ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಪ್ರವೇಶಿಸಬಾರದು: ವೆಂಕಯ್ಯ ನಾಯ್ಡು

ಬೆಂಗಳೂರು, ಜ. 7,ವಿಶ್ವವಿದ್ಯಾಲಯಗಳನ್ನು ದೇವಸ್ಥಾನಗಳಂತೆ ಆರಾಧಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಪ್ರವೇಶ ಮಾಡಲೇಬಾರದು. ದೇವಸ್ಥಾನದಂತೆ ಶಿಕ್ಷಣ ಸಂಸ್ಥೆಗಳಲ್ಲಿಯೂ ಶಾಂತಿ ಮುಖ್ಯ. ಪಾದರಕ್ಷೆಗಳನ್ನು ದೇವಸ್ಥಾನದ ಹೊರಗೆ ಬಿಡುವಂತೆ ರಾಜಕೀಯವನ್ನೂ ಸಹ ಶಿಕ್ಷಣ ಸಂಸ್ಥೆಗಳಿಂದ ಹೊರಗೆ ಬಿಡಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ. ಇಂದು ರಾಜಭವನದಲ್ಲಿ ನಡೆದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ(ನ್ಯಾಕ್) ಯ ಬೆಳ್ಳಿಹಬ್ಬ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಉಪರಾಷ್ಟ್ರಪತಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳು‌ ಉನ್ನತ ಮತ್ತು ಗುಣಮಟ್ಟದ ಶಿಕ್ಷಣ ನೀಡಲಾರವು ಎಂಬ ಆರೋಪ‌ ಇದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಸಾಕಷ್ಟು ಸೌಲಭ್ಯ ಅನುದಾನಗಳನ್ನು ಒದಗಿಸಿದರೂ ಶಿಕ್ಷಣದಲ್ಲಿ ಗುಣಮಟ್ಟ ಏಕೆ ಇರುವುದಿಲ್ಲ ಎಂಬುದೇ ಪ್ರಶ್ನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಭಾಷೆ‌ ಮತ್ತು ಭಾವನೆ ಒಂದೇ ಸಮನಾಗಿ‌ ನಡೆಯಬೇಕು. ಉನ್ನತ ಶಿಕ್ಷಣವೂ ಸಹ ಮಾತೃಭಾಷೆಯಲ್ಲಿಯೇ ಇರಬೇಕು. ಮಾತೃಭಾಷೆಯ‌ ಕಡೆಗಣನೆ‌ ಸಲ್ಲದು. ಮಾತೃಭಾಷೆಯನ್ನು ಪ್ರೀತಿಸಿ ಅನ್ಯ ಭಾಷೆಗಳನ್ನೂ ಗೌರವಿಸಬೇಕು. ಇಂಗ್ಲೀಷ್‌‌ ಕಲಿಯಿರಿ. ಆದರೆ ಇಂಗ್ಲಿಷ್‌‌ ಕಲಿಯುವ ಭರಾಟೆಯಲ್ಲಿ ಮಾತೃಭಾಷೆ ಮರೆಯಬಾರದು ಎಂದು ಸಲಹೆ ನೀಡಿದರು. ಭಾಷೆ ಕಳೆದು ಹೋದರೆ ಎಲ್ಲವೂ‌ ಕಳೆದುಹೋದಂತೆ. ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು‌ಕೊಡಬೇಕು‌ ಎಂದು ಕರೆ ನೀಡಿದ ಅವರು, ನಮ್ಮ ಸಂಸ್ಕೃತಿ ಧರ್ಮ ಶಿಕ್ಷಣದ ಭಾಗವಾಗಬೇಕು. ದೇಶಭಕ್ತಿ ಶಿಕ್ಷಣವಾಗಬೇಕು. ಭಾರತ್ ಮಾತಾಕೀ ಜೈ ಎನ್ನುವುದು ಎಲ್ಲಾ ಭಾರತೀಯರಿಗೂ ಜೈ ಎನ್ನುವುದಾಗಿದೆ. ಭಾರತ್ ಮಾತಾಕೀ ಜೈ ಎನ್ನುವುದು ಎಲ್ಲಾ ಧರ್ಮ ಭಾಷೆ ಪ್ರಾದೇಶಿಕತೆಗೆ ಸಂಬಂಧಿಸಿದೆ. ಭಾರತ್ ಮಾತಾಕೀ ಜೈ ಎನ್ನುವುದು ಒನ್ ಇಂಡಿಯಾ ಆಗಿದೆ. ನೇಚರ್ ಕಲ್ಚರ್‌ ಟುಗೇದರ್ ಫಾರ್ ಬೆಟರ್ ಫ್ಯೂಚರ್ ಎಂದು ನಾಯ್ಡು ಕಿವಿ ಮಾತು ಹೇಳಿದರು. ಫ್ರಾನ್ಸ್ ದೇಶದಲ್ಲಿ ನಮ್ಮ ವೇದ ಧರ್ಮಶಾಸ್ತ್ರಗಳನ್ನು ಅಭ್ಯಾಸ ಮಾಡಲಾಗುತ್ತಿದೆ. ಉದಯಿಸುವ ಸೂರ್ಯ ಬಹಳ ಸುಂದರ. ಸನ್ನಿ ಡೇ ಇಂಗ್ಲೆಂಡ್‌ನಲ್ಲಿ. ಅದನ್ನು ಕಂಡು ಇಂಗ್ಲೆಂಡಿಗರು ಖುಷಿ ಪಡುತ್ತಾರೆ. ಆದರೆ ಅಲ್ಲಿನ ಜನ‌ ಖುಷಿ ಪಡುತ್ತಾರೆ. ಆದರೆ ನಮ್ಮ ದೇಶದಲ್ಲಿ ವರ್ಷದ 365 ದಿನವೂ ಸನ್ನಿ ಡೇ. ಸೂರ್ಯ ಎಂದರೆ ಶಕ್ತಿ. ಶಿಕ್ಷಣ ವ್ಯವಸ್ಥೆ ಎನ್ನುವುದು ಈ ಎಲ್ಲದಕ್ಕೂ ಸಂಬಂಧಿಸಿದೆ ಎಂದು ಸಲಹೆ ನೀಡಿದರು. ಸರ್ಕಾರಿ ಶಿಕ್ಷಣ ಸಂಸ್ಥೆಗಳು‌ ಉನ್ನತ ಮತ್ತು ಗುಣಮಟ್ಟದ ಶಿಕ್ಷಣ ನೀಡಲಾರವು ಎಂಬ ಆರೋಪ‌ ಇದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಸಾಕಷ್ಟು ಸೌಲಭ್ಯ ಅನುದಾನಗಳನ್ನು ಒದಗಿಸಿದರೂ ಶಿಕ್ಷಣದಲ್ಲಿ ಗುಣಮಟ್ಟ ಏಕೆ ಇರುವುದಿಲ್ಲ ಎಂಬುದೇ ಪ್ರಶ್ನೆಯಾಗಿದೆ. ಶಿಕ್ಷಣ ಎನ್ನುವುದು ಬದುಕು ಕೇವಲ ಉದ್ಯೋಗಕ್ಕಾಗಿ ಪಡೆಯುವುದಲ್ಲ. ಕಸ್ತೂರಿ ರಂಗನ್ ವರದಿ ಉತ್ತಮ ವರದಿಯಾಗಿದೆ. ಮೌಲ್ಯಯುತ ಸಲಹೆಗಳು ವರದಿಯಲ್ಲಿವೆ. ಕರಕುಶಲ ಬಗ್ಗೆ ದೈಹಿಕ ಆರೋಗ್ಯದ ಬಗ್ಗೆ ಗ್ರಾಮಗಳ‌ಬಗ್ಗೆ ಸಂಬಂಧಗಳ‌ ಬಗ್ಗೆ ಮಕ್ಕಳಿಗೆ ಶಿಕ್ಷಕರು ತಿಳಿ ಹೇಳಬೇಕು. ನೇಚರ್ ಕಲ್ಚರ್‌ ಟುಗೇದರ್ ಫಾರ್ ಬೆಟರ್ ಫ್ಯೂಚರ್ ಎಂದು ಉಪರಾಷ್ಟ್ರಪತಿಗಳು ಅಭಿಪ್ರಾಯಪಟ್ಟರು. ಭಾರತದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ನ್ಯಾಕ್ ನ ಮೌಲ್ಯಾಂಕನ ಪದ್ಧತಿಯ ಕೊಡುಗೆ ಪ್ರಮುಖ ಕಾರಣ. ಈಗಲೂ ನಮ್ಮ ದೇಶದ ಶೇಕಡಾ 20 ರಷ್ಟು ಮಂದಿ ಅವಿದ್ಯಾವಂತರಾಗಿದ್ದಾರೆ‌. ಭಾರತ ಅಭಿವೃದ್ದಿ ಹೊಂದುತ್ತಿದೆ. ಆದರೂ ಕೊರತೆಗಳೂ ನಮ್ಮಲ್ಲಿ ಸಾಕಷ್ಟಿವೆ.ನಮ್ಮಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆಯೇನೋ ಹೆಚ್ಚುತ್ತಿದೆಯಾದರೂ ಶಿಕ್ಷಣದ ಗುಣಮಟ್ಟದ ಕಥೆ ಏನು.ಒಂದು ಕಾಲದಲ್ಲಿ ಶಿಕ್ಷಣದ ವಿಷಯದಲ್ಲಿ ಭಾರತವನ್ನು ವಿಶ್ವಗುರು ಎಂದು ಗುರುತಿಸಲಾಗುತ್ತಿತ್ತು. ಆದರೆ ಇಂದು ಶಿಕ್ಷಣದ ರಾಂಕಿಂಗ್ ಪಟ್ಟಿಯಲ್ಲಿ ಮೊದಲ 200 ಮೊದಲ 100 ರಾಷ್ಟ್ರಗಳ ಪಟ್ಟಿಯಲ್ಲೂ ಭಾರತಕ್ಕೆ ಸ್ಥಾನ ಸಿಕ್ಕಿಲ್ಲ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಖಾಸಗಿ ವಿಶ್ವ‌ವಿದ್ಯಾಲಯಗಳಿಗೆ ಅವಕಾಶಕೊಟ್ಟಿದ್ದು ತಪ್ಪಲ್ಲ. ಡೀಮ್ಡ್ ವಿವಿ ಗಳಲ್ಲಿ ಗುಣಮಟ್ಟ ಪರವಾಗಿಲ್ಲ. ಆದರೆ ಸರ್ಕಾರಿ ಸ್ವಾಮ್ಯದ ವಿವಿಗಳಲ್ಲಿ ಗುಣಮಟ್ಟ ಏಕೆ ಆಗುತ್ತಿಲ್ಲ. ನಮ್ಮ ವಿವಿ ಗಳಿಗೆ ಕೊಡುತ್ತಿರುವ ಸೌಲಭ್ಯದಲ್ಲಿ ಯಾವುದೇ ಕೊರತೆ ಇಲ್ಲ. ಆದರೂ ಗುಣಮಟ್ಟ ಹೆಚ್ಚಳ ಏಕಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ರಾಜಪಾಲ ವಜೂಭಾಯ್ ರೂಢಬಾಯ್ ವಾಲಾ‌ ಮಾತನಾಡಿ, ನ್ಯಾಕ್ 25 ವರ್ಷ ಪೂರೈಸಿದೆ. ಅದೆಷ್ಟೋ ಸಂಸ್ಥೆಗಳು ರಜತೋತ್ಸವ ವಜ್ರಮಹೋತ್ಸವವನ್ನೂ ಆಚರಿಸಿಕೊಂಡಿವೆ. ಐವತ್ತು ನೂರು ವರ್ಷಗಳ ನಂತರವೂ ದೇಶಕ್ಕೆ ಅಗತ್ಯವಾದ ವಸ್ತುಗಳನ್ನು ಸಂಸ್ಥೆಗಳನ್ನು ನೀಡುತ್ತವೆಯೇ ಎಂಬುದು ಮುಖ್ಯ. ಶಿಕ್ಷಣ‌ಕ್ಷೇತ್ರ‌ ಎ ಗ್ರೇಡ್ ಆಗಲೇಬೇಕು. ಬಿ ಗ್ರೇಡ್ ಸಿ ಗ್ರೇಡ್ ಗಳನ್ನು ಇಡಲೇಬಾರದು. ಕಡಿಮೆ‌ ಗ್ರೇಡಿನ ಶಿಕ್ಷಣ ಸಂಸ್ಥೆಗಳನ್ನು ಉಳಿಸಬಾರದು. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಹಾಗೂ ಸರಿಯಾಗಿ ಶಿಕ್ಷಣ ನೀಡದ ಸಂಸ್ಥೆಗಳನ್ನು ಮುಚ್ಚಬೇಕು. ಖಾಸಗಿ ಶಿಕ್ಷಣಗಳು ಬಹಳಷ್ಟು ಎ ಗ್ರೇಡ್‌ಗಳಾಗಿರುತ್ತವೆ.