ರಕ್ತದಾನ ಮಾಡಿ ಪುಣ್ಯಗಳಿಸಿಕೊಳ್ಳಿ: ಖಾದ್ರಿ
Donate blood and earn merit: Qadri
ಕೊಪ್ಪಳ 7: ಅನ್ನದಾನ ಅಕ್ಷರ ದಾನ ರಕ್ತದಾನ ಇವೆಲ್ಲ ಪುಣ್ಯದ ದಾನವಾಗಿದೆ ರಕ್ತದಾನ ಮಾಡಿದರೆ ಒಂದು ಜೀವ ಉಳಿಸುವಂತಹ ಪುಣ್ಯ ಸಿಗುತ್ತದೆ ಕಾರಣ ಆರೋಗ್ಯವಂತ ಯುವಕರು ರಕ್ತದಾನ ಮಾಡಿ ಪುಣ್ಯಗಳಿಸಿಕೊಳ್ಳಿ ಎಂದು ಹಜರತ್ ಸೈಯದ್ ಪೀರ್ ಪಾಷಾ ಖಾದ್ರಿ (ರ) ಖಾನ ಖಾ ಖಾದ್ರಿಯಾಪೀಠದ ಪೀಠಾಧಿಪತಿ ಸೈಯದ್ ಶಾಹ್ ಅಬ್ದುಲ್ ವಹಾಬ್ ನಾಬೀರಾ ಖಾದ್ರಿ ಅಲಿಯಾಸ್ ಮುಧಸ್ಸಿರ್ ಪಾಷ ಖಾದ್ರಿ ಸಾಲಗುಂದ ಶರೀಫ್ ರವರು ನುಡಿದರು.
ಅವರು ನಿನ್ನೆ ನಗರದ ನಿರ್ಮಿತಿ ಕೇಂದ್ರದ ಬಡಾವಣೆಯಲ್ಲಿರುವ ಖಾದ್ರಿಯ ಖಾನಖಾ ಪೀಠದಲ್ಲಿ ಈದ್ ಮಿಲಾದ್ ಹಬ್ಬ ಹಾಗೂ ಹಾಜರತ್ ಸೈಯದ್ ಶಾಹ್ ಪೀರ್ ಪಾಷಾ ಖಾದ್ರಿ (ರ)ರವರ ಉರುಸ್ ಪ್ರಯುಕ್ತ ಭಕ್ತಾದಿಗಳಿಂದ ಏರಿ್ಡಸಿದ ರಕ್ತದಾನ ಶಿಬಿರ ದಲ್ಲಿ ಪಾಲ್ಗೊಂಡು ಶಿಬಿರದಲ್ಲಿ ಸ್ವತಃ ತಾವೇ ರಕ್ತದಾನ ಮಾಡುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು, ಮುಂದುವರೆದು ಮಾತನಾಡಿ ಉರುಸಿನ ಈ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಭಕ್ತಾದಿ ಜನರಿಂದ ರಕ್ತದಾನ ಶಿಬಿರ ನಡೆಸಲಾಗಿದೆ ಇಂತಹ ಕಾರ್ಯಗಳಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ರಕ್ತದಾನ ಮಾಡಿದರೆ ಪುಣ್ಯ ಸಿಗುತ್ತದೆ ಆ ಪುಣ್ಯ ಗಳಿಸಿಕೊಳ್ಳುವಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ರಕ್ತದಾನ ಮಾಡುವುದರ ಮೂಲಕ ಒಂದು ಜೀವ ಉಳಿಸುವಂತಹ ಕೆಲಸ ಮಾಡಬೇಕು ಎಂದು ಧರ್ಮ ಗುರು ಹಜರತ್ ಸೈಯದ್ ಶಾಹ್ ಅಬ್ದುಲ್ ವಾಹಬ್ ನಾಬೀರ ಖಾದ್ರಿ ಅಲಿಯಾಸ್ ಮುದಸ್ಯೀರ್ ಪಾಷಾ ಖಾದ್ರಿ ಸಾಲಗುಂದ ಶರೀಫ್ ಹೇಳಿದರು, ಹಿರಿಯ ಗುರು ಗಳಾದ ಸೈಯದ್ ಶಾ ಮುಹಿಯುದ್ದೀನ್ ಖಾದ್ರಿ ಸಾಲಗುಂದ ಶರೀಫ್ ರವರ ಮಾರ್ಗದರ್ಶನದಲ್ಲಿ ಮತ್ತು ಅವರ ಆಶೀರ್ವಾದದೊಂದಿಗೆ ಜರುಗಿದ ಈ ರಕ್ತದಾನ ಶಿಬಿರ ಯಶಸ್ವಿಗೊಳಿಸಿರುವುದಕ್ಕೆ ಮೊಹಮ್ಮದ್ ಜಾಕೀರ್ ಹುಸೇನ್ ಸಾಲ್ಗುಂದ ರವರು ಎಲ್ಲರಿಗೆ ಅಭಿನಂದಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಮತ್ತು ವೈದ್ಯಕೀಯ ವರ್ಗದವರು ಪಾಲ್ಗೊಂಡು ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಸಿಕೊಟ್ಟರು ರಕ್ತದಾನ ಮಾಡಿದ ಪ್ರತಿಯೊಬ್ಬ ಯುವಕರಿಗೆ ಪ್ರಮಾಣ ಪತ್ರ ನೀಡಿದರು ಈ ಸಂದರ್ಭದಲ್ಲಿ ಸೈಯದ್ ಸಮೀರ್ ಖಾದ್ರಿ ಸೇರಿದಂತೆ ಸದ್ಭಕ್ತ ಮಂಡಳಿಯ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 