ವಿದ್ಯಾರ್ಥಿಗಳ ದೈಹಿಕ ಗಟ್ಟಿತನ ಕ್ಕೆ ದೇಶೀಯ ಕಬಡ್ಡಿ ಸಹಕಾರಿ: ವಿಜಯಕುಮಾರ

ಲೋಕದರ್ಶನವರದಿ

ರಾಣೇಬೆನ್ನೂರು: ವಿದ್ಯಾಥರ್ಿಗಳು ಆಟದಲ್ಲಿ ಸೋಲು ಗೆಲುವನ್ನು ಪರಿಗಣಿಸದೇ ಕ್ರೀಡೆಯಲ್ಲಿ ಭಾಗವಹಿಸಿ ಎಲ್ಲರಿಗೂ ಮನರಂಜನೆ ನೀಡುವುದೇ ಮುಖ್ಯ ಉದ್ದೇಶವಾಗಿರಬೇಕು ಎಂದು ಪ್ರಾಚಾರ್ಯ ಡಾ|| ಜಿ.ಇ. ವಿಜಯಕುಮಾರ ಹೇಳಿದರು.

      ಅವರು ಸೋಮವಾರ ನಗರದ ಎಸ್ಜೆಎಂವಿ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ  ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಆಯೋಜಿಸಿದ್ದ, ಅಂತರ್ಕಾಲೇಜು ಮಹಿಳೆಯರ ಕಬಡ್ಡಿ ಪಂದ್ಯಾವಳಿಯಲ್ಲಿ ಪಾರಿವಾಳವನ್ನು ಹಾರಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

     ವಿದ್ಯಾಥರ್ಿಗಳು ಕ್ರೀಡೆಯನ್ನು ಕೇವಲ ಕ್ರೀಡಾ ಮನೋಭಾವದಿಂದ ಸ್ವೀಕರಿಸಿಬೇಕು, ಪಠ್ಯದ ಜೊತೆಗೆ ಕ್ರೀಡೆಯಲ್ಲಿಯೂ ಭಾಗವಹಿಸಿದಾಗ ದೈಹಿಕ ಹಾಗೂ ಮಾನಸಿಕವಾಗಿ ಸಮರ್ಥವಾಗಿರಲು ಸಹಾಯಕವಾಗುತ್ತದೆ ಎಂದರು.

     ಕಾಕಿ ಜನಸೇವಾ ಸಂಸ್ಥೆಯ ಕಾರ್ಯದಶರ್ಿ ಶಿವಾನಂದ ಬಗಾದಿ ಮಾತನಾಡಿ, ವಿದ್ಯಾಥರ್ಿಗಳು ತಂದೆ-ತಾಯಿ, ಪೋಷಕರನ್ನು ಮತ್ತು ಗುರುಗಳನ್ನು ಪೂಜ್ಯ ಮನೋಭಾವದಿಂದ ಕಾಣಬೇಕು. ಅಂದಾಗ ಮಾತ್ರ ಉತ್ತಮ ಸಮಾಜದ ನಿಮರ್ಾಣಕಾರರಾಗಿ ರೂಪಗೊಳ್ಳಲು ಸಾಧ್ಯ ಎಂದರು.

     ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಹಾಯಕ ದೈಹಿಕ ನಿದರ್ೇಶಕ ವಿಶ್ವನಾಥ ನಡಕಟ್ಟಿ, ಅವರು ವಿದ್ಯಾಥರ್ಿಗಳ ವ್ಯಕ್ತಿತ್ವ ನಿಮರ್ಾಣದಲ್ಲಿ ಕ್ರೀಡಾ ಚಟುವಟಿಕೆಗಳ ಪಾತ್ರ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು. 

     ಸಮಾರಂಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ವಿ.ವಿ. ಮಣ್ಣಬಸಣ್ಣನವರ, ವಿರೇಶ್. ಕೋರಿಶೆಟ್ಟರ್. ನಿರಂಜನ ಉದಾಸಿ, ನಿಂಗಪ್ಪ ಕುಡಗೋಲ, ಪ್ರೊ|| ಶಿವರಾಜಕುಮಾರ. ಕೆ, ಭವಾನಿ ಬ್ಯಾಳಿ, ಪೂಜಾ ಚನ್ನಗೌಡರ ಸೇರಿದಂತೆ ಮತ್ತಿತರ ಗಣ್ಯರು ಉಪನ್ಯಾಸಕರು ಪಾಲ್ಗೊಂಡಿದ್ದರು. 

      ಪಂದ್ಯಾವಳಿಯಲ್ಲಿ ವಿವಿಧ ಮಹಾವಿದ್ಯಾಲಯಗಳಿಂದ 8 ತಂಡಗಳು ಭಾಗವಹಿಸಿದ್ದು, ಹುಬ್ಬಳ್ಳಿಯ ಎಸ್ಜೆಎಂವಿ ಮಹಿಳಾ ಮಹಾವಿದ್ಯಾಲಯ ಕ್ರೀಡಾಪಟುಗಳು ಪ್ರಥಮ ಸ್ಥಾನ, ಸುರಪುರದ ಜನನಿ ಮಹಿಳಾ ಮಹಾವಿದ್ಯಾಲಯ ದ್ವಿತೀಯ ಸ್ಥಾನ ಪಡೆದರು. ವಿಜೇತ ಕ್ರೀಡಾಪಟುಗಳಿಗೆ ಆಕರ್ಷಕ ಟ್ರೋಫಿಗಳನ್ನು ವಿತರಿಸಿ ಗೌರವಿಸಲಾಯಿತು.