ಲೋಕದರ್ಶನ ವರದಿ
ಶಿರಹಟ್ಟಿ 18: ಆಧುನಿಕ ಒತ್ತಡದ ಜೀವನದಲ್ಲಿ ಶಾಂತಿ ನೆಮ್ಮದಿ ಲಭ್ಯವಾಗಬೇಕಾದರೆ ಧರ್ಮದ ಆಚರಣೆಯಿಂದ ಮಾತ್ರ ನೆಮ್ಮದಿ ಸಿಗುವುದು ಸಾಧ್ಯವಾಗುತ್ತದೆ ಎಂದು ಶಿರಹಟ್ಟಿ ಜ.ಫಕ್ಕಿರೇಶ್ವರ ಸಂಸ್ಥಾನ ಮಠದ 13ನೇ ಪಟ್ಟಾಧ್ಯಕ್ಷರಾದ ಜ.ಫ.ಸಿದ್ದರಾಮ ಶ್ರೀಗಳು ಹೇಳಿದರು.
ಅವರು ಪಟ್ಟಣದ ವಾರ್ಡ 2ರ ಹರಿಪೂರ ಗ್ರಾಮದಲ್ಲಿನ ಇಡಗುಂಜಿ ಶ್ರೀಗಣೇಶನಿಗೆ ಅಂಗಾರಕ ಸಂಕಷ್ಟಿ ನಿಮಿತ್ಯ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆಯ ಕಾರ್ಯಕ್ರಮದಲ್ಲಿ ಸಾನಿದ್ಯವನ್ನು ವಹಿಸಿ ಮಾತನಾಡಿದರು.
ಕೇವಲ ಕಷ್ಟ ಬಂದಾಗಮಾತ್ರ ದೇವರನ್ನು ನೆನದರೆ ಸಾಲದು ಸದಾವಕಾಲ ದೇವರ ಧ್ಯಾನ ಮತ್ತು ಪೂಜೆ ಮತ್ತು ಸೇವೆಗಳನ್ನು ಮಾಡುತ್ತಾ ಬಂದರೆ ನಿಮ್ಮ ಸೇವೆಗೆ ದೇವರು ಮೆಚ್ಚಿ ನಿಮ್ಮಗೆ ನೆಮ್ಮದಿ ಒದಗಿಸಲು ಮುಂದಾಗುತ್ತಾನೆ. ಮೊದಲು ಪೂಜಿತ ವಿಘ್ನವಿನಾಶಕನಾದ ಗಣೇಶ ಧ್ಯಾನ ಎಲ್ಲರಿಗೂ ಶ್ರೇಷ್ಠವಾದುದಾಗಿದೆ. ಈ ತನಿಂದಲೆ ಎಲ್ಲ ವಿಘ್ನಗಳು ದೂರವಾಗಿ ನೆಮ್ಮದಿ ನೀಡುತ್ತಾನೆ. ಆದ್ದರಿಂದ ಧರ್ಮ ಆಚರಣೆಯಿಂದಾಗಿ ಗ್ರಾಮ ಕ್ಕೆ ನಾಡಿಗೆ ಮತ್ತು ದೇಶಕ್ಕೆ ಒಳಿತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿ.ಆರ್.ಸಜರ್ಾಪುರ, ಬಸವರಾಜ ಕಳಸಾಪೂರ, ಬಸವರಾಜ ಮೂರಶಿಳ್ಳಿ, ಈರಪ್ಪ ಯಾದಗೇರಿ, ಪಪಂ ಸದಸ್ಯ ಮಹದೇವ ಗಾಣಿಗೇರ, ಮೌನೇಶ ಯಾದಗೇರಿ, ಸುರೇಶ ಮೂರಶಿಳ್ಳಿ, ವಿರೇಶ ಬಣಗಾರ, ಶಿವರಾಜ ಮೂರಶಿಳ್ಳಿ, ಚಂದ್ರಶೇಖರ ಮೂರಶಿಳ್ಳಿ, ಸಿವರಾಜ ದೇಸಾಯಿಪಟ್ಟಿ, ಮಹೇಶ ದಾನಪ್ಪಗೌಡ್ರ, ರವಿ ಮೂರಶಿಳ್ಳಿ, ಶರಣಪ್ಪ ದೇಸಾಯಿಪಟ್ಟಿ, ಗಂಗಾಧರ ಮೂರಶಿಳ್ಳಿ, ಸಿದ್ದರಾಮಪ್ಪ ಮೂರಶಿಳ್ಳಿ ಮುಂತಾದವರು ಉಪಸ್ಥಿತರಿದ್ದರು.