ನಿತ್ಯ ಯೋಗ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಿ: ಶಾಸಕ ಜೆ.ಟಿ.ಪಾಟೀಲ
Do yoga daily to improve your health: MLA J.T. Patil
ಬೀಳಗಿ 21: ಯೋಗ ಮನುಷ್ಯನಿಗೆ ಅತ್ಯವಶ್ಯವಾಗಿದ್ದು, ಸರ್ವ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಶ್ರೇಷ್ಠವಾದದ್ದು. ಯೋಗದಿಂದ ಸರ್ವರೋಗ ಕಳೆಯಬಹುದು. ನಿತ್ಯ ಯೋಗ ಮಾಡಿ ಆರೋಗ್ಯ ಸಂಪತ್ತು ವೃದ್ಧಿಸಿಕೊಳ್ಳಿ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಇಲ್ಲಿಯ ಬೀಳಗಿ ಕ್ರಾಸ್ (ಹೆಗ್ಗೂರ) ಸರಕಾರಿ ಪ್ರೌಢ ಶಾಲೆ ಮೈದಾನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಲಯ ಸಹಯೋಗದಲ್ಲಿ 11ನೇ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗವನ್ನು ಶಾಲೆಗಳಲ್ಲಿ ಪ್ರತಿದಿನವೂ ಮಾಡಬೇಕು. ಮಕ್ಕಳಲ್ಲಿ ಯೋಗದ ಜಾಗೃತಿ ಮೂಡಿಸಿ ಅವರನ್ನು ಯೋಗ ಪರಿಣಿತರನ್ನಾಗಿ ಮಾಡುವದು ಶಿಕ್ಷಕರ ಕರ್ತವ್ಯವಾಗಬೇಕು. ಶಿಕ್ಷಕ ವೃತ್ತಿ ಪವಿತ್ರವಾದ ಸೇವೆ. ದೇಶವನ್ನು ಕಟ್ಟುವಂತ, ಆಳುವಂತ ಇಂದಿನ ಪಿಳಿಗೆಗೆ ಪರಿಸರ ಪ್ರೇಮ, ದೇಶ ಪ್ರೇಮ ಹಾಗೂ ಜಾತ್ಯಾತೀತ ಮನೋಭಾವವನ್ನು ಬೆಳೆಸಬೇಕು. ಜಾತಿ ಪದ್ಧತಿ ಮಾನವ ನಿರ್ಮಿತ, ಅದಕ್ಕಾಗಿ ಮಕ್ಕಳಲ್ಲಿ ಜಾತಿ, ಮತ, ಭೇದಗಳನ್ನು ಬಿತ್ತಬೇಡಿ. ಅವರಲ್ಲಿ ಸಮಯ ಪ್ರಜ್ಞೆ ಬೆಳೆಸಬೇಕು. ಇಂದು ಪ್ರಕೃತಿಯಲ್ಲಿ ಪರಿಸರ ನಾಶವಾಗಿ ಸಮತೋಲನ ಕಳೆದುಕೊಂಡಿದೆ. ಕಾರಣ ಮಾನವನ ವಿಕೃತಿಗೆ ಅರಣ್ಯ ನಾಶ, ಮರಗಳ ನಾಶ ಅಧಿಕವಾಗಿದೆ. ಮಕ್ಕಳಿಗೆ ಪರಿಸರದ ಜಾಗೃತಿ ಮಾಡಬೇಕಾಗಿದೆ. 2013ರಲ್ಲಿ ಪ್ರತಿ ಶಾಲೆಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳ ಪಾಲನೆ, ಪೋಷನೆ ಮಾಡಿದರ ಫಲವಾಗಿ ಇಂದು ನಮ್ಮ ಶಾಲೆಗಳ ಆವರಣ ಹರಿಸಿನಿಂದ ಕಂಗೊಳಿಸುತ್ತಿವೆ ಎಂದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸತ್ಯಪ್ಪ ಮೇಲ್ನಾಡ್, ಹೆಗ್ಗೂರ ಗ್ರಾಪಂ ಅಧ್ಯಕ್ಷೆ ರೇಣುಕಾ ಪವಾರ್, ಪಪಂ ಸದಸ್ಯರಾದ ಪಡಿಯಪ್ಪ ಕರಿಗಾರ, ರಾಜು ಭೋರ್ಜಿ, ತಾಪಂ ಮಾಜಿ ಅಧ್ಯಕ್ಷ ಶ್ರೀಶೈಲ್ ಸೂಳಿಕೇರಿ, ಜಿಪಂ ಮಾಜಿ ಅಧ್ಯಕ್ಷ ಯಮನಪ್ಪ ರೊಳ್ಳಿ, ಗ್ಯಾರಂಟಿ ಯೋಜನೆ ಸಮಿತಿ ತಾಲೂಕಾ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ತಹಶೀಲ್ದಾರ ವಿನೋದ್ ಹತ್ತಳ್ಳಿ, ತಾಪಂ ಇಒ ಎಸ್.ಎಸ್.ಪಾಟೀಲ್, ಸಿಪಿಐ ಹಣಮಂತ ಸಣಮನಿ, ಬಿಇಒ ಆರ್.ಆರ್.ಆದಾಪೂರ, ಶಿವಾನಂದ ಮಾದರ, ಯೋಗ ಗುರುಗಳಾದ ಟಿ.ಎಂ.ಕಟ್ಟಿಮನಿ, ಎಸ್.ವ್ಹಿ.ಗೌಡರ್, ಮಂಜುಳಾ ಪಾಟೀಲ್ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 