ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಡಾಲ್ಫಿನ್ ಕಳೆಬರ ಪತ್ತೆ
Dolphin carcass discovered at Rabindranath Tagore beach in the city
ಕಾರವಾರ 11: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಬುಧವಾರ ಡಾಲ್ಫಿನ್ ಕಳೆಬರ ಪತ್ತೆಯಾಗಿದೆ. ಕಳೆದ 3-4 ದಿನಗಳ ಹಿಂದೆಯೇ ಡಾಲ್ಫಿನ್ ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಊಹಿಸಿದ್ದಾರೆ.ಮೃತ ಡಾಲ್ಫಿನ್ ಸುಮಾರು ಐದು ಅಡಿ ಉದ್ದವಾಗಿದೆ. ಇದು ಹಂಪ್ ಬ್ಯಾಕ್ ಪ್ರಜಾತಿಗೆ ಸೇರಿದ್ದಾಗಿದೆ.
ಬುಧವಾರ ಕಾರವಾರ ವ್ಯಾಪ್ತಿಯ ಅರಬ್ಬೀ ಸಮುದ್ರದ ಕಡಲತೀರದಲ್ಲಿ ಡಾಲ್ಫಿನ್ ಶವ ತೇಲಿ ಬಂದಿತ್ತು. ಇದನ್ನು ಗಮನಿಸಿದ ಕಡಲ ಜೀವ ವಿಭಾಗದ ಅರಣ್ಯ ಇಲಾಖೆಯವರು ಡಾಲ್ಫಿನಿನ ಸಾವಿನ ಸಾಧ್ಯತೆ ಬಗ್ಗೆ ಮಾಹಿತಿ ಸಂಗ್ರಹಿಸಲು ಕಲಡತೀರದ ಬಳಿಯೇ ಡಾಲ್ಪಿನ್ ಶವದ ಮರಣೋತ್ತರ ಪರೀಕ್ಷೆ ಮಾಡಿದರು. ಮೀನುಗಾರರು ಹರಿದ ಬಲೆಯನ್ನು ಆಳ ಸಮುದ್ರದಲ್ಲಿ ಬಿಸಾಡಿದ್ದು, ಅಂತಹ ಬಲೆಗೆ ಸಿಕ್ಕು ಡಾಲ್ಪಿನ್ ಮೃತಪಟ್ಟಿರಬಹುದು ಎಂದು ಕಡಲ ಜೀವಶಾಸ್ತ್ರ ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸಿದರು.
ಕಡಲತೀರದಲ್ಲೇ ಜೆಸಿಬಿಯ ಮೂಲಕ ಹೊಂಡ ತೆಗೆದು, ಅಲ್ಲಿಯೇ ಡಾಲ್ಪಿನ್ ಕಳೆ ಬರಹ ಹೂಳಲಾಯಿತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 