ಸರ್ಕಾರಿ ಶಿಕ್ಷಣ ಮಾತ್ರ ಬಿ, ಸಿ ಯಾಗಿರುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯಾವ ರಾಷ್ಟ್ರದಲ್ಲಿ ಶಿಕ್ಷಣಕ್ಕೆ‌ ಹೆಚ್ಚು ಒತ್ತು‌ಕೊಡಲಾಗುತ್ತದೆಯೋ ಆ ರಾಷ್ಟ್ರ ಅಭಿವೃದ್ಧಿಯಲ್ಲಿ ಮುಂದಾಗುತ್ತದೆ. ವಿಜ್ಞಾನ ತಂತ್ರಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡುವ ರಾಷ್ಟ್ರ ಶ್ರೀಮಂತ ರಾಷ್ಟ್ರವಾಗುತ್ತವೆ.ಭಾರತದಲ್ಲಿ ಹೆಚ್ಚು ಬುದ್ಧಿವಂತ ಯುವ ಪೀಳಿಗೆ ಇದೆ.ಶಿಕ್ಷಕರು ತಿಂಗಳ ಮೊದಲ ದಿನ ಸಂಬಳ‌ತೆಗೆದುಕೊಳ್ಳುವುದು ಆಗಬಾರದು.ಯಾವ ವಿದ್ಯಾರ್ಥಿ ಯನ್ನು ಶಿಕ್ಷಕ ಎಷ್ಟು‌ಬುದ್ಧಿವಂತ ಮಾಡಿದ್ದಾನೆ.ಶಿಕ್ಷಣ ನೀಡಿದ್ದಾನೆ ಎಂಬ ಬಗ್ಗೆ ಮೌಲ್ಯಮಾಪನ ಆಗಬೇಕು. ಬಿ ಮತ್ತು ಸಿ ಗ್ರೇಡ್ ವಿಶ್ವವಿದ್ಯಾಲಯಗಳು ಕಾಲೇಜುಗಳನ್ನು ಬಂದ್ ಮಾಡಬೇಕು. ಇಂತಹ ಕಡಿಮೆ‌ ದರ್ಜೆಯ ಶಿಕ್ಷಣ ಸಂಸ್ಥೆಗಳು ಶಿಕ್ಣಣ ಕ್ಷೇತ್ರದಲ್ಲಿ ಹಿನ್ನಡೆ ಉಂಟು ಮಾಡುತ್ತವೆ.ಶಿಕ್ಷಣದ ಬಗ್ಗೆ ನ್ಯಾಕ್ ತನ್ನ ಸಲಹೆ ಸೂಚನೆಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕು ಎಂದು ರಾಜ್ಯಪಾಲರು ಸೂಚಿಸಿದರು. ನ್ಯಾಕ್ ದೇಶದ ಪ್ರಮುಖ ಗುಣಮಟ್ಟದ ಭರವಸೆ ನೀಡುವ ಸಂಸ್ಥೆಯಾಗಿದ್ದು, ದೇಶದಲ್ಲಿ ಉನ್ನತ ಶಿಕ್ಷಣದ ಸಂಸ್ಥೆಗಳನ್ನು ನಿರ್ಣಯಿಸಲು ಮತ್ತು ಮಾನ್ಯತೆ ನೀಡುವ ಅಧಿಕಾರ ಹೊಂದಿದೆ. 1994ರಲ್ಲಿ ಸ್ಥಾಪನೆಯಾದ ನ್ಯಾಕ್ ನ್ಯಾಕ್ ಸಾರ್ವಭೌಮಿಕ ಸ್ವಾಯತ್ತತ ಆಯೋಗವಾಗಿದೆ. ಕಳೆದ 25 ವರ್ಷಗಳಿಂದ ವಿಶ್ವಾಸನೀಯ ಕಾರ್ಯಗಳಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾಸನೀಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನ್ಯಾಕ್ ನಿಂದ 360 ವಿಶ್ವವಿದ್ಯಾಲಯಗಳು ಮತ್ತು 8093 ಕಾಲೇಜುಗಳು ಮಾನ್ಯತೆ ಪಡೆದಿವೆ. ಇಲ್ಲಿಯವರೆಗೆ ನ್ಯಾಕ್ ಒಟ್ಟು 13256 ಮಾನ್ಯತಾ ಭೇಟಿಗಳನ್ನು ನೀಡಿದೆ ಎಂದು ಹೇಳಿದರು.