ಬೆಳಗಾವಿ: ಇಂಗ್ಲೀಷ ಕಲೆಯಿರಿ ಕನ್ನಡ ಮರೆಯಬೇಡಿ: ಡಾ. ಸಿದ್ದನಗೌಡ ಪಾಟೀಲ

ಲೋಕದರ್ಶನ ವರದಿ

ಬೆಳಗಾವಿ 03:  ಇಂಗ್ಲೀಷ ಹಾವಳಿಯಿಂದಾಗಿ ಕನ್ನಡ ದೇಸಿ ಶಬ್ದಗಳು ಮಾಯವಾಗುತ್ತಲಿವೆ. ಮಕ್ಕಳ ವ್ಯವಹಾರಿಕವಾಗಿ ಬೆಳೆದುಕೊಳ್ಳಲು ಮಾತೃಭಾಷೆ ಅತ್ಯವಶ್ಯವಾಗಿದೆ. ಮಾತೃಭಾಷೆಯಲ್ಲಿ ಗ್ರಹಿಸುವಷ್ಟು ಬೇರೆ ಭಾಷೆಯಲ್ಲಿ ಸಾಧ್ಯವಾಗದು. ಆದರೆ ಇಂಗ್ಲೀಷ ಬೇಡವೇ ಬೇಡ ಎಂದು ಹೇಳಲು ಬರುವುದಿಲ್ಲ. ಅಂತರರಾಷ್ಟ್ರೀಯ ಮಟ್ಟದ ವಿಷಯ ಬಂದಾಗ ಇಂಗ್ಲೀಷ ಅನಿವಾರ್ಯವಾಗುತ್ತದೆ. ಇಂಗ್ಲೀಷ ಕಲಿಯಿರಿ ಕನ್ನಡ ಮರೆಯಬೇಡಿ" ಎಂದು ಕನ್ನಡ ಹೋರಾಟಗಾರ ಡಾ. ಸಿದ್ದನಗೌಡ ಪಾಟೀಲ ಇಂದಿಲ್ಲಿ ಹೇಳಿದರು.

ನಗರದ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಹಾಗೂ ಕ್ರಿಯಾಶೀಲ ಬಳಗ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ "ಪ್ರಾಥಮಿಕ ಹಂತದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಅನಿವಾರ್ಯವೆ - ಒಚಿದು ಚಚರ್ೆ ಯನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಸಿದ್ದನಗೌಡ ಪಾಟೀಲ ಮೇಲಿನಂತೆ ಅಭಿಪ್ರಾಯ ವ್ಯಕ್ತ ಪಡಿಸಿದರು.

"ಪ್ರಾಥಮಿಕ ಹಂತದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಅನಿವಾರ್ಯವೆ? ಈ ಚಚರ್ೆಯಲ್ಲಿ ಅನಿವಾರ್ಯವಲ್ಲ ಅಂತಾ ಪ್ರೊ. ಎಂ. ಎಸ್. ಇಂಚಲ ಪ್ರಾಥಮಿಕ ಹಂತದಲ್ಲಿ ಇಂಗ್ಲೀಷ ಮಾಧ್ಯಮ ಹೇರುವುದರಿಂದ ನೀರಳಿಯದ ಗಂಡಳೊಳ್ಲ ಕಡಬು ತುರುಕಿದಂತಾಗುತ್ತದೆ. ತಾಯಿಯ ಹಾಲಿನಲ್ಲಿ ಔಷಧಿಯ ಗುಣ ಹೊಂದಿರುವಂತೆ ಮಾತೃಭಾಷೆಯಲ್ಲಿಯೂ ಒಂದು ವಿಶೇಷ ಶಕ್ತಿಯಿದೆ ಮಕ್ಕಳಿಗೆ ಇಂಗ್ಲೀಷ ಕಲಿಸುವುದನ್ನು ಉಗ್ರವಾಗಿ ಖಂಡಿಸುತ್ತೇನೆ  ಎಂದು ಹೇಳಿದರು

ನಿವೃತ್ತ ಪ್ರಾಂಶುಪಾಲರಾದ ಪ್ರೊ. ವಿ. ಬಿ ಹಿರೇಮಠ ಅವರು ಪ್ರಾಥಮಿಕ ಹಂತದಿಂದ ಇಂಗ್ಲೀಷ ಭಾಷೆ ಶಿಕ್ಷಣ ಅನಿವಾರ್ಯವಾಗಿದೆ. ಜಾಗತೀಕರಣ ಇಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ವ್ಯವಹಾರಗಳಲ್ಲಿ ಇಂಗ್ಲೀಷ ಮಹತ್ತರವಾದ ಪಾತ್ರವಹಿಸುತ್ತದೆ. ಗೀತಾಂಜಲಿ ಗ್ರಂಥ ಆಂಗ್ಲಭಾಷೆಗೆ ಅನುವಾದಗೊಂಡು ಅಂತರರಾಷ್ಟ್ರೀಯ ಗೀತಾಂಲಿ ಪ್ರಶಸ್ತಿ ಲಭಿಸಿತು. ಕನ್ನಡದಲ್ಲಿಯೂ ನೊಬೈಲ್ ಪಾರಿತೋಷಕ ಯೋಗ್ಯವಾದ ಕೃತಿಗಳಿವೆ ಆದರೆ ಅವು ಅನುವಾದಗೊಳ್ಳದ್ದರಿಂದ ಅವುಗಳ ಮೌಲ್ಯ ಸೀಮಿತವಾಗಿದೆ ಹೀಗೆ ಆಂಗ್ಲ ಭಾಷೆ ಮಹತ್ತರ ಪಾತ್ರ ವಹಿಸುತ್ತದೆ ಎಂದರು.

ಹಿರಿಯ ಪತ್ರಕರ್ತ ಎಲ್. ಎಸ್. ಶಾಸ್ತ್ರಿಯವರು ಮಾತನಾಡಿ ಇತ್ತೀಚೆಗೆ ಆರುಸಾವಿರ ಶಾಲೆಗಳು ಮುಚ್ಚಿದವು. ಇದೊಂದು ರೀತಿ ಕನ್ನಡ ಭಾಷೆ ಕೊಲೆಯಾಗ್ತಿದೆ. ಒಂದು ಭಾಷೆಯ ಕೊಲೆಯೆಂದರೆ ಒಂದು ಸಂಸ್ಕೃತಿಯ ಕೊಲೆಯಾದಂತೆ. ಕನ್ನಡಕ್ಕೆ ತನ್ನದೇ ಆದ ಸಂಸ್ಕೃತಿಯಿದೆ. ಹಲವಾರು ದೇಶಗಳು ಇಂಗ್ಲೀಷ ಭಾಷೆ ಹಂಗಲ್ಲಿದೆ ಬದುಕುತ್ತಿಲ್ಲವೆ. ಆಂಗ್ಲಭಾಷೆ ಶಿಕ್ಷಣ ಅನಿವಾರ್ಯವೇನಲ್ಲ ಎಂದು ಹೇಳೀದರು.

ನಿವೃತ್ತ ಸಹಾಯಕ ಕೃಷಿ ನಿದರ್ೇಶಕರಾದ ಪಿ. ಬಿ. ಸ್ವಾಮಿ ಈಗ ಕೇವಲ ಶ್ರೀಮಂತರ ಪಾಲಾಗಿರುವ ಆಂಗ್ಲಭಾಷೆ ಬಡಜನರೂ ಆಂಗ್ಲ ಭಾಷೆಯಲ್ಲಿ ಅಭ್ಯಾಸ ಮಾಡಲು ಅನಕೂಲವಾಗುವಂತೆ ಪ್ರಾಥಮಿಕ ಹಂತದಿಂದ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿರುವುದು ಒಳ್ಳೆಯ ನಿಧರ್ಾರ. ಎಂದು ಹೇಳಿದರು.

ನಿವೃತ್ತ ಬಿ.ಎಸ್.ಎನ್.ಎಲ್. ಅಧಿಕಾರಗಳಾದ ಎಸ್.ವಿ.ದೀಕ್ಷೀತ ಮಕ್ಕಳು ವಿದ್ಯೆಗಿಂತ ಬುದ್ದಿವಂತರಾಗಿ ಬಾಳಲು  ಮಾತೃಭಾಷಾ ಅಭ್ಯಾಸ ಅತ್ಯವಶ್ಯ. ಆಂಗ್ಲಭಾಷೆಯ ಶಿಕ್ಷಣವೆಂದರೆ ಜ್ಞಾನಕ್ಕಿಂತ ಕಂಠಪಾಠ ಶಿಕ್ಷಣವಾಗಿದೆ. ಕನ್ನಡದ ಖ್ಯಾತ ಸಾಹಿತಿಗಳಾದ ಚಂಪಾ ಹಾಗೂ ಗಿರಡ್ಡಿ ಇಂಗ್ಲಷದಲ್ಲಿ ಬರೆಯಲು ಪ್ರಾರಂಭಿಸಿ. ಮತ್ತೆ ಮಾತೃಭಾಷೆಗೆ ಮರಳಿದ ಉದಾಹರಣೆಯನ್ನು ನೀವು ನೋಡುಬಹುದು ಎಂದು ಹೇಳಿ ಪ್ರಾಥಮಿಕ ಹಂತದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಬೇಡ ಎಂದು ಹೇಳಿದರು.

ನಿವೃತ್ತ ಕೆ.ಪಿ.ಸಿ. ಸಿಬ್ಬಂಧಿ ಅಧಿಕಾರಿ ಸುರೇಶ ಹೆಗಡೆಯವರು ಎಲ್ಲ ಭಾಷೆಗಳಲ್ಲಿಯೂ ಸರಸ್ವತಿ ಇದ್ದೇ ಇದ್ದಾಳೆ. ಅಪ್ಪ ಬೆಳೆದ ಆಲದ ಮರಕ್ಕೆ ಜೋತು  ಬಿದ್ದಂತೆ ಕನ್ನಡ ಭಾಷೆಗೆ ಜೋತು ಬಿದ್ದಿದ್ದೇವೆ. ಬಡ ಮಕ್ಕಳಿಗೂ ಆಂಗ್ಲಮಾಧ್ಯಮ ಲಭ್ಯವಾಗಬೇಕಾದರೆ ಸರಕಾರ ಕೈಗೊಂಡಿರುವ ಪ್ರಾಥಮಿಕ ಹಂತದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಅತ್ಯವಶ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ನಾವು ಸ್ಪಧರ್ೆಗಿಳಿಯಬೇಕೆಂದರೆ ಇಂಗ್ಲೀಷ ಭಾಷೆ ಅತ್ಯವಶ್ಯ ಎಂದು ಹೇಳಿದರು.

ಗುರುಸಿದ್ದಯ್ಯ ಹಿರೇಮಠ ಹಾಗೂ ಬಸವರಾಜ ತಳವಾರ ಆಂಗ್ಲ ಮಾಧ್ಯಮ ಶಿಕ್ಷಣ ಕುರಿತಂತೆ ತಮ್ಮ ಅನ್ನಿಸಿಕೆಗಳನ್ನು ಹಂಚಿಕೊಂಡರು.ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆ. ತಾನಾಜಿ ನಿರೂಪಿಸಿದರು.