ಧಾರ್ಮಿಕ ಕಾರ್ಯದಿಂದ ಮನಸ್ಸಿಗೆ ನೆಮ್ಮದಿ: ಬಸವಲಿಂಗೇಶ್ವರ ಶ್ರೀಗಳು

ಲೋಕದರ್ಶನ ವರದಿ

ಯಲಬುರ್ಗಾ  10: ಜನರು ತಮ್ಮ ದಿನ ನಿತ್ಯದ ಕಾರ್ಯಗಳ ಜೊತೆಗೆ ಧಾಮರ್ಿಕ ಕಾರ್ಯಗಳನ್ನು ಮಾಡುವದರಿಂದ ಮನಸ್ಸಿಗೆ ಅತ್ಯಂತ ನೆಮ್ಮದಿ ಸಿಗುತ್ತದೆ ಎಂದು ಸ್ಥಳೀಯ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಗಳು ಹೇಳಿದರು.

ಪಟ್ಟಣದಲ್ಲಿ ಶ್ರಾವಣ ಮಾಸದ ವಿವಿಧ ಪೂಜಾ ಕಾರ್ಯಕ್ರಮಗಳ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಮ್ಮ ಭಾಗದ ಜನತೆ ದೇವರ ಮೇಲೆ ಅತ್ಯಂತ ನಂಬಿಕೆ ಇಟ್ಟುಕೊಂಡಿರುವಂತವರು ನಮ್ಮ ಮಠದಿಂದ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲಿ ಸ್ವ ಇಚ್ಚೆಯಿಂದ ಭಾಗವಹಿಸಿ ತಮ್ಮ ತನು ಧನ ಮನದಿಂದ ಕಾರ್ಯನಿರ್ವಹಿಸುತ್ತಾ ಬಂದಿರುತ್ತಾರೆ ಅದರಂತೆ ಶ್ರಾವಣ ಮಾಸದಲ್ಲಿ ತಿಂಗಳ ಪರ್ಯಂತ ನಮ್ಮ ಮಠದಲ್ಲಿ ವಿವಿಧ ಧಾಮರ್ಿಕ ಕಾರ್ಯಗಳು ಹಾಗೂ ಪುರಾಣ ಪ್ರವಚನ ನಡೆದಿದ್ದು ಇಂದು ಮುಕ್ತಾಯ ಸಮಾರಂಭವಾಗಿದೆ ಆದ್ದರಿಂದ ಜನತೆ ಈ ಕಾರ್ಯಕ್ರಮವನ್ನು ಅತ್ಯಂತ ಸಡಗರದಿಂದ ಮಾಡುತ್ತಿದ್ದು ಮತ್ತು ಪಟ್ಟಣದ ತುಂಬೆಲ್ಲಾ ಆನೆ, ಡೊಳ್ಳು, ಭಜನೆ ಮಾಡುತ್ತಾ ಮೆರವಣಿಗೆ ಮಾಡಿದ್ದು ತುಂಬಾ ಸಂತೋಚವಾಗಿದೆ ಎಂದರು,

ಕರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮೀಗಳು ಜೀಗೇರಿಮಠ, ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮೀಗಳು ಮೇಲುಗದ್ದಿಗೆ ಮಠ ಮ್ಯಾಗೇರಿ-ಇಟಗಿ ಮತ್ತು ಪಪಂ ಸದಸ್ಯರಾದ ಬಸವಲಿಂಗಪ್ಪ ಕೊತ್ತಲ, ಕಳಕಪ್ಪ ತಳವಾರ, ಅಮರೇಶ ಹುಬ್ಬಳ್ಳಿ, ಮುಖಂಡರಾದ ಆದೇಶ ಹುಬ್ಬಳ್ಳಿ, ಈಶಪ್ಪ ಸ್ಟಾಂಪಿನ್, ಸೇರಿದಂತೆ ಅನೇಕ ಭಕ್ತರು ಹಾಜರಿದ್ದರು.