ಲೋಕದರ್ಶನವರದಿ
ಗುಳೇದಗುಡ್ಡ16: ಪ್ರತಿಯೊಬ್ಬರು ಧಾಮರ್ಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಪಾಶ್ಚಿಮಾತ್ಯ ಅನುಕರಣೆಯಲ್ಲಿ ನಮ್ಮ ಸಂಸ್ಕೃತಿಯನ್ನು ಕಡೆಗಣಿಸಬಾರದು. ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ನಾವು ಪಾಲಿಸುವದರ ಜೊತೆಗೆ ನಮ್ಮ ಮುಂದಿನ ಪೀಳಿಗೆಗೂ ಮುಂದುವರೆಸಬೇಕು ಎಂದು ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಶ್ರೀಗಳು ಹೇಳಿದರು.
ಅವರು ಸಮೀಪದ ತೊಗುಣಶಿ ಗ್ರಾಮದಲ್ಲಿ ಶ್ರೀ ಅಮರೇಶ್ವರ ಮಠದ ಶ್ರೀ ಜಗದ್ಗುರು ವಿಶ್ವರಾಧ್ಯರ 17ನೇ ರಥೋತ್ಸವದ ನಿಮಿತ್ಯವಾಗಿ ಅಕ್ಕನ ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪ್ರವಚನಗಳು ಜನರಿಗೆ ಆಧ್ಯಾತ್ಮದ ಅರಿವು ಮೂಡಿಸುವದರ ಜೊತೆಗೆ ಪ್ರವಚನ ಆಲಿಕೆಯಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ ಎಂದು ಹೇಳಿದರು. ಪ್ರವಚನಕಾರರಾದ ಡಾ|| ಈಶ್ವರಾನಂದ ಶ್ರೀಗಳು ಪ್ರವಚನ ನಡೆಸಿಕೊಟ್ಟು ಮಾತನಾಡಿ, ಪ್ರವಚನಗಳು ಮಹಾನ್ ಶರಣರು ನಡೆಸಿದ ಮೌಲ್ಯಯುತ ಜೀವನದ ಬಗ್ಗೆ ತಿಳಿಸಿಕೊಡುತ್ತವೆ. ಅಮರೇಶ್ವರ ಮಹಾಸ್ವಾಮಿಗಳು ಉಭಯವೈದ್ಯ ಪಂಡಿತರಾಗಿ ಈ ಭಾಗದ ಜನರ ಕಷ್ಟಗಳ ನಿವಾರಣೆಗೆ ಶ್ರಮಿಸಿದ ಮಹಾನ್ ಶರಣರು ಎಂದು ಹೇಳಿದರು.
ಗ್ರಾಪಂ ಉಪಾಧ್ಯಕ್ಷೆ ಬೇವಿನಮಟ್ಟಿ, ಪಿಕೆಪಿಎಸ್ ಅಧ್ಯಕ್ಷ ಎಸ್.ಎಂ.ಪಾಟೀಲ, ಕೋಟೆಕಲ್ ಪಿಕೆಪಿಎಸ್ ಅಧ್ಯಕ್ಷ ಮಹಾಗುಂಡಪ್ಪ ಸುಂಕದ, ರಂಗನಾಥ ಜಾನಮಟ್ಟಿ, ಶಿವು ವಾಲಿಕಾರ, ನಾಗನಗೌಡರ ಸೇರಿದಂತೆ ಇತರರು ಇದ್ದರು.