ವೈದ್ಯರ ದಿನ : ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ
Doctor's Day : Free health checkup for poor patients in hospital
ಬೆಳಗಾವಿ 02: ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಜುಲೈ 1ರಂದು ಆಟೋನಗರದ ಆರ್‌ಎಎಂಸಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನು ಉತ್ಸಾಹದಿಂದ ಆಚರಿಸಲಾಯಿತು.
ಧನ್ವಂತರಿ ದೇವರ ಪೂಜೆಯೊಂದಿಗೆ ಧನ್ವಂತರಿ ದೇವರಿಗೆ ಹಾರ ಅರ್ಿಸಿ ಸ್ತೋತ್ರ ಪಠಣ ಮಾಡಲಾಯಿತು. ಕಾರ್ಯಕ್ರಮದ ಪೂಜೆ ಮತ್ತು ಉದ್ಘಾಟನೆ ಕಾರ್ಯಕ್ರಮವನ್ನು ಮುಖ್ಯ ವೈದ್ಯಾಧಿಕಾರಿ ಡಾ. ಉಜ್ವಲಾ ಕೆ. ದೇಶಪಾಂಡೆ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಕನ್ನಡ ಬಳಗದ ಅಧ್ಯಕ್ಷ ಡಾ. ಕೆ. ಡಿ. ದೇಶಪಾಂಡೆ ಭಾಗವಹಿಸಿ ವೈದ್ಯರ ಸೇವೆಯ ಮಹತ್ವವನ್ನು ವಿವರಿಸಿದರು. ಜುಲೈ 3ರಂದು ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ, ರೋಗಿಗಳಿಗಾಗಿ ಸಮರ್ಕ ಮಾರ್ಗದರ್ಶನ, ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಹಾಗೂ ಉಚಿತ ಓಷಧೋಪಚಾರ ನೀಡಲಾಗುವುದು ಎಂದು ತಿಳಿಸಿದ ಅವರು ಜನಸೇವೆಯೇ ಜನಾರ್ಧನ ಸೇವೆ ಎಂದು ಉಲ್ಲೇಖಿಸಿದರು.
ಡಾ. ಯತಿರಾಜ ಮತ್ತು ಡಾ. ವಿಶಾಲ (ತುರ್ತು ವೈದ್ಯಕೀಯಾಧಿಕಾರಿಗಳು), ಹಾಗೂ ಡಾ. ಕೋಮಲ (ಇ.ಎನ್.ಟಿ ತಜ್ಞೆ) ಉಪಸ್ಥಿತರಿದ್ದರು. ಆಸ್ಫತ್ರೆಯ ಸಿಬ್ಬಂದಿ ನಿಜಾಮ್ ಆವಟಿ, ನಿಕತ್ ಗವಸ, ರಿಷಿಕೇಶ್ ಸುರಂಗೆ, ಸಭಾ ಪೆಂಡಾರಿ, ನಾಗರಾಜ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 