ಲಖನೌ, ಡಿ 21 ಪೌರತ್ವ ತಿದ್ದುಪಡಿ
ಕಾಯ್ದೆ (ಸಿಎಎ) ಬಗ್ಗೆ ವದಂತಿಗಳನ್ನು ಹರಡುವ
ಸಮಾಜ ವಿರೋಧಿ ಅಂಶಗಳ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಶುಕ್ರವಾರ ತಡರಾತ್ರಿ ಬಿಡುಗಡೆಯಾದ ಹೇಳಿಕೆಯಲ್ಲಿ, ಜನರು
ವದಂತಿಗಳನ್ನು ನಂಬಬಾರದು, ಪ್ರಚೋದನೆಯಿಂದ ಪ್ರೇರಿತರಾಗಬಾರದು ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಜನರಿಗೆ
ಮನವಿ ಮಾಡಿದ್ದಾರೆ. ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ ಭದ್ರತೆ ಒದಗಿಸುವ ಜವಾಬ್ದಾರಿಯನ್ನು ಉತ್ತರ
ಪ್ರದೇಶ ಸರ್ಕಾರ ಹೊಂದಿದೆ ವದಂತಿಗಳನ್ನು ಹರಡುತ್ತಿರುವವರನ್ನು
ಹುಡುಕಲು ಮತ್ತು ಬಂಧಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆಗಳು ಮತ್ತು ಸಮಾಜವಾದಿ ಪಕ್ಷದ ನಾಯಕರ ಕ್ರಮಗಳು ಅತ್ಯಂತ ದುರದೃಷ್ಟಕರ ಎಂದಿರುವ ಆದಿತ್ಯನಾಥ್,
ರಾಜಕೀಯ ಲಾಭಕ್ಕಾಗಿ ಅವರು ಸಿಎಎ ಬಗ್ಗೆ ಅನುಮಾನಗಳನ್ನು
ಮತ್ತು ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ ಎಂದಿದ್ದಾರೆ. ಸಿಎಎ ಯಾವುದೇ ಜಾತಿ ಅಥವಾ ಧರ್ಮಕ್ಕೆ ವಿರುದ್ಧವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹೇಳಿದ್ದಾರೆ.
ಇದು ಪ್ರತಿಯೊಬ್ಬ ನಾಗರಿಕರಿಗೂ ಸುರಕ್ಷತೆಯ ಖಾತರಿಯನ್ನು
ನೀಡುತ್ತದೆ. ಅಂತಹ ಹಿಂಸಾಚಾರವು ಸ್ಪಷ್ಟೀಕರಣದ ನಂತರವೂ ದೇಶದ ಕಾನೂನನ್ನು ನಿರಾಕರಿಸುವಂತಿದೆ. ದೇಶದಲ್ಲಿ ಶಾಂತಿ ಮತ್ತು
ಸಮೃದ್ಧಿಯನ್ನು ಬಯಸದ ಸಮಾಜ ವಿರೋಧಿ ಮತ್ತು ರಾಷ್ಟ್ರ
ವಿರೋಧಿ ಅಂಶಗಳು ಜನರನ್ನು ದಾರಿತಪ್ಪಿಸುತ್ತಿವೆ ಮತ್ತು ಅನುಮಾನ ಮತ್ತು ಹಿಂಸೆಯನ್ನು ಸೃಷ್ಟಿಸುತ್ತಿವೆ. ಯಾರನ್ನೂ ದಾರಿ ತಪ್ಪಿಸಬಾರದು ಮತ್ತು ಶಾಂತಿ ಕಾಪಾಡುವಲ್ಲಿ ಸರ್ಕಾರವನ್ನು ಬೆಂಬಲಿಸಬೇಕು ಎಂದು ಅವರು
ಯುಪಿ ಜನರಿಗೆ ಮನವಿ ಮಾಡಿದ್ದಾರೆ.