ದೈಹಿಕ ಬದಲಾವಣೆಗಳಿಂದ ಕುಗ್ಗಬೇಡಿ: ಶಕುಂತಲಾ

ಲೋಕದರ್ಶನವರದಿ

ಮಹಾಲಿಂಗಪುರ : ಪ್ರೌಢಾವಸ್ಥೆಯಲ್ಲಿ ಆಗುವ ದೈಹಿಕ ಬದಲಾವಣೆಗಳಿಂದ ಮಾನಸಿಕವಾಗಿ ಕುಗ್ಗಬೇಡಿ ಎಂದು ಡಾ. ಶಕುಂತಲಾ ಸಂಶಿ ಹೇಳಿದರು.  

       ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಥಳೀಯ ಬಸವಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಾಲಕಿಯರಲ್ಲಿ ಪ್ರೌಢಾವಸ್ಥೆಯಿಂದ ಆಗುವ ದೈಹಿಕ ಬದಲಾವಣೆಗಳ ಬಗ್ಗೆ ತಿಳುವಳಿಕೆ ಮತ್ತು ಮುಕ್ತ ಸಂವಾದ ಹಾಗೂ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು ಪ್ರೌಡಾವಸ್ಥೆಯಲ್ಲಿ ಆಗುವ ಬದಲಾವಣೆಗಳಿಂದ ಬಹಳಷ್ಟು ಮಕ್ಕಳಿಗೆ  ನಮಾನಸಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ.  ಅಂತಹ ಸಂದರ್ಭದಲ್ಲಿ ಮನೋಬಲ ಕುಗ್ಗದಂತೆ ಧೈರ್ಯವಾಗಿ ಎಂದಿನ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಎಂದು ಸಲಹೆ ನೀಡಿದರು.  

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ 317 ಬಿ ಗವರ್ನರ್ ಶಶೀಂದ್ರನ್ ನಾಯರ್ ಮಕ್ಕಳು ಇಂದಿನ ವೇಗದ ಜೀವನ ಶೈಲಿಯಿಂದಾಗಿ ಸಾಕಷ್ಟು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. 

      ಅದರಲ್ಲೂ ಇಂದಿನ ಆಹಾರ ಪದ್ಧತಿ ಮತ್ತು ಒತ್ತಡಗಳಿಂದ ದೈಹಿಕ ಮತ್ತು ಮಾನಸಿಕ ಬದಲಾವಣೆಯನ್ನು ವಯಸ್ಸಿಗಿಂತ ಪೂರ್ವದಲ್ಲಿಯೇ ಎದುರಿಸಬೇಕಾಗಿದೆ. ಇಂತಹ ಸಮಸ್ಯೆಗಳಿಂದ ಹೊರಬರಲು ಒಳ್ಳೆಯ ಆಹಾರ,  ನಿದ್ರೆ, ವ್ಯಾಯಾಮ, ಆಟ ಮುಂತಾದ ಚಟುವಟಿಕೆಗಳಲ್ಲಿ ತೊಡಗಲು ಸಲಹೆ ನೀಡಿದರು.  

      ಕರಡಿ ಮಜಲು ಕಲೆಯಲ್ಲಿ ಅಪ್ರತಿಮ ಪ್ರತಿಭೆ ಮೆರೆದ ಬಾಲ ಕಲಾವಿದ ಅಭಿನವ ಕರಡಿಗೆ ಸನ್ಮಾನ ಮಾಡಲಾಯಿತು.  

         ಲಯನ್ಸ್ ಕ್ಲಬ್ ಅಧ್ಯಕ್ಷ ಸೋಮಶೇಖರ ಸಂಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದಶರ್ಿ ರಾಜು ತಾಳಿಕೋಟಿ, ಡಾ. ಅಶೋಕ ದಿನ್ನಿಮನಿ, ವಲಯ ಛೇರ್ಮನ್ ಪ್ರಕಾಶ ಚೌರಡ್ಡಿ, ಖಜಾಂಚಿ ಸಂಜು ಶಿರೋಳ, ಡಾ. ಮಾರುತಿ ಮೇದಾರ,  ಮಕ್ಕಳ ಸಾಹಿತಿ ಅಣ್ಣಾಜಿ ಫಡತಾರೆ, ಎಸ್. ಕೆ. ಗಿಂಡೆ ಇತರರು ಇದ್ದರು. ರಮೇಶ್ ಶೆಟ್ರು ಸ್ವಾಗತಿಸಿ,  ಸಿದ್ದು ನಕಾತಿ ವಂದಿಸಿ,  ಶಶಿಧರ ಉಳ್ಳಾಗಡ್ಡಿ ನಿರೂಪಿಸಿದರು.