ವೈದ್ಯರ ದಿನಾಚರಣೆ ಸಂಭ್ರಮ

ವೈದ್ಯರ ದಿನಾಚರಣೆ ಸಂಭ್ರಮ  Doctor's Day celebration

ಲೋಕದರ್ಶನ ವರದಿ 

ಧಾರವಾಡ 01:  ವಿದ್ಯಾಗಿರಿಯ ಜೆ.ಎಸ್‌.ಎಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸುವಂತಲಾಯಿತು. ಸಮಾಜಕ್ಕೆ ವೈದ್ಯರು ನೀಡುತ್ತಿರುವ ಅಮೂಲ್ಯ ಸೇವೆಯನ್ನು ಸ್ಮರಿಸುವ ಅವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಶಾಲೆಯ ಎಲ್‌ಕೆಜಿ ಇಂದ ಎರಡನೇ ತರಗತಿಯ ಪುಟಾಣಿ ಮಕ್ಕಳು ವೈದ್ಯರ ವೇಷಧಾರಿಗಳಾಗಿ ಶಾಲೆಗೆ ಆಗಮಿಸಿ ಸಂಭ್ರಮದಿಂದ ಆಚರಿಸಿದರು. ಈ ದಿನಾಚರಣೆಯು ವೈದ್ಯರ ಮೇಲಿನ ಗೌರವವನ್ನು ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಹೆಚ್ಚಿಸುವಂತೆ ಮಾಡಿತು. ಶಾಲೆಯ ಮುಖ್ಯೋಪಾಧ್ಯಾಯರು ಶ್ರೀಮತಿ ಪಿ.ಎಸ್‌. ಸುಧಾಮಣಿ ಹಾಗೂ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದರು.