ರೋಗಿಗಳಿಗೆ ಗುಣಮಟ್ಟದ ಸೇವೆ ನೀಡಲು ವೈದ್ಯರ ಮಾನಸಿಕ ಆರೋಗ್ಯ ಅತ್ಯಗತ್ಯ
Doctors' mental health is essential for providing quality care to patients
ಲೋಕದರ್ಶನ ವರದಿ
ಕಾಗವಾಡ 23 : ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಒತ್ತಡವನ್ನು ನಿಭಾಯಿಸಲು, ವೈದ್ಯರು ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತ ಮತ್ತು ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ. ಮಾನಸಿಕವಾಗಿ ಸಮರ್ಥ ಮತ್ತು ಬಲಿಷ್ಠ ವೈದ್ಯರು ಮಾತ್ರ ರೋಗಿಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಸಾಧ್ಯವೆಂದು ಮಿರಜನ ನಿರ್ಮಲ ಆಸ್ಪತ್ರೆ, ವ್ಯಸನಮುಕ್ತಿ ಮತ್ತು ಪುನರವಸತಿ ಕೇಂದ್ರದ ಖ್ಯಾತ ಮನೋವೈದ್ಯ ಡಾ. ಚಂದ್ರಶೇಖರ ಹಳಿಂಗಳೆ ಅಭಿಪ್ರಾಯಪಟ್ಟಿದ್ದಾರೆ.
ಅವರು ಇತ್ತಿಚಿಗೆ ಮಹಾರಾಷ್ಟ್ರದ ವೆಂಗುರ್ಲಾದಲ್ಲಿ ವೈದ್ಯರಿಗಾಗಿ ಆಯೋಜಿಸಿಸಿದ್ದ ಮಾನಸಿಕ ಆರೋಗ್ಯ ಕುರಿತು ಶಿಬಿರದಲ್ಲಿ ಮಾತನಾಡುತ್ತಿದ್ದರು. ರೋಗಿಗಳ ನಿರಂತರ ಆರೈಕೆ, 24 ಗಂಟೆಗಳ ಸೇವೆಗೆ ಲಭ್ಯ, ತುರ್ತು ಪರಿಸ್ಥಿತಿಗಳು, ರೋಗಿಗಳು ಮತ್ತು ಸಂಬಂಧಿಕರಿಂದ ಹೆಚ್ಚುತ್ತಿರುವ ನೀರೀಕ್ಷೆಗಳು ಮತ್ತು ಸರಿಯಾದ ಸಮಯದಲ್ಲಿ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವ ಒತ್ತಡವು ಇಂದಿನ ವೈದ್ಯರಲ್ಲಿ ಮಾನಸಿಕ ಆಯಾಸ ಮತ್ತು ಒತ್ತಡವನ್ನು ಉಂಟುಮಾಡುತ್ತಿದೆ.
ಈ ಮಾನಸಿಕ ಒತ್ತಡವನ್ನು ಸಕಾಲಿಕವಾಗಿ ಪರಿಹರಿಸದಿದ್ದರೆ, ಅದು ವೈದ್ಯರ ವೈಯಕ್ತಿಕ ಜೀವನದ ಜೊತೆಗೆ ಅವರ ವೃತ್ತಿಪರ ಕಾರ್ಯಕ್ಷಮತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ವೈದ್ಯರು ತಮಗಾಗಿ ಸಮಯ ತೆಗೆದುಕೊಳ್ಳಬೇಕು ಮತ್ತು ನಿಯಮಿತ ವ್ಯಾಯಾಮ, ಯೋಗ, ಧ್ಯಾನ ಮಾಡಬೇಕು. ಅಲ್ಲದೆ, ಸಾಕಷ್ಟು ನಿದ್ರೆ, ಪರಿಣಾಮಕಾರಿ ಸಮಯ ನಿರ್ವಹಣೆ ಮತ್ತು ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಬಹಳ ಮುಖ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ವೆಂಗುರ್ಲಾ ಮೆಡಿಕಲ್ ಅಸೋಶಿಯೆಶಿಯನ್‌ನ ಅಧ್ಯಕ್ಷ ಡಾ. ರಾಜೇಶ್ವರ ಉಬಾಳೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಯದರ್ಶಿ ಡಾ. ಸಂಜೀವ ಲಿಂಗವತ, ಡಾಕ್ಟರ್ಸ್ ಫ್ರೆಟರ್ನಿಟಿ ಕ್ಲಬ್‌ನ ಅಧ್ಯಕ್ಷೆ ಡಾ. ಸುರೇಖಾ ಕಾಳೆ, ಡಾ. ವಾಮನ ಕಶಾಳಿಕರ ಮತ್ತು ಡಾ. ಜ್ಞಾನೇಶ್ವರ್ ಶಿವಚರಣ ಸೇರಿದಂತೆ ವೆಂಗಿರ್ಲಾದ ವೈದ್ಯರು, ವೈದ್ಯಕೀಯ ಸೇವೆಯಲ್ಲಿರಿವ ಇತರರು, ನಿರ್ಮಲ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 