ವಿಜಾಪುರ ಜು.2 : ಜೂನ್1ರಂದು ರಾಷ್ಟ್ರೀಯ ವೈದ್ಯ ದಿನಾಚರಣೆಯ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘ ಜಿಲ್ಲಾಶಾಖೆಯ ವತಿಯಿಂದ ಕೊರೊನಾ ವಾರಿಯರಗಳಾದ ಸರಕಾರಿ ಜಿಲ್ಲಾಆಸ್ಪತ್ರೆಯ ವೈದ್ಯರನ್ನು ಸನ್ಮಾನಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಸುಮಾರು ಮೂರು ತಿಂಗಳುಗಳಿಂದ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಹಾಗೂ ಕೊರೊನಾ ಸೋಂಕಿತ ಗಭರ್ಿಣಿಯರ ಹೆರಿಗೆ ಮಾಡಿಸಿಕೊಂಡು ಇಡೀ ರಾಜ್ಯಕ್ಕೆ ಮಾದರಿಯಾದ ಸುಮಾರು 70 ವೈದ್ಯರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ,ಪ್ರಶಸ್ತಿ ಪತ್ರ ವಿತರಿಸಿ ಸ್ಮರಣೀಯವಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ ಮಹೆಂದ್ರ ಕಾಪಸೆ ಸನ್ಮಾನ ಸ್ವೀಕರಿಸಿ ಮಾತನಾಡಿ ಸುಮಾರು ಮೂರು ತಿಂಗಳುಗಳಿಂದ ನಮ್ಮ ತಂಡ ಅವಿರತವಾಗಿ ಹೋರಾಡುತ್ತಿದ್ದು ನಮ್ಮ ಸೇವೆಯನ್ನು ಭಾರತಿಯ ವೈದ್ಯಕೀಯ ಸಂಘ ಗುರುತಿಸಿ ಸನ್ಮಾನಿಸಿರುವುದು ಸೇನಾನಿಗಳಿಗೆ ಮತ್ತಷ್ಟು ಮಾನಸಿಕ ಸ್ಥೈರ್ಯ ತುಂಬಿಸಿದಂತಾಗಿದೆ,ಕೊರೊನಾ ರೋಗ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಸರಕಾರದ ಜೊತೆ ಖಾಸಗಿ ವೈದ್ಯರೂ ಕೈಜೋಡಿಸುತ್ತಿರುವುದು ಸಂತಸ ತಂದಿದೆ ಎಂದು ಹೆಳಿದರು. ಅದ್ಯಕ್ಷತೆ ವಹಿಸಿದ್ದ ಭಾರತೀಯ ವೈದ್ಯಕೀಯ ಸಂಘ ಜಿಲ್ಲಾದ್ಯಕ್ಷ ಡಾ ಸಂತೋಷ ನಂದಿ ಮಾತನಾಡಿ ಭಾರತೀಯ ವೈದ್ಯಕೀಯ ಸಂಘ ಕೊರೊನಾ ವಿರುದ್ದದ ಸಮರದಲ್ಲಿ ಸರಕಾರದ ಜೊತೆ ಸದಾ ಅಗತ್ಯ ಸಹಕಾರ ನಿಡಲಿದೆ ಎಂದು ಹೇಳಿದರು.ಜಿಲ್ಲಾ ಶಸ್ತ್ರಚಿಕಿತ್ಸಕ ಡಾ ಶರಣಪ್ಪ ಕಟ್ಟಿ ವೆದಿಕೆಯ ಮೇಲಿದ್ದರು,ಗೌರವ ಕಾರಯದಶರ್ಿ ಡಾ ಗಿರಿಶ ಕುಲ್ಲೊಳ್ಳಿ ನಿರುಪಿಸಿದರು,ಡಾ ಸುರೆಶ ಕಾಗಲಕರ ವಂದಿಸಿದರು,ಡಾ ಮಲ್ಲನಗೌಡ ಬಿರಾದಾರ,ಡಾ ಗಲಗಲಿ,ಡಾ ಲಕ್ಕಣ್ಣವರ,ಡಾ ಎಮ ಎಮ ಪಾಟಿಲ,ಡಾ ಮೊಹಮ್ಮದ ಸಿದ್ದಿಕ,ಡಾ ಸುರೇಂದ್ರ ಅಗರವಾಲ,ಡಾ ಕೊಟೆಣ್ಣವರ,ಡಾ ರವಿಕುಮಾರ ಬಿರಾದಾರ,ಡಾ ಮಹೇಶ ಕರಿಗೌಡರ,ಡಾ ಎಸ ಬಿ ಪಾಟೀಲ ಸುನಗ,ಡಾ ಕವಿತಾ ದೊಡಮನಿ,ಡಾ ರೇಣುಕಾ ಪಾಟೀಲ,ಡಾ ಗೋಲಗೆರಿ,ಡಾ ಗುಂಡಬಾವಡಿ,ಡಾ ಮೀನಾಕ್ಷಿ ಸೊನ್ನದ,ಡಾ ಚಂದರಗಿ,ಡಾ ಸಂಪತ ಗುನಾರಿ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.