದು ಎಂದು ತಿಳಿಸಿದರು. ಹಾಗೂ ರಕ್ತದಾನದ ಮಹತ್ವವನ್ನು ತಿಳಿಸುತ್ತಾ 18 ವರ್ಷತುಂಬಿದವರು, ಹಿಮೋಗ್ಲೋಬಿನ್ ಪ್ರಮಾಣ 12.5 ಮಿ.ಗ್ರಾಇರುವವರು ಹಾಗೂ 45 ಕೆ.ಜಿ.ಕ್ಕಿಂತ ಹೆಚ್ಚಿಗೆತೂಕ ಉಳ್ಳವರು, ಯಾರಬೇಕಾದರೂ ರಕ್ತದಾನ ಮಾಡಬಹುದು ಹಾಗೂ ರಕ್ತದಾನ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಹೊಸ ರಕ್ತಉತ್ಪಾದನೆಯಾಗಲು ಪ್ರೇರೆಪಣೆ ಕೊಡುತ್ತದೆ. ಮತ್ತುಕ್ಯಾನ್ಸರ್ ಮತ್ತು ಹೃದಯದ ಖಾಯಿಲೆಯನ್ನು ತಡೆಗಟ್ಟಬಹುದು ಹಾಗಾಗಿ ಪ್ರತಿಯೊಬ್ಬರೂ ಜೀವನದಲ್ಲಿಒಂದು ಬಾರಿಯಾದರೂ ರಕ್ತದಾನ ಮಾಡಿ ಎಂದು ಕರೆ ನೀಡಿದರು
ಬಸವರಾಜ ಲಾಲಗಟ್ಟಿ ಯುವ ಜನರಲ್ಲಿ ರಕ್ತದಾನದ ಹಾಗು ಹೆಚ್.ಐ.ವಿ. ಏಡ್ಸ್ ಬಗ್ಗೆ ಅರಿವು ಮೂಡಿಸುವುದು ಈ ರಸಪ್ರಶ್ನೆ ಸ್ಪರ್ಧೆಯ ಉದ್ದೇಶವಾಗಿದ್ದು, ಹೆಚ್.ಐ.ವಿ. ಏಡ್ಸ್ ನಿಯಂತ್ರಣ ಸೇವೆ, ಸೌಲಭ್ಯ, ಕಳಂಕ ಮತ್ತು ತಾರತಮ್ಯ ಹಾಗೂ ರಾಷ್ರೀಯ ಸಹಾಯವಾಣಿ, ಹೆಚ್.ಐ.ವಿ. ಏಡ್ಸ್‌ಕಾಯ್ದೆ 2017 ಹಾಗೂ ರಕ್ತದಾನದ ಬಗ್ಗೆ ರಸಪ್ರಶ್ನೆ ಒಳಗೊಂಡಿರುತ್ತದೆ ಎಂದು ತಿಳಿಸಿದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ವಿದ್ಯಾರ್ಥಿನಿ ಕು.ಸೃಷ್ಠಿ ತುಳಸಿಗೇರಿ ಹಾಗೂ ಕು.ಶ್ರೇಯಾ ಸುಣಗಾರ, ದ್ವೀತಿಯ ಸ್ಥಾನವನ್ನುಸರಕಾರಿಆದರ್ಶ ವಿದ್ಯಾಲಯ ಇಟಗಿಯ ಕು.ಸಂಜನಾ ಸುಬೇದಾರ ಮತ್ತು ಕು.ನಿರ್ಮಲಾ ಕವಲೂರ, ತೃತೀಯ ಸ್ಥಾನವನ್ನುಆದರ್ಶ ವಿದ್ಯಾಲಯ ಕೊರ್ಲಹಳ್ಳಿಯ ಕು.ಸಮೀಕ್ಷಾ ಹಾಗೂ ಮಹಾಲಕ್ಷ್ಮಿಇಲ್ಲೂರ ಪಡೆದುಕೊಂಡರು. ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತ್ತು ನಗದು ವಿತರಿಸಲಾಯಿತು. ಸಮಾರಂಭದಲ್ಲಿ ಪ್ರೌಢಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 