ಇಂದು ಯರಗಟ್ಟಿಯಲ್ಲಿ ಜಿಲ್ಲಾ ಮಟ್ಟದ ಪ್ರಜಾಸೇವೆ ಅಂದೋಲನ ಸಭೆ

ಇಂದು ಯರಗಟ್ಟಿಯಲ್ಲಿ ಜಿಲ್ಲಾ ಮಟ್ಟದ ಪ್ರಜಾಸೇವೆ ಅಂದೋಲನ ಸಭೆ District-level 'Prajaseve Andolana' (Public Service Movement) meeting in Yaragatti today


ಯರಗಟ್ಟಿ 18:  ರಾಜ್ಯ ಸರ್ಕಾರದ ಸೂಚನೆಯನ್ವಯ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಸೂಕ್ತ ಪರಿಹಾರ ನೀಡುವ ಉದ್ದೇಶ ದಿಂದ ಸೆಪ್ಟೆಂಬರ 19 ರಂದು ಶನಿವಾರ ಯರಗಟ್ಟಿಯ ಶ್ರೀಶೈಲ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ "ಪ್ರಜಾಸೇವೆ" ಆಂದೋಲನ ಸಭೆಯನ್ನು ಮರು ನಿಗದಿ ಪಡಿಸಲಾಗಿದೆ. ಸಭೆಯಲ್ಲಿ ಸ್ಥಳೀಯ ಶಾಸಕರು ಉಪಸ್ಥಿತರಿರಲಿದ್ದು, ಯರಗಟ್ಟಿ/ಸವದತ್ತಿ ತಾಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಹವಾಲು ಸಲ್ಲಿಸಿ ಸರ್ಕಾರದ ವಿವಿಧ ಯೋಜನೆಗಳ ಸವಲತ್ತು ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಈ ವೇಳೆ ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಕಿರಿಯ ತಾಂತ್ರಿಕ ಅಭಿಯಂತರಕ ವೆಂಕಟೇಶ ಕಾಮಣ್ಣವರ, ಕಂದಾಯ ನೀರೀಕ್ಷಕ ವಾಯ್‌. ಎಫ್‌. ಮುರ್ತೇನ್ನವರ, ಗ್ರಾಮ ಆಡಳಿತಾಧಿಕಾರಿ ಎಲ್ ಬಿ ದಳವಾಯಿ ಸೇರಿದಂತೆ ಅನೇಕ ಇದ್ದರು.