ವೈದ್ಯರ ದಿನಾಚರಣೆ ಸಮಾಜ ಸೇವಕರಿಗೆ ಸನ್ಮಾನ
Doctors' Day felicitations to social workers
ಲೋಕದರ್ಶನ ವರದಿ
ಸವದತ್ತಿ 01: ವೈದ್ಯರು ರೋಗಿಗಳ ಪಾಲಿಗೆ ದೇವಮಾನವರು. ತಮ್ಮ ಜೀವನವನ್ನೇ ಸಮಾಜದ ಆರೋಗ್ಯ ರಕ್ಷಣೆಗಾಗಿ ಮುಡಿಪಾಗಿಟ್ಟು, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತಿರುವ ವೈದ್ಯ ಸಮುದಾಯದ ಕಾರ್ಯ ಶ್ಲಾಘನೀಯ ಎಂದು ಬಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ವಿರೂಪಾಕ್ಷ ಮಾಮನಿ ಅಭಿಪ್ರಾಯಪಟ್ಟರು.ನಗರದ ಮಾಮನಿ ಕಲ್ಯಾಣ ಮಂಟಪದಲ್ಲಿ ಮಾಮನಿ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಕಾರ್ಯಕ್ರಮದ ಅಂಗವಾಗಿ ಭಾಗವಹಿಸಿದ್ದ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಳಿಕ ಮಾತನಾಡಿದ ಅವರು, ಪ್ರತಿ ರೋಗಿಗೆ ವೈದ್ಯರೇ ದೇವರು. ಅವರ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲಾಗದು. ಈ ಸೇವಾ ಮನೋಭಾವ ಹೀಗೆಯೇ ನಿರಂತರವಾಗಿ ವಿಸ್ತರಿಸಲಿ ಎಂದು ಶುಭ ಹಾರೈಸಿದರು. ತಾಲೂಕಾ ಆರೋಗ್ಯಾಧಿಕಾರಿ ಡಾ. ಶ್ರೀಪಾದ ಸಬನೀಸ, ಡಾ. ಅನಿಲ ಹನಮಂತಗೌಡ, ಡಾ. ಅಭಿವಂದನ ಕಬ್ಬಿನ, ಡಾ. ಹೇಮಂತ ಭಸ್ಮೆ, ಡಾ. ರಮೇಶ ದಾನಗೌಡ, ಡಾ. ಉದಯ ಹುರಳಿ, ಡಾ. ಶಿವಯೋಗಿ ಫಕ್ಕೀರಶೆಟ್ಟಿ, ಡಾ. ರವಿ ಹನಸಿ, ಡಾ. ಜಿ. ಎಲ್. ಮೇಟಿ, ಡಾ. ಮೋಹನ ಬಾಳಿ, ಡಾ. ಪಲ್ಲವಿ ನವದಗಿ, ಡಾ. ನಯನಾ ಭಸ್ಮೆ, ಡಾ. ಬಸೀರಅಹ್ಮದ ಬೈರಕದಾರ, ಡಾ. ಮಂಜುನಾಥ ಬಸರಗಿ, ಡಾ. ಸುನೀಲ ಮುಂಗರವಾಡಿ ಹಾಗೂ ಡಾ. ಚಚಡಿ ಸೇರಿದಂತೆ ಅನೇಕ ವೈದ್ಯರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಬಸವರಾಜ ಕಾರದಗಿ, ವಿಜಯ ನಾವದಗಿ, ಪ್ರವೀಣ ಕರ್ಕಿ, ರಾಜಶೇಖರ ಕಾರದಗಿ, ಗುರ್ಪ ಚಿಕ್ಕುಂಬಿ, ಶ್ರೀಶೈಲ್ ಕಾರದಗಿ, ಪುಂಡಲಿಕ ಮಾದರ, ಸುನೀಲ ಮಾಮನಿ, ಬಸವರಾಜ ಪುಟ್ಟಿ, ಶ್ರೀಶೈಲ್ ಮುತಗೊಂಡ, ವೀರೇಶ ಪ್ರಭುನವರ, ಅರ್ಜುನ ಅಮೋಜಿ, ರಾಜು ಸಾಲಿಮಠ, ಸಂಗಮೇಶ ಗುಡದೂರ, ಉಮೇಶ ಶಿಂಧೋಗಿ ಸೇರಿದಂತೆ ಹಲವು ಮುಖಂಡರು ಹಾಗೂ ಗಣ್ಯರು ಭಾಗವಹಿಸಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 