ದೇಶೀಯ ಗೋವಿನ ಹಾಲಿನಲ್ಲಿ ಸತ್ವಗುಣ ಹಾಗೂ ಸಾತ್ವಿಕತೆಯಿದೆ

ಸಿದ್ದಾಪುರ, 8: ದೇಶೀಯ ಗೋವಿನ ಹಾಲಿನಲ್ಲಿ ಸತ್ವಗುಣವಿದೆ, ಸಾತ್ವಿಕತೆಯಿದೆ. ಇಂತಹ ಹಾಲಿನ ಸೇವನೆಯಿಂದ ಸ್ಥಿರತೆ, ಏಕಾಗ್ರತೆ, ಶಕ್ತಿ ದೊರೆಯುತ್ತದೆ. ಗೋವು ನಮಗೆ ಹಾಲಿನ ಮೂಲಕ ಪ್ರೀತಿಯ ಧಾರೆಯೆರೆಯುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಶ್ರೀಗಳು ಹೇಳಿದ್ದಾರೆ. 

ಅವರು ಶಂಕರ ಪಂಚಮೀ ಉತ್ಸವ ನಿಮಿತ್ತ ಗೋಸ್ವರ್ಗದಲ್ಲಿ ಮಕ್ಕಳೊಂದಿಗೆ ಏರ್ಪಡಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಮಕ್ಕಳಿಗೆ ಹಾಲು ಜೇನು ಇಷ್ಟ. ಗೋವು ಹಾಲಿನಂತೆ, ಮಕ್ಕಳು ಜೇನಿನಂತೆ, ಇವೆರಡರ ಸಮಾಗಮವು ಇಂದು ಗೋಸ್ವರ್ಗದಲ್ಲಿ ಸಾಕ್ಷಾತ್ಕಾರವಾಗಿದೆ. ಗೋವುಗಳು ಮಕ್ಕಳು ಒಂದಾಗಬೇಕು, ಮಕ್ಕಳಲ್ಲಿ ಗೋವಿನ ಕುರಿತು ಪ್ರೀತಿ ಹೆಚ್ಚಬೇಕು ಎಂದು ಶ್ರೀಗಳು ಆಶಯ  ವ್ಯಕ್ತಪಡಿಸಿ ಮಕ್ಕಳೊಂದಿಗೆ ಆತ್ಮೀಯ ಸಂವಾದ ನಡೆಸಿಕೊಟ್ಟರು. ಸಪ್ತ ಸನ್ನಿಧಿಯ ಕುರಿತು ವಿವರಿಸಿದ ಶ್ರೀಗಳು ಸೀತಾರಾಮಚಂದ್ರ, ಚಂದ್ರಮೌಳೀಶ್ವರ, ರಾಜರಾಜೇಶ್ವರೀ, ಆಂಜನೇಯ, ಗುರುಪರಂಪರೆ, ರಾಮೇಶ್ವರ, ಭುವನೇಶ್ವರೀ ದೇವತೆಗಳ ಆವಾಸವಿದಾಗಿದೆ ಎಂದರು. ವಿಷ್ಣುವಿನಿಂದ ಗುರುಪರಂಪರೆ ಆರಂಭವಾಗಿ ಗೌಡಪಾದರಿಂದ ಶಂಕರಾಚಾರ್ಯರಿಗೆ ಬಂದು ಈ ವರೆಗೂ ಅನೂಚಾನವಾಗಿದೆ ಎಂದು ಶ್ರೀಗಳು ಮಕ್ಕಳಿಗೆ ಮನಮುಟ್ಟುವಂತೆ ವಿವರಿಸಿದರು. ಡಿ.ಎಸ್.ಹೆಗಡೆ ದೇಶೀಯ ಆಕಳ ಹಾಲಿನಲ್ಲಿಯ ವಿವಿಧ ಅಂಶಗಳ ಕುರಿತು ವಿವರಣೆ ನೀಡಿದರು. ಮಹಾಮಂಡಲ ಅಧ್ಯಕ್ಷೆ ಈಶ್ವರೀ ಬೇರ್ಕಡವು, ಕುಮಾರಸ್ವಾಮಿ ವಮರ್ುಡಿ(ಕೊಚ್ಚಿ), ಆರ್.ಎಸ್.ಹೆಗಡೆ ಹರಗಿ, ಆರ್.ಎಸ್.ಎಸ್ನ ಅ.ಪು.ನಾರಾಯಣ ಭಟ್ಟ ಮುಂತಾದವರು ಪಾಲ್ಗೊಂಡಿದ್ದರು. ಮಹಾಮಂಡಲ ವ್ಯಾಪ್ತಿಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಮಕ್ಕಳು ವಿವಿಧ ಆಟ-ಪಾಠಗಳಲ್ಲಿ ತನ್ಮಯತೆ, ಉತ್ಸಾಹದಿಂದ ಪಾಲ್ಗೊಂಡು ಹಷರ್ೋದ್ಘಾರ ಮಾಡಿದರು.  

ಇಂದು ಹಾರಕರೆ ನಾರಾಯಣ ಭಟ್ಟರಿಗೆ "ಧನ್ಯಸೇವಕ" ಪ್ರಶಸ್ತಿ ಪ್ರದಾನ